ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ರಾಗಿಣಿ ದ್ವಿವೇದಿ ವಿಡಿಯೋ ವೈರಲ್!‌

Published : Mar 09, 2025, 10:15 AM ISTUpdated : Mar 09, 2025, 10:18 AM IST
ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ರಾಗಿಣಿ ದ್ವಿವೇದಿ ವಿಡಿಯೋ ವೈರಲ್!‌

ಸಾರಾಂಶ

ನಟಿ ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿಗಳು ಸೆಲ್ಫಿ ತಗೊಳ್ಳಲು ಮುಗಿಬಿದ್ದರು. ಆಗ ಕೈ ಹಿಡಿದು ಎಳೆದ ಅಭಿಮಾನಿಗೆ ರಾಗಿಣಿ ಕೆನ್ನೆಗೆ ಬಾರಿಸಿದ್ದಾರೆ. 

ತಮ್ಮ ನೆಚ್ಚಿನ ಕಲಾವಿದರನ್ನು ನೋಡಿದ ತಕ್ಷಣ ಅಭಿಮಾನಿಗಳು ಫೋಟೋ ತಗೊಳ್ಳಲು ಮುಗಿಬೀಳ್ತಾರೆ, ಹ್ಯಾಂಡ್‌ಶೇಕ್‌ ಮಾಡ್ತಾರೆ, ಇನ್ನೂ ಕೆಲವರು ಮಿತಿ ಮೀರಿ ವರ್ತನೆ ಮಾಡ್ತಾರೆ. ಹೀಗೆ ಅಭಿಮಾನಿಯೋರ್ವರು ಕೈ ಹಿಡಿದು ಎಳೆದಿದ್ದಕ್ಕೆ ರಾಗಿಣಿ ದ್ವಿವೇದಿ ಅವರು ಕೆನ್ನೆಗೆ ಬಾರಿಸಿದ್ದಾರೆ.

ನಿಜಕ್ಕೂ ಏನಾಯ್ತು? 
ಹೌದು, ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ಅಭಿಮಾನಿಗಳು ಫೋಟೋ ತಗೊಳ್ಳಲು ಮುಗಿಬಿದ್ದಿದ್ದಾರೆ. ಆಗ ರಾಗಿಣಿ ಅವರು ಆ ಅಭಿಮಾನಿಯ ಕೆನ್ನೆಗೆ ಬಾರಿಸಿದ್ದಾರೆ. ಆರಂಭದಲ್ಲಿ ರಾಗಿಣಿ ದ್ವಿವೇದಿ ಅವರು ಫ್ಯಾನ್ಸ್‌ಗೆ ಫೋಟೋ ನೋಡಿ, ಮಾತನಾಡಿಸುತ್ತಿದ್ದರು. ಆದರೂ ಓರ್ವ ಫ್ಯಾನ್‌ ವರ್ತನೆ ಮಿತಿಮೀರಿತ್ತು. ಸಿಟ್ಟು ತಡೆದುಕೊಳ್ಳಲಾಗದೆ ರಾಗಿಣಿ ಕೆನ್ನೆಗೆ ಬಾರಿಸಿದ್ದಾರೆ.

ಒಂದು ಸಲ ಗಂಡ ತರುಣ್ ಬರೋದು ಮತ್ತೊಂದ ಸಲ ಹೆಂಡ್ತಿ ಸೋನಲ್‌ ಬರೋದು, ಏನ್ ಸಂಸಾರನೇ ಮಾಡ್ಬಾರ್ದಾ: ಕುರಿ ಪ್ರತಾಪ್

ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ನಟನೆ! 
ಮಧ್ಯಪ್ರದೇಶ ಮೂಲದ ರಾಗಿಣಿ ದ್ವಿವೇದಿ ಈಗ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಕನ್ನಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಅವರಿಂದ ಮಾಡೆಲಿಂಗ್‌ ಲೋಕಕ್ಕೆ ಪರಿಚಿತರಾದ ರಾಗಿಣಿ ದ್ವಿವೇದಿ ಇಂದು ಹೀರೋಯಿನ್‌ ಆಗಿ ಹೆಸರು ಮಾಡಿದ್ದಾರೆ. 2009ರಲ್ಲಿ ʼವೀರಮದಕರಿʼ ಸಿನಿಮಾ ಮೂಲಕ ರಾಗಿಣಿ ದ್ವಿವೇದಿ ಅವರು ಚಿತ್ರರಂಗಕ್ಕೆ ಹೀರೋಯಿನ್‌ ಆಗಿ ಕಾಲಿಟ್ಟರು. ಕಿಚ್ಚ ಸುದೀಪ್‌ ನಟನೆಯ ಈ ಸಿನಿಮಾ ಅವರಿಗೆ ದೊಡ್ಡ ಬ್ರೇಕ್‌ ಕೊಟ್ಟಿತು. ಆ ನಂದ ʼತುಪ್ಪ ತುಪ್ಪʼ ಹಾಡು ಭಾರೀ ಸೌಂಡ್‌ ಮಾಡಿತ್ತು. ಅದಾದ ನಂತರದಲ್ಲಿ ರಾಗಿಣಿ ದ್ವಿವೇದಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

