
ಬೆಂಗಳೂರು (ಆ.05) ನಟಿ ರಮ್ಯಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಮ್ಯಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಟ್ಟ ಕಮೆಂಟ್ ಮಾಡಿ ವಿಕೃತಿ ಮೆರೆದ ಒಬ್ಬೊಬ್ಬರನ್ನೇ ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ನಟಿ ರಮ್ಯಾ ಸ್ಟೈಲಿಶ್ ಫೋಟೋ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿರುವ ನಟಿ ರಮ್ಯಾ ಕಮೆಂಟ್ ನಿರ್ಬಂಧಿಸಿದ್ದಾರೆ.
ನಟಿ ರಮ್ಯಾ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಬ್ಲಾಕ್ ಜರ್ಕಿನ್ ಓವರ್ ಕೋಟ್ ರೀತಿಯ ಡ್ರೆಸ್ ಧರಿಸಿದ್ದಾರೆ. ಇದಕ್ಕೆ ತಕ್ಕಂತೆ ಬ್ಲಾಕ್ ಪ್ಯಾಂಟ್, ಹೀಲ್ಸ್ ಶೂ ಧರಿಸಿ ಫೋಸ್ ನೀಡಿದ್ದಾರೆ. ನಟಿ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಈಗಲೂ ಸ್ಯಾಂಡಲ್‌ವುಡ್ ಕ್ವೀನ್ ಅನ್ನೋದರಲ್ಲಿ ಎರಡು ಮಾತಿಲ್ಲ. ಎರಡು ಫೋಟೋವನ್ನು ನಟಿ ರಮ್ಯಾ ಹಂಚಿಕೊಂಡಿದ್ದಾರೆ. ಗ್ಲಾಮರಸ್ ಫೋಟೋ ಎಲ್ಲರನ್ನು ಆಕರ್ಷಿಸುತ್ತಿದೆ.
ಸೋಶಿಯಲ್ ಮೀಡಿಯಾ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ನಟಿ ರಮ್ಯಾ ಈ ಸ್ಟೈಲಿಶ್ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಕೆಟ್ಟ ಕಮೆಂಟ್‌ಗಳಿಂದ ಬೇಸತ್ತಿರುವ ರಮ್ಯಾ, ತಮ್ಮ ಫೋಟೋಗೆ ಕಮೆಂಟ್ ಮಾಡುವುದನ್ನೇ ನಿರ್ಬಂಧಿಸಿದ್ದಾರೆ. ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಹಲವರು ಕೆಟ್ಟ ಕಮೆಂಟ್ ಹಾಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಕೆಲವರು ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.
ನಟಿ ರಮ್ಯಾ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟಿ ರಮ್ಯಾಗೆ ಕೆಟ್ಟ ಕಮೆಂಟ್, ಬೆದರಿಕೆ ಹಾಕಿದ ಸಂಬಂಧ 40ಕ್ಕೂ ಹೆಚ್ಚು ಮಂದಿಯ ಐಪಿ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ನಾಲ್ವರನ್ನ ಈಗಾಗಲೇ ಬಂಧಿಸಲಾಗಿದೆ. ಇನ್ನು 15 ಮಂದಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ. ಪ್ರಕರಣ ಗಂಭೀರವಾಗುತ್ತದ್ದಂತೆ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ನಟ ದರ್ಶನ್ ಅಭಿಮಾನಿಗಳು ಇದೀಗ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಪೊಲೀಸರು ಐಪಿ ಅಡ್ರೆಸ್ ಪತ್ತೆ ಹಚ್ಚಿದ್ದು, ಕಮೆಂಟ್ ಮಾಡಿದ ಪ್ರತಿಯೊಬ್ಬರಿಗೆ ತಲೆನೋವು ಹೆಚ್ಚಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.