ರೂಪಾ ಅಯ್ಯರ್ ಸರೋಗಸಿ ಮೂಲಕ ನಾಲ್ಕು ಮಕ್ಕಳನ್ನು ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ನಲವತ್ತೆರಡನೇ ವಯಸ್ಸಿನಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸರೋಗಸಿ ಮೂಲಕ ನಾಲ್ಕು ಮಕ್ಕಳನ್ನು ಪಡೆಯುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.
ರೂಪಾ ಅಯ್ಯರ್ ಆಗಾಗ ಒಂದಿಷ್ಟು ವಿಚಾರಗಳಿಗೆ ಚರ್ಚೆಯಲ್ಲಿರುತ್ತಾರೆ. ಸದ್ಯ ಅವರದೊಂದು ಇಂಟರ್‌ವ್ಯೂ ಹೆಚ್ಚೆಚ್ಚು ಜನರನ್ನು ಸೆಳೀತಿದೆ. ಈ ಇಂಟರ್‌ವ್ಯೂನಲ್ಲಿ ಅವರು ಭಾರತೀಯತೆ ಕುರಿತಾಗಿ ಮಾತನಾಡಿದ್ದಾರೆ. ಇವರ ಮಾತಿಗೆ ಸಾಕಷ್ಟು ಪಾಸಿಟಿವ್ ಕಾಮೆಂಟ್‌ಗಳು ಬರುತ್ತಿವೆ. ಆದರೆ ಅದಕ್ಕಿಂತ ಹೆಚ್ಚು ಜನ ಕುತೂಹಲ ಗರಿಗೆದರಿಸಿದ್ದು ಇಂಟರ್‌ವ್ಯೂ ಮಧ್ಯೆ ಅವರು ಆಡಿದ ಒಂದು ಮಾತು. ಅದು ತನಗೆ ಮಕ್ಕಳು ಬೇಕು ಅನ್ನೋದು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ. ಬಹಳ ಮಂದಿ ರೂಪಾ ಅಯ್ಯರ್ ಮಾತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ ನಾಲ್ಕು ಮಕ್ಕಳನ್ನ ಸೊರೊಗೆಸಿ ಮೂಲಕ ಪಡೆಯೋದು ನಿಜಕ್ಕೂ ಸಾಧ್ಯನಾ ಅನ್ನುವ ಮಾತು ಚರ್ಚೆಯಲ್ಲಿದೆ.
ಮಾತಿನ ಭರದಲ್ಲೇನೋ ಹಾಗಂದಿರಬಹುದು, ಆದರೆ ವಾಸ್ತವದಲ್ಲಿ ಇದೆಲ್ಲ ಅಗೋಹೋಗೋ ಮಾತಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ನಲವತ್ತೆರಡನೇ ವಯಸ್ಸಲ್ಲಿ ನಾನು ನಾಲ್ಕು ಮಕ್ಕಳನ್ನು ಮಾಡ್ಕೊಳ್ತೀನಿ, ಅವರನ್ನು ನಮ್ಮಮ್ಮ ನಮ್ಮನ್ನು ಬೆಳೆಸಿದ್ದಕ್ಕಿಂತ ಚೆನ್ನಾಗಿ ಬೆಳೆಸ್ತೀನಿ ಅಂದಿದ್ದು ಸಾಕಷ್ಟು ವೈರಲ್ ಆಗಿದೆ.
ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ ನಟಿ ತಾರಾ, ದುಬಾರಿ ಬೆಲೆ ಕಾರಿನಲ್ಲಿದೆ ಹಲವು ವಿಶೇಷತೆ!
ಇನ್ನು ರೂಪಾ ಅಯ್ಯರ್ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟವರು. ಬಳಿಕ ಬರಹಗಾರರಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡವರು. ಎಷ್ಟೋ ಮಂದಿ ಬಣ್ಣದ ಜಗತ್ತಿಗೆ ಬಂದ ಮೇಲೆ ತಮ್ಮ ಇತರೆ ಹವ್ಯಾಸಗಳನ್ನು ಮರೆತು ಬಿಡ್ತಾರೆ. ಆದರೆ ರೂಪಾ ಹಾಗಲ್ಲ. ಸಿನಿಮಾ ಜತೆಗೆ ಓದು, ಅಧ್ಯಾತ್ಮ ರಾಜಕೀಯದಲ್ಲಿಯೂ ತೊಡಗಿಸಿಕೊಂಡವರು. ಅಂದಹಾಗೆ 1998ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ A ಸಿನಿಮಾದಲ್ಲಿ ರೂಪಾ ನಟಿಸಿದ್ದರು. ಅದಾದ ಬಳಿಕ ಮ್ಯಾಜಿಕ್ ಅಜ್ಜಿ, ಧಾತು, ಮುಖಪುಟ ಸಿನಿಮಾದಲ್ಲಿಯೂ ನಟಿಸುವುದರ ಜತೆಗೆ ಆ ಚಿತ್ರದ ನಿರ್ದೇಶನವನ್ನೂ ಮಾಡಿದ್ದರು.