OMG! ಕೇರಳದ ನಟ ಮೋಹನ್‌ ಲಾಲ್‌ ಮನೇಲಿ ರಾಗಿಣಿ ದ್ವಿವೇದಿಗೋಸ್ಕರ ಇಷ್ಟು ಅಡುಗೆ ಮಾಡಿಸಿದ್ರಾ?

ಸಿನಿಮಾಗಳಲ್ಲಿ ಬ್ಯುಸಿ! 
2024ರಲ್ಲಿ ʼಇಮೇಲ್ʼ‌ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ʼಸಂಜು ವೆಡ್ಸ್‌ ಗೀತಾʼ ಸಿನಿಮಾದಲ್ಲಿಯೂ ರಾಗಿಣಿ ನಟಿಸಿದ್ದರು. ಈ ಚಿತ್ರದಲ್ಲಿ ರಾಗಿಣಿ ನಟಿಸಿದ ದೃಶ್ಯಗಳನ್ನು ಕಟ್‌ ಮಾಡಲಾಗಿದೆಯಂತೆ. “ಒಂದು ಪ್ರಮುಖ ಪಾತ್ರವನ್ನು ಕಟ್‌ ಮಾಡಲಾಗಿದೆ. ನನಗೆ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಬಹಳ ಬೇಸರ ಆಗಿದೆ. ತಂಡ ಕೂಡ ನನ್ನ ಜೊತೆ ಏನೂ ಮಾಹಿತಿ ಹಂಚಿಕೊಂಡಿಲ್ಲ” ಎಂದು ರಾಗಿಣಿ ದ್ವಿವೇದಿ ಅವರು ಬೇಸರ ಮಾಡಿಕೊಂಡಿದ್ದರು. ಈ ವಿಷಯವನ್ನು ಅವರು ಮಾಧ್ಯಮವೊಂದರ ಜೊತೆ ಹಂಚಿಕೊಂಡಿದ್ದರು. 

ಮೋಹನ್‌ಲಾಲ್‌ ಜೊತೆಗೆ ರಾಗಿಣಿ ದ್ವಿವೇದಿ ಸಿನಿಮಾ! 
ರಾಜವರ್ಧನ್‌ ನಟನೆಯ ʼಗಜರಾಮʼ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಈ ಹಾಡು ಭಾರೀ ವೈರಲ್‌ ಆಗಿತ್ತು. ರಾಗಿಣಿ ದ್ವಿವೇದಿ ಅವರು ನಟ ಮೋಹನ್‌ಲಾಲ್‌ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಅವರು ಕೇರಳದ ಮೋಹನ್‌ಲಾಲ್‌ ಮನೆಗೆ ಭೇಟಿ ನೀಡಿದ್ದರು, ಅಲ್ಲಿ ಅವರಿಗೆ ಭರ್ಜರಿ ಔತಣ ಕೊಡಲಾಗಿತ್ತಂತೆ. ಇನ್ನು ರಾಗಿಣಿ ದ್ವಿವೇದಿ ಅವರಿಗೋಸ್ಕರ ವಿಧ ವಿಧವಾದ ಔತಣ ರೆಡಿ ಮಾಡಲಾಗಿತ್ತು. ಮೋಹನ್‌ಲಾಲ್‌ ಮನೆಯಲ್ಲಿ ರಾಗಿಣಿ ಕಳೆದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿಯಲಾಗಿದೆ. ಆ ಫೋಟೋಗಳನ್ನು ಮೋಹನ್‌ಲಾಲ್‌ ಅವರೇ ತೆಗೆದಿರೋದು ವಿಶೇಷ ಎನ್ನಬಹುದು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