ಸ್ಯಾಂಡಲ್‌ವುಡ್‌ನಲ್ಲಿ ಒಂದು ಫ್ರೆಷ್ ಸಿನಿಮಾ ಫ್ರೆಷ್ ಜೋಡಿಯನ್ನು ಸ್ಕ್ರೀನ್ ಮೇಲೆ ನೋಡೋಕೆ ಸಿನಿ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಬಹುಷಃ ಆ ಫ್ರೆಷ್ ಜೋಡಿಯನ್ನು ತೆರೆ ಮೇಲೆ ನೋಡೋ ಆ ದಿನ ಹತ್ತಿರವಾಗ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಒಂದು ಫ್ರೆಷ್ ಸಿನಿಮಾ ಫ್ರೆಷ್ ಜೋಡಿಯನ್ನು ಸ್ಕ್ರೀನ್ ಮೇಲೆ ನೋಡೋಕೆ ಸಿನಿ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಬಹುಷಃ ಆ ಫ್ರೆಷ್ ಜೋಡಿಯನ್ನು ತೆರೆ ಮೇಲೆ ನೋಡೋ ಆ ದಿನ ಹತ್ತಿರವಾಗ್ತಿದೆ. ಹೌದು.. ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ 'ಗೌರಿ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
ಗೌರಿ ಸಿನಿಮಾದ ಇಲ್ಲೀವರೆಗೆ ಬಿಡುಗಡೆಯಾದ ಎಲ್ಲಾ ಹಾಡುಗಳು ಒಂದಲ್ಲ ಒಂದು ರೀತಿ ವಿಭಿನ್ನ ವಾಗಿವೆ. ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ "ಗೌರಿ" ಚಿತ್ರದ ಮೊದಲ ಹಾಡು ಚಂದನ್ ಶೆಟ್ಟಿ ಗಾಯನದ ಟೈಮ್ ಬರುತ್ತೆ ಹಾಡು ರಿಲೀಸ್ ಆಗಿತ್ತು. ಹಾಡು ಕೇಳಿದವ್ರೆಲ್ಲಾ.. ನಂಗೂ ಟೈಮ್ ಬರುತ್ತೆ ಅನ್ನೋಕೆ ಶುರು ಮಾಡಿದ್ರು. ಆಲ್ ಇಂಡಿಯಾ ಮ್ಯೂಸಿಕ್ ಲಿಸ್ಟ್ನಲ್ಲಿ ಗೌರಿ ಸಿನಿಮಾದ ‘ಧೂಳ್ ಎಬ್ಬಿಸಾವ..’ ಹಾಡು ಸಖತ್ ಟ್ರೆಂಡಿಂಗ್ ಆಗಿದ್ದನ್ನು ಮರೆಯುವಂತಿಲ್ಲ.
ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡು ನಿಜಕ್ಕೂ ದೂಳೆಬ್ಬಿಸಿತ್ತು. ಶಿವುಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ ಮತ್ತು ಅನನ್ಯಾ ಭಟ್ ಅವರ ಸುಂದರ ಕಂಠದಲ್ಲಿ ಮೂಡಿಬಂದಿದೆ. `ಗೌರಿ' ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಮತ್ತು ಖ್ಯಾತ ನಟಿ ಸಂಜನಾ ಆನಂದ್ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. 3 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿರುವ ಹಾಡು ಇದಾಗಿದೆ.
ಗೌರಿ ಸಿನಿಮಾದ ಆಕರ್ಷಣೆಯೇ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್. ಇಬ್ಬರ ಜೋಡಿ ತೆರೆಯ ಮೇಲೆ ಆಗ ತಾನೆ ಮುಂಗಾರು ಮಳೆ ಸುರಿದಾಗ ಕಾಣುವ ತಾಜಾ ಪ್ರಕೃತಿಯಂತೆ .ಇದೇ ಸಿನಿಮಾದ ಮುದ್ದಾದ ನಿನ್ನಾ ಹೆಸರೇನೂ..? ಹಾಡಂತೂ ಮುದ್ದು ಮುದ್ದು.. ಕವಿರಾಜ್ ಸಾಹಿತ್ಯ, ನಿಹಾಲ್ ಗಾಯನ ಮತ್ತು ಜೆಸ್ಸಿ ಗಿಫ್ಟ್ ಸಂಗೀತ ಈ ಹಾಡಿಗಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಒಟ್ಟು 5 ಸಂಗೀತ ನಿರ್ದೇಶಕರಿದ್ದಾರೆ. ಸಿನಿಮಾದಲ್ಲಿ ಒಟ್ಟು 7 ಹಾಡುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ.
ಡೀಪ್ ನೆಕ್ ಸ್ಟೈಲಿಶ್ ಗೌನ್‌ನಲ್ಲಿ ಎದೆ ಸೀಳು ಪ್ರದರ್ಶಿಸಿದ ಸಾನ್ಯಾ ಅಯ್ಯರ್: ಬೋಲ್ಡ್ ಫೋಟೊಶೂಟ್ ವೈರಲ್!
ಒಟ್ಟಿನಲ್ಲಿ ಸದ್ಯ ಆಲ್ ಇಂಡಿಯಾ ಮ್ಯೂಸಿಕ್ ಟ್ರೆಂಡಿಂಗ್ ಲೀಸ್ಟ್ ನಲ್ಲಿ ಗೌರಿ ಹಾಡುಗಳು. ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಲಂಕೆಶ್ ಪತ್ರಿಕೆ, ಮೋನಾಲಿಸಾ,ಐಶ್ವರ್ಯ, ದೇವ್ ಸನ್ ಆಫ್ ಮುದ್ದೇಗೌಡ, ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಸನ ಮಾಡಿದ್ದು ಇದೀಗ ಮಗ ಸಮರ್ಜಿತ್ ರನ್ನು ಚಿತ್ರಂಗಕ್ಕೆ ಎಂಟ್ರಿ ಕೊಡಿಸುತ್ತಿದ್ದಾರೆ . 'ಗೌರಿ' ಸಿನಿಮಾ ಆಗಸ್ಟ್ 15 ಸ್ವಾತಂತ್ರ್ಯಾ ದಿನಾಚರಣೆಗೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.. ಮುದ್ದಾದ ಯಂಗ್ ಲವ್ ಸ್ಟೋರಿಯನ್ನೆ ತೆರೆ ಮೇಲೆ ನೋಡೋಕೆ ಎಲ್ಲರೂ ರೆಡಿಯಾಗಿ.