ಜಟ್ಟ ಗಿರಿರಾಜ್‌ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ನಾಯಕಿ: ಸಿನಿಮಾ ಮಾಡಲು ಕಾದಂಬರಿಯೇ ಸ್ಫೂರ್ತಿಯಂತೆ!

By Govindaraj S  |  First Published May 10, 2024, 6:38 AM IST

ಈ ಸಿನಿಮಾದ ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತಲೂ ಸಿನಿಮಾ ಟೈಟಲ್​ ಮತ್ತು ಕಥೆ ಇನ್ನೂ ಚೆನ್ನಾಗಿದೆ. ಶೀಘ್ರದಲ್ಲೇ ಶೀರ್ಷಿಕೆ ಅನಾವರಣ ಆಗಲಿದೆ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
 


‘ರಾಮರಸ’ ಚಿತ್ರದ ಹೊರತಾಗಿ ಜಟ್ಟ ಗಿರಿರಾಜ್‌ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ರಾಗಿಣಿ ನಟಿಸಲಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಜಟ್ಟ ಗಿರಿರಾಜ್‌ ಕಾದಂಬರಿಯಿಂದ ಸ್ಫೂರ್ತಿ ಪಡೆದು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕೌಂಡಿನ್ಯ ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರಕ್ಕೆ ಕಥೆ ಮಾಡಿದ್ದೇನೆ. ರಾಗಿಣಿ ಜೊತೆ ಇದು ನನ್ನ ಮೊದಲ ಸಿನಿಮಾ’ ಎಂದರು. ರಾಗಿಣಿ, ‘ಚಿತ್ರದ ಫಸ್ಟ್‌ ಲುಕ್‌ನಂತೆಯೇ ಚಿತ್ರದ ಶೀರ್ಷಿಕೆ ಕೂಡ ಸಖತ್ತಾಗಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಿದ್ದೇವೆ’ ಎಂದರು. ರಾಮಕೃಷ್ಣ ನಿಗಾಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

‘ಹರಿವು’ ಸಿನಿಮಾದಿಂದ ನನ್ನ ಸಿನಿಜರ್ನಿ ಪ್ರಾರಂಭ ಆಯಿತು ಎಂದಿರುವ ಗಿರೀಶ್ ವಿ. ಗೌಡ ಅವರು ಕಳೆದ 10 ವರ್ಷಗಳಿಂದ ರಾಗಿಣಿ ದ್ವಿವೇದಿ ಜತೆಗೆ ಸಿನಿಮಾ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ‘ನಿರ್ದೇಶಕ ಬಿ.ಎಂ. ಗಿರಿರಾಜ್ ಒಳ್ಳೆಯ ಕಥೆ ಸಿದ್ಧ ಮಾಡಿಕೊಂಡಿದ್ದಾರೆ. ಈ ಹಿಂದೆ ‘ಹೊಂಬಣ್ಣ’ ಸಿನಿಮಾವನ್ನು ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಅವರು ‘ಸಂಚಲನ ಮೂವೀಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಫಸ್ಟ್ ಲುಕ್ ಬಿಡುಗಡೆ ಆಗಿದೆ‌. ಈ ಸಂದರ್ಭದಲ್ಲೇ ಜಿ.ಜಿ. ಸ್ಟುಡಿಯೋಸ್ ಎಂಬ ಸಂಸ್ಥೆಯನ್ನು ಕೂಡ ಆರಂಭಿಸಿದ್ದೇವೆ‌’ ಎಂದು ಅವರು ಹೇಳಿದ್ದಾರೆ.

Tap to resize

Latest Videos

undefined

ಇಂಡಸ್ಟ್ರಿಯಲ್ಲಿ ಟ್ಯಾಲೆಂಟ್‌ ಇದ್ದರೆ ಮಾತ್ರ ಅವಕಾಶ ಸಿಗುವುದು: ನಟ ರಿಷಿ ಹೀಗೆ ಹೇಳಿದ್ಯಾಕೆ?

‘ಇತ್ತೀಚಿನ ದಿನಗಳಲ್ಲಿ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಆದರೆ ರಿಲೀಸ್​ ಸಮಯದಲ್ಲಿ ಪ್ರಮೋಶನ್ ಹೇಗೆ ಮಾಡಬೇಕು ಎಂಬುದು ತಿಳಿಯದೆ ಕೆಲವು ಚಿತ್ರಗಳು ಸೋತಿವೆ.‌ ನಮ್ಮ‌ ಸಂಸ್ಥೆಯು ಮುಂಬೈನ ಸಂಸ್ಥೆಯೊಂದರ ಜೊತೆಗೆ ಸೇರಿ ಆಸಕ್ತಿ ಇರುವ ಸಿನಿಮಾ ನಿರ್ಮಾಪಕರಿಗೆ ಚಿತ್ರದ ಪ್ರಮೋಷನ್ ಬಗ್ಗೆ ತಿಳಿಸುವ ಕೆಲಸ ಮಾಡಲಿದೆ. ಮೇ 24ರಂದು ರಾಗಿಣಿ ಅವರ ಹುಟ್ಟುಹಬ್ಬ. ಹಾಗಾಗಿ ವಿಶೇಷ ಕವರ್ ಪೇಜ್ ಬಿಡುಗಡೆ ಮಾಡಿದ್ದೇವೆ’ ಎಂದು ಗಿರೀಶ್​ ಹೇಳಿದ್ದಾರೆ. ‘ಈ ಸಿನಿಮಾದ ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತಲೂ ಸಿನಿಮಾ ಟೈಟಲ್​ ಮತ್ತು ಕಥೆ ಇನ್ನೂ ಚೆನ್ನಾಗಿದೆ. ಶೀಘ್ರದಲ್ಲೇ ಶೀರ್ಷಿಕೆ ಅನಾವರಣ ಆಗಲಿದೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

click me!