
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ ಗೌಡ ಮೊದಲು ಐಟಿ ಕೆಲಸ ಮಾಡುತ್ತಿದ್ದರಂತೆ. ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ಪ್ಯಾನ್ ಇಂಡಿಯಾ ನಟಿಯಾಗಿರುವ ಸಪ್ತಮಿ ಗೌಡ ಹಿಂದೆ ಐಟಿ ಕಂಪನಿಯಲ್ಲಿ ಎಷ್ಟು ಸಂಬಳ ಪಡೆಯುತ್ತಿದ್ದರು? ಯಾಕೆ ಕೆಲಸ ಬಿಟ್ಟಿದ್ದು ಎಂದು ಹಂಚಿಕೊಂಡಿದ್ದಾರೆ.
'ನಾನು ಐಟಿ ಕೆಲಸ ಮಾಡುವಾಗ ನನಗೆ ಅರ್ಥವಾಗಿದ್ದು ಏನು ಅಂದ್ರೆ ಕೆಲಸ ಮಾಡಿಕೊಂಡು ಕ್ರಿಯೇಟಿವ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು. ಆದರೆ ನನ್ನಂಥ ಕೆಟ್ಟ ಉದ್ಯೋಗಿ ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ತಿಂಗಳ ಕೊನೆಯಲ್ಲಿ ವರ್ಷದ ಕೊನೆಯಲ್ಲಿ ರಿಪೋರ್ಟ್ ಮಾಡಬೇಕು ಅಲ್ಲಿ ನಾನೇ ವರ್ಸ್ಟ್ ಅಂತ ಬರೆದುಕೊಳ್ಳುತ್ತೀನಿ. ಈಗ ಕಂಪನಿ ಸಮಯ 9 ರಿಂದ 10 ಗಂಟೆ ಸಮಯ ಇದ್ದರೆ ನಾನು ಹೋಗುತ್ತಿದಿದ್ದು ಊಟದ ಸಮಯಕ್ಕೆ. ಕ್ಯಾಂಟಿನ್‌ನಲ್ಲಿ ಅರ್ಥ ಗಂಟೆ ಟೈಮ್ ಪಾಸ್ ಮಾಡುತ್ತಿದ್ದೆ. ಅರ್ಥ ಗಂಟೆ ಕೆಲಸ ಮಾಡುತ್ತಿದ್ದೆ ಅಷ್ಟರಲ್ಲಿ ಊಟದ ಸಮಯ ಬರುತ್ತಿತ್ತು. ಊಟ ಮುಗಿಸಿಕೊಂಡು ಬರುತ್ತಿದ್ದೆ. ಕೊಡುತ್ತಿದ್ದ ಕೆಲಸವನ್ನು ಸರಿಯಾಗಿ ಮಾಡಿದರೆ ಮೂರ್ನಾಲ್ಕು ಗಂಟೆಯಲ್ಲಿ ಮುಗಿಸಬಹುದು ಆದರೆ ಯಾಕೆ ಅಷ್ಟು ಸಮಯ ಎಂದು ಅರ್ಥ ಆಗುತ್ತಿರಲಿಲ್ಲ. ನನ್ನಿಂದ ಆ ಕಂಪನಿ ಮತ್ತು ಸಂಸ್ಥೆಗೆ ಯಾವುದೇ ಸಹಾಯ ಉಪಯೋಗ ಆಗಿಲ್ಲ. ನನಗೆ ಒಂದು ಟೈಮ್‌ನಲ್ಲಿ ಬೋನ್ಸ್ ಕೊಟ್ಟರು ಅದನ್ನು ತೆಗೆದುಕೊಂಡು ಕೆಲಸ ಬಿಡುವ ನಿರ್ಧಾರ ಮಾಡಿ ಪೇಪರ್ ಹಾಕಿದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಪ್ತಮಿ ಗೌಡ ಮಾತನಾಡಿದ್ದಾರೆ.
ನನಗೆ ಇಷ್ಟು ಹಣ ಕೊಡಿ ಅಂತ ಕೇಳುವ ಮಟ್ಟಕ್ಕೆ ನಾನು ಬೆಳೆದಿಲ್ಲ, ರಶ್ಮಿಕಾಗೆ ಅವರ ದಾರಿ ಗೊತ್ತು: ರಂಜನಿ ರಾಘವನ್
'ಮನೆಗೆ ಬಂದು ಖುಷಿಯಾಗಿ ಕೆಲಸ ಮಾಡುತ್ತಿಲ್ಲ ಅದಕ್ಕೆ ಬಿಟ್ಟಿದ್ದೀನಿ ಎಂದು ಹೇಳಿ ಸುಮ್ಮನಾದೆ. ಕೆಲಸ ಶುರು ಮಾಡಿದಾಗ ಟ್ರೈನಿಂಗ್ ಸಮಯಲ್ಲಿ 23 ಸಾವಿರ ಅಥವಾ 27 ಸಾವಿರ ಹಣ ಕೊಡುತ್ತಿದ್ದರು. ತುಂಬಾ ಚೆನ್ನಾಗಿ ಖರ್ಚು ಮಾಡುತ್ತಿದ್ದೆ, ಮನೆಗೆ ಕೊಡುವ ಅಗತ್ಯ ಇರಲಿಲ್ಲ. ಆ ಸಮಯಲ್ಲಿ ಹಣ ಸೇವ್ ಮಾಡಬೇಕು ಅನ್ನೋದು ತಲೆಯಲ್ಲಿ ಇರಲಿಲ್ಲ. ಕೊನೆ ತಿಂಗಳಿನಲ್ಲಿ ಕೆಲಸ ಮಾಡಿದಾಗ 60 ಸಾವಿರ ರೂಪಾಯಿ ಹಣವನ್ನು ಬೋನ್ಸ್ ಆಗಿ ಕೊಟ್ಟರು. ನಾಲ್ಕು ತಿಂಗಳು ಕೆಲಸ ಇಲ್ಲ ಅಂದ್ರೂ ಕೈಯಲ್ಲಿ ಹಣ ಇದೆ ಅಂತ ಸುಮ್ಮನೆ ಇದೆ. ಇದಾದ ಮೇಲೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಆಯ್ತು ಅಲ್ಲಿಂದ ನಟನೆ ನನ್ನ ವೃತ್ತಿ ಅಂದುಕೊಂಡೆ. ತುಂಬಾ ಚೆನ್ನಾಗಿ ಓದುತ್ತಿರುವ ನಾನು ಆಕ್ಟಿಂಗ್‌ಗೆ ಬರ್ತೀನಿ ಅಂತ ಮನೆಯಲ್ಲಿ ಅಂದುಕೊಂಡಿರಲ್ಲ' ಎಂದು ಸಪ್ತಮಿ ಗೌಡ ಹೇಳಿದ್ದಾರೆ.
2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.