ಈಗ ಇದೇ ರೂಪಾ ಅಯ್ಯರ್ ಸಾಂಸಾರಿಕ ಜೀವನದಲ್ಲಿ ದೊಡ್ಡ ನಿರ್ಧಾರದ ಬಾಗಿಲು ಬಡಿಯಲು ಮುಂದಡಿ ಇರಿಸಿದ್ದಾರೆ. 2014ರಲ್ಲಿ ಸಂಬಂಧಿಕರ ಮನೆಯ ಹುಡುಗನಾಗಿದ್ದ ಗೌತಮ್ ಶ್ರೀನಿವಾಸ್ ಅವರನ್ನು ರೂಪಾ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರವನ್ನು ಮುಂದೂಡಿದ್ದ ಈ ದಂಪತಿ, ಇದೀಗ ಮಕ್ಕಳನ್ನು ಪಡೆಯಲು ಮುಂದಾಗಿದ್ದಾರೆ ಅದು ಸರೊಗೆಸಿ ಮೂಲಕ. ಇಷ್ಟೇ ಆದರೆ ಪರವಾಗಿರ್ತಿರಲಿಲ್ಲ. ರೂಪಾ ಅಯ್ಯರ್ ಈ ಬಗ್ಗೆ ಮಾತನಾಡುತ್ತಾ, 'ನಾನೀಗ ಸರೋಗಸಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ನಮ್ಮ ಅಮ್ಮನೇ ಏನೂ ಇಲ್ಲದಿದ್ದಾಗ ಮೂರು ಮಕ್ಕಳನ್ನು ಬೆಳೆಸಿದ್ದಾರೆ. ನಾನೀಗ ನಾಲ್ಕು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಳ್ಳಲು ಪ್ಲಾನ್ ನಡೆಯುತ್ತಿದೆ. ಈಗಾಗಲೇ ಡಾಕ್ಟರ್ ಜತೆಗೂ ಮಾತುಕತೆ ನಡೆದಿದೆ' ಎಂದಿದ್ದಾರೆ.
ಹೀರೋಯಿನ್ ಕೈಗೆ ಉಗಿದು ಓಡುತ್ತಿದ್ದ ಅಮೀರ್‌ಖಾನ್! ಇದ್ಯಾಕಂತೆ ಗೊತ್ತಾ?
ರೂಪಾ ಅಯ್ಯರ್ ತುಂಬು ಕುಟುಂಬದಿಂದ ಬಂದ ಹೆಣ್ಣು ಮಗಳು. ಆಚಾರ ವಿಚಾರದ ಜತೆಗೆ ಹೆಚ್ಚು ಓದಿಕೊಂಡವರು. ಇಂಥಾ ವ್ಯಕ್ತಿ ಇದೀಗ ಸರೊಗೆಸಿ ಮೂಲಕ ನಾಲ್ಕು ಮಕ್ಕಳನ್ನು ಮಾಡಿಕೊಳ್ಳುತ್ತೇನೆ ಎಂದಿರುವುದು ಸಹಜವಾಗಿಯೇ ಹಲವರ ಹುಬ್ಬೇರಿಸಿದೆ. ಸರೊಗೆಸಿ ಮೂಲಕ ನಾಲ್ಕು ಮಕ್ಕಳನ್ನು ಪಡೆಯುವುದು ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ. ಬಾಲಿವುಡ್, ಹಾಲಿವುಡ್‌ನಲ್ಲಿ ಸಾಕಷ್ಟು ಮಂದಿ ಸರೊಗೆಸಿ ಮೂಲಕ ಮಗು ಪಡೆದಿದ್ದಾರೆ. ಭಾರತದಲ್ಲೂ ಅನೇಕರು ಬಾಡಿಗೆ ಗರ್ಭದಿಂದ ಮಗು ಪಡೆದಿದ್ದಾರೆ. ಆದರೆ ಗರಿಷ್ಠ ಎಂದರೆ ಎರಡು ಮಗು ಮಾಡಿಕೊಂಡ ಉದಾಹರಣೆ ಸಿಗುತ್ತದೆ. ಆದರೆ ರೂಪಾ ಅಯ್ಯರ್ ನಾಲ್ಕು ಮಕ್ಕಳನ್ನು ಮಾಡುತ್ತೇನೆ ಅಂದಾಗ ಇದು ಹೇಗೆ ಸಾಧ್ಯ ಎಂದೇ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಇದನ್ನು ರೂಪಾ ಅಯ್ಯರ್ ಹೇಗೆ ಸಾಧ್ಯವಾಗಿಸುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.