ಬೈಕ್ ಲಾರಿ ಅಪಘಾತದಲ್ಲಿ ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೇಜರ್ ಸಾವು

Published : Jun 09, 2022, 11:57 AM ISTUpdated : Jun 09, 2022, 12:30 PM IST
 ಬೈಕ್ ಲಾರಿ ಅಪಘಾತದಲ್ಲಿ ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೇಜರ್ ಸಾವು

ಸಾರಾಂಶ

ರಸ್ತೆ ಅಪಘಾತದಲ್ಲಿ ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೇಜರ್ ನಿಧನ.

ತುಮಕೂರು : ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿತ್ರ ನಟ ಸುದೀಪ್ ಒಡೆತನದ ಕಿಚ್ಚನ ಹಳ್ಳಿಮನೆ ಹೋಟೆಲ್‌ನ ಮ್ಯಾನೇಜರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ಆಲಪ್ಪನಗುಡ್ಡೆ ಸಮೀಪ ಬುಧವಾರ ರಾತ್ರಿ ಅಪಘಾತ ಸಂಭವಿಸಿದೆ. 

ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯದ ನಿವಾಸಿ ಮಂಜುನಾಥ್ ಮೃತ ದುರ್ದೈವಿ. 33 ವರ್ಷದ ಮಂಜುನಾಥ್  ವಿವಾಹಿತ. ಈತ ಕಿಚ್ಚನಹಳ್ಳಿ ಮನ ಹೋಟಲ್‌ನಲ್ಲಿ ಮ್ಯಾನರೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮಂಜುನಾಥ್ ಕುಣಿಗಲ್ ಕಡೆಯಿಂದ ಕಿಚ್ಚನ ಹಳ್ಳಿಮನೆ ಕಡೆಗೆ ಬೈಕ್ ನಲ್ಲಿ ಹೊಗುತ್ತಿದ್ದಾಗ ಎಡೆಯೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಗ್ಯಾಸ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ , ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ .

ಎಡೆಯೂರಿಗೆ ಹೋಗುವ ಮಾರ್ಗದಲ್ಲಿ ಕಿಚ್ಚನ ಹಳ್ಳಿ ಮನೆ ಹೋಟೆಲ್‌ ಇದೆ. ಈ ಮಾರ್ಗದಲ್ಲಿ ಸಂಚಾರಿಸುವ ಪ್ರತಿಯೊಬ್ಬ ಸಿನಿ ಅಭಿಮಾನಿ ಇಲ್ಲಿ ನಿಲ್ಲಿಸಿ ಕಾಫಿ, ಟೀ ಭೋಜನೆ ಮಾಡಿ ಪ್ರಯಾಣ ಮುಂದುವರೆಸುತ್ತಾರೆ. ಹೋಟಲ್‌ ನೋಡಲು ಹಳ್ಳಿ ಶೈಲಿಯಲ್ಲಿದ್ದು ಮ್ಯಾನೇಜರ್ ಮಂಜುನಾಥ್ ಅದ್ಭುತವಾಗಿ ಮೇನ್‌ಟೈನ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಹೋಟೆಲ್‌ನಲ್ಲಿ ಸ್ಥಳೀಯರಿಗೆ ಕೆಲಸ ಮಾಡಲು ಅವಕಾಶ ನೋಡಿದ್ದಾರೆ. 

ಅಪಘಾತ ತಡೆಯಲು ಸೋಲಾರ್ ಡಿಲೈನೇಟರ್‌ ಅಳವಡಿಕೆ:

ತೀ ವೇಗದ ಚಾಲನೆ, ಸೂಚನಾ ಫಲಕಗಳ ನಿರ್ಲಕ್ಷ್ಯ, ಟ್ರಾಫಿಕ್ ನಿಯಮ ಉಲ್ಲಂಘನೆಗಳಿಂದ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿನ ಅಪಘಾತ ತಡೆಗಟ್ಟಲು ಇದೀಗ ಸಂಚಾರಿ ಪೊಲೀಸರು ವಿಶೇಷ ಗಮನ ಹರಿಸಿದ್ದಾರೆ. ಇದಕ್ಕಾಗಿ  ವಿವಿಧ ಜಂಕ್ಷನ್‌ಗಳಲ್ಲಿ ರಸ್ತೆಗಳಲ್ಲಿ ಸೋಲಾರ್ ಡಿಲೈನೇಟರ್‌ಗಳ ಅಳವಡಿಕೆ ಮತ್ತು ರಸ್ತೆ ಪಕ್ಕದಲ್ಲಿ ಹಾಗೂ ಸಿಗ್ನಲ್ ಗಳ ಬಳಿ ಕೆಂಪು, ಹಳದಿ ಮತ್ತು ಬಿಳಿ ರೇಡಿಯಂ ಸ್ಟಿಕ್ಕರ್ ಗಳನ್ನ ಅಂಟಿಸಿರುವ ಬೊಲಾರ್ಡ್ ಅಳವಡಿಸಿದ್ದಾರೆ.

Accident ಚಾರ್ ಧಾಮ್ ಯಾತ್ರಾರ್ಥಿಗಳ ಬಸ್ ಅಪಘಾತ, ಕಂದಕ್ಕೆ ಉರುಳಿ 22 ಮಂದಿ ಸಾವು!

ಇದರಿಂದ ರಾತ್ರಿ ವೇಳೆ ಸಂಭವಿಸುತ್ತಿರುವ ಅಪಘಾತಗಳ ಪ್ರಮಾಣ ತಗ್ಗಿಸಲು ಮಹತ್ವದ ಕ್ರಮಕೈೊಳ್ಳಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹೀಗಾಗಿ ನಗರದಲ್ಲಿ ಮಿಡೀಯನ್ ಗಳಿಗೆ ಮಿಟುಕಿಸುವ ಸೋಲಾರ್ ಡಿಲೈನೇಟರ್ ಅಳವಡಿಸಿ ಆರಂಭಿಸಲಾಗಿದೆ. ಹಲವು ಭಾಗಗಳಲ್ಲಿ ಈಗಾಗಲೇ ಈ ಕಾರ್ಯ ಪೂರ್ಣಗೊಂಡಿದೆ. 

ಮದುವೆ ದಿಬ್ಬಣದ ವಾಹನಕ್ಕೆ ಟ್ರಕ್ ಡಿಕ್ಕಿ:

ರಾಜಸ್ಥಾನದ ಬರ್ಮೆರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಎಂಟು ಜನ ಸಾವಿಗೀಡಾಗಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮೆರ್‌ನ ಗುಡಮಲಾನಿ ಬ್ಲಾಕ್‌ನ ಆಲಪುರ ಗ್ರಾಮದ ಬಳಿ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. SUV ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಒಂಭತ್ತು ಜನರು ಮದುವೆ ದಿಬ್ಬಣದ ಭಾಗವಾಗಿದ್ದರು. ಇವರು ಪ್ರಯಾಣಿಸುತ್ತಿದ್ದ ವಾಹನ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್