ಅಂಬರೀಶ್ ತಿಥಿ ದಿನವೇ ಸೊಸೆಗೆ ಡೆಲಿವರಿ ಡೇಟ್‌ ಇತ್ತು, ತಿಂಗಳು ಆದ್ಮೇಲೆ ಮಗುನಾ ಹೊರ ಕರ್ಕೊಂಡು ಬರ್ತೀವಿ: ಸುಮಲತಾ

By Vaishnavi Chandrashekar  |  First Published Nov 25, 2024, 4:07 PM IST

ಮಗನ ಜೊತೆ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ ಅಭಿಷೇಕ್. 6ನೇ ಪುಣ್ಯಸ್ಮರಣೆ ದಿನ ಮೊಮ್ಮಗನ ಬಗ್ಗೆ ಮಾತನಾಡಿದ ಸುಮಲತಾ. 


ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡ್ಡಪ್ಪ ದಂಪತಿ ನವೆಂಬರ್ 12ರಂದು ಗಂಡು ಮಗುವನ್ನು ಬರ ಮಾಡಿಕೊಂಡರು. ಅಂಬಿ ಮನೆಯಲ್ಲಿ ಸಖತ್ ಸಂಭ್ರಮ ಮನೆ ಮಾಡಿದ್ದು, ಅಜ್ಜಿ ಸುಮಲತಾ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಾಪು ನೋಡಲು ಸೇಮ್ ಅಂಬರೀಶ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದರು ಆದರೆ ಫ್ಯಾಮಿಲಿಯಿಂದ ಯಾವುದೇ ಸ್ಪಷ್ಟನ ಮಾಹಿತಿ ಇರಲಿಲ್ಲ. ನವೆಂಬರ್ 24ರಂದು ಅಂಬರೀಶ್‌ರವರ 6ನೇ ಪುಣ್ಯಸ್ಮರಣೆ ನಡೆಯಿತ್ತು, ಈ ಫ್ಯಾಮಿಲಿ ಮೊಮ್ಮಗ ಮತ್ತು ಸೊಸೆ ಬಗ್ಗೆ ಸುಮಲತಾ ಮಾತನಾಡಿದ್ದಾರೆ.

'ಅಂಬರೀಶ್‌ ಅವರ 6ನೇ ಪುಣ್ಯಸ್ಮರಣೆ....ನಮ್ಮಲ್ಲಿ ನಮ್ಮ ಕುಟುಂಬದವರು ಮತ್ತು ಅಭಿಮಾನಿಗಳಲ್ಲಿ ನಮ್ಮ ಜೊತೆನೇ ಇರುತ್ತಾರೆ ಅನ್ನೋ ಭಾವನೆಯಲ್ಲಿ ನಾವು ಈ 6 ವರ್ಷಗಳನ್ನು ಕಳೆದಿದ್ದು. ಅವರ ನೆನಪು ಎಲ್ಲಾ ಕಡೆನೂ ನಮ್ಮ ಜೊತೆ ಇರುತ್ತದೆ' ಸುಮಲತಾ ಮಾತನಾಡಿದ್ದಾರೆ.

Tap to resize

Latest Videos

'ಎಕ್ಸ್'ಗೆ ಎಕ್ಸ್​ಪೆನ್ಸಿವ್ ಗಿಫ್ಟ್ ಕೊಟ್ಟಿದ್ರಂತೆ ಸಮಂತಾ;ಕಿಚ್ಚು ಹಚ್ಚಿದ ಸಮಂತಾ ಬೋಲ್ಡ್ ಸ್ಟೇಟ್​ಮೆಂಟ್!

'ಈ ವರ್ಷ ನಮಗೆ ತುಂಬಾ ಸ್ಪೆಷಲ್..ಎಷ್ಟೋ ವರ್ಷಗಳಿಂದ ಕಾಯುತ್ತಿದ್ವಿ..ಅಂಬರೀಶ್ ಅವರೇ ಮತ್ತೆ ನಮಗೆ ವಾಪಸ್ ಬಂದಹಾಗೆ ಇದೆ. ಮಗು ನೋಡಲು ಅಂಬರೀಶ್‌ ಅವರಂತೆ ಇದೆ ಎಂದು ಎಲ್ಲರಿಗೂ ಅನಿಸುತ್ತಿದೆ ಮತ್ತೊಂದು ವಿಶೇಷ ಏನೆಂದರೆ ನನ್ನ ಸೊಸೆಗೆ ಕೊಟ್ಟಿದ್ದ ಡೆಲಿವರಿ ಡೇಟ್‌ ಕೂಡ 24 ನವೆಂಬರ್ ಆಗಿತ್ತು. ನಮ್ಮೆಲ್ಲರಿಗೂ ದೃಢ ವಿಶ್ವಾಸ ಏನೆಂದರೆ ಅಂಬರೀಶ್ ಅವರೇ ಹುಟ್ಟಿ ಬಂದಿರುವುದು ಎಂದು. ಮಗುಗೆ ಯಾವ ಹೆಸರು ಇಡಬೇಕು ಎಂದು ಇನ್ನೂ ನಿರ್ಧಾರ ಮಾಡುತ್ತಿದ್ದಾರೆ..ಏನೇ ಹೆಸರು ಇಟ್ಟರೂ ಅಂಬರೀಶ್ ಅವರ ಹೆಸರು ಸೇರಿಸುತ್ತೀವಿ' ಎಂದು ಸುಮಲತಾ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಡ್ರೆಸ್‌ ಮಾಡಿಕೊಳ್ಳುತ್ತಿರುವ ಫೋಟೋ ಲೀಕ್

'ತಾಯಿ ಅವೀವಾ ಮತ್ತು ಮಗು ಇಬ್ಬರೂ ತುಂಬಾ ಚೆನ್ನಾಗಿ ಇದ್ದಾರೆ. ಅಭಿಷೇಕ್‌ಗೆ ಇದು ತುಂಬಾ ಹೊಸ ಅನುಭವ ಮಗುವನ್ನು ಒಂದು ನಿಮಿಷವೂ ಬಿಟ್ಟು ಇರಲಾಗದು. ನಮ್ಮಲ್ಲಿ ಮೊದಲು ದೇವರಿಗೆ ಪೂಜೆ ಸಲ್ಲಿಸಿ ಆಮೇಲೆ ಹೊರಗಡೆ ಕರೆದುಕೊಂಡು ಬರಬೇಕು ಹೀಗಾಗಿ ಒಂದು ತಿಂಗಳು ಕಳೆದ ಮೇಲೆ ಹೊರಗಡೆ ಕರೆದುಕೊಂಡು ಬರುವುದು' ಎಂದಿದ್ದಾರೆ ಸುಮಲತಾ. 

click me!