ಶಮಿಕಾ ಟೆನ್ನಿಸ್ ಪ್ಲೇಯರ್ ಆಗಬೇಕು ಅನ್ನೋದು ಅವರ ಅಪ್ಪನ ಆಸೆ: ಮಗಳ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು

Published : Sep 06, 2024, 03:55 PM IST
ಶಮಿಕಾ ಟೆನ್ನಿಸ್ ಪ್ಲೇಯರ್ ಆಗಬೇಕು ಅನ್ನೋದು ಅವರ ಅಪ್ಪನ ಆಸೆ: ಮಗಳ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು

ಸಾರಾಂಶ

ಸಿನಿಮಾ ಕೆಲಸ ಬಿಟ್ಟು ಬಿಡುವಿನಲ್ಲಿ ರಾಧಿಕಾ ಕುಮಾರಸ್ವಾಮಿ ಏನು ಮಾಡುತ್ತಾರೆ? ಬೈರಾದೇವಿ ಪ್ರಚಾರದಲ್ಲಿ ನಟಿ ಸಖತ್ ಬ್ಯುಸಿ.....  

ಕನ್ನಡ ಚಿತ್ರರಂಗದ ಅದ್ಭುತ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ತಮ್ಮ ಮುಂದಿನ ಸಿನಿಮಾ ಬೈರಾದೇವಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 2002ರಲ್ಲಿ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಮಿಂಚುತ್ತಿರುವ ರಾಧಿಕಾ, 2012ರಲ್ಲಿ ಲಕ್ಕಿ ಚಿತ್ರದ ಮೂಲಕ ನಿರ್ಮಾಪಕಿಯಾದರು. ರಾಕಿಂಗ್ ಸ್ಟಾರ್ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಹೆಗ್ಗಲಿಕೆ ಇದೆ. ಗೌರಿ ಹಬ್ಬದ ದಿನ ಮೊದಲ ಸಲ ತಮ್ಮ ಫ್ಯಾಮಿಲಿ ಬಗ್ಗೆ ರಾಧಿಕಾ ಹಂಚಿಕೊಂಡಿದ್ದಾರೆ. 

ರೀಲ್ ಆಂಡ್ ರಿಯಲ್‌ ಲೈಫ್‌ನಲ್ಲಿ ಬಹಳ ಕಡಿಮೆ ಸ್ನೇಹಿತರನ್ನು ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಫ್ರೀ ಟೈಂನ ಕುಟುಂಬಸ್ಥರ ಜೊತೆ ಕಳೆಯುತ್ತಾರಂತೆ. 'ಸಿನಿಮಾ ಹೊರತು ಪಡಿಸಿ ನಾನು ತುಂಬಾ ಟ್ರ್ಯಾವಲ್ ಮಾಡುತ್ತೀನಿ ಸಮಯಕ್ಕೆ ಸಿಕ್ಕಾಗ ಫ್ಯಾಮಿಲಿ ಜೊತೆ ಇರುತ್ತೀನಿ. ನನ್ನ ಮಗಳು, ತಾಯಿ, ಅಣ್ಣನ ಇಬ್ಬರು ಮಕ್ಕಳು ನನ್ನ ಅತ್ತಿಗೆ....ಹೀಗೆ ನನ್ನದೊಂದು ಸಣ್ಣ ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತೀನಿ. ಜಾಸ್ತಿ ದಿನ ಫ್ರೀ ಇದ್ದಾಗ ದುಬೈ ಹೋಗೋಣ, ಮಾಲ್ಡೀವ್ಸ್ ಹೋಗೋಣ, ಡೆಲ್ಲಿ ಹೋಗೋಣ ಅಂತ ಹೊರಡು ಬಿಡುತ್ತೀನಿ, ಒಂದೆರಡು ದಿನ ರಜೆ ಅಂದ್ರೆ ಲೋಕಲ್ ಟ್ರಿಪ್ ಮಾಡುತ್ತೀನಿ ಕೂರ್ಗ್‌ ಅಲ್ಲಿ ಇಲ್ಲಿ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಧಿಕಾ ಮಾತನಾಡಿದ್ದಾರೆ.

ಬೆಂಗಳೂರಿನ ದುಬಾರಿ ಪಬ್‌ನಲ್ಲಿ ಅಕ್ಕನ ಹುಟ್ಟುಹಬ್ಬ ಆಚರಿಸಿದ ಅಮೃತಾಧಾರೆ ವನಿತಾ ವಾಸು; ಫೋಟೋ ವೈರಲ್!

'ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂದು ಅವರ ತಂದೆ ಮತ್ತು ನನ್ನ ಆಸೆ ಆಗಿತ್ತು, ಈಗ ನಮ್ಮ ಆಸೆಯನ್ನು ಆಕೆ ಪೂರೈಸುತ್ತಿದ್ದಾಳೆ. ಇದುವರೆಗೂ ಅಕೆ ಮೇಲೆ ನಾವು ಯಾವುದೇ ಪ್ರೆಶರ್ ಹಾಕಿಲ್ಲ ಏಕೆಂದರೆ ನನ್ನ ತಂದೆ ತಾಯಿ ಯಾವುದೇ ರೀತಿಯಲ್ಲಿ ಪ್ರೆಶರ್ ಹಾಕಿಲ್ಲ...ಇದೇ ಮಾಡು ಹೀಗೆ ಮಾಡು ಎಂದು ಹೇಳಿಲ್ಲ. ತುಂಬಾ ಒತ್ತಡ ಹಾಕಿದರೆ ಮಕ್ಕಳು ತಪ್ಪು ದಾರಿ ಹಿಡಿಯುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಹೀಗಾಗಿ ಮಗಳಿಗೆ ನಾನು ಪ್ರೆಶರ್ ಹಾಕುತ್ತಿಲ್ಲ. ಅವರ ಅಪ್ಪನಿಗೆ ಒಂದು ಕನಸು ಇತ್ತು...ಮಗಳು ಟೆನ್ನಿಸ್ ಪ್ಲೇಯರ್ ಆಗಬೇಕು ಎಂದು..ಅದೇ ಹಾದಿಯಲ್ಲಿ ಆಕೆ ಅದನ್ನು ಪೂರೈಸುತ್ತಿದ್ದಾಳೆ' ಎಂದು ರಾಧಿಕಾ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್