ಸ್ಟಾರ್ ನಟಿಯಾಗಿದ್ದ ಸೌಂದರ್ಯ ಚುನಾವಣೆ ಪ್ರಚಾರಕ್ಕೆ ಹೊರಟು ಸಾವು ಕಂಡಿದ್ದು ಯಾಕೆ?

By Shriram Bhat  |  First Published Sep 6, 2024, 1:23 PM IST

ಜಕ್ಕೂರು ವಿಮಾನ ನಿಲ್ದಾಣದಿಂದ ಟೇಕ್‌ಅಪ್ ಆದ ಕೆಲವೇ ಕ್ಷಣದಲ್ಲಿ ಹೆಲಿಕಾಪ್ಟರ್‌ ದುರಂತಕ್ಕೀಡಾಗಿ ನಟಿ ಸೌಂದರ್ಯ ಸಾವನ್ನಪ್ಪಿದ್ದಾರೆ. ಅವರ ಜೊತೆ ಅವರ ಅಣ್ಣ ಅಮರನಾಥ್ ಸಹ ಇದ್ದು, ಅವರೂ ಸಹ ತಂಗಿಯ ಜೊತೆ ಬೆಂಕಿಯಲ್ಲಿ ಬೆಂದುಹೋಗಿದ್ದಾರೆ...


ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು ಸೌಂದರ್ಯ ಅಣ್ಣ ಅಮರನಾಥ್. ಹೀಗಾಗಿ ತಮ್ಮ ಮುದ್ದಿನ ತಂಗಿಯನ್ನು ರಾಜಕೀಯವಾಗಿ ಬೆಳೆಸಿ ಎಂಪಿ ಮಾಡಬೇಕೆಂಬ ಕನಸು ಕಂಡಿದ್ದರು ಎನ್ನಲಾಗಿದೆ. ಹೀಗಾಗಿ ಬಿಜೆಪಿ ಪರ ಪ್ರಚಾರಕ್ಕೆ ಆಂಧ್ರ ಪ್ರದೇಶದ ಕರೀಂ ನಗರಕ್ಕೆ ಹೊರಟಿದ್ದರು ನಟಿ ಸೌಂದರ್ಯ. ಬಿಜೆಪಿ ಪರ ಪ್ರಚಾರಕ್ಕೆ ಬರುವಂತೆ ನಟಿ ಸೌಂದರ್ಯ ಅವರಿಗೆ ಬಹಳಷ್ಟು ಪಕ್ಷದಿಂದ ಬಹಳಷ್ಟು ಕರೆ ಇತ್ತು ಎನ್ನಲಾಗಿದೆ. ಜೊತೆಗೆ, ಅಣ್ಣ ಅಮರನಾಥ್ ಒತ್ತಾಸೆ ಕೂಡ ಅದೇ ಆಗಿತ್ತು. 

ಜಕ್ಕೂರು ವಿಮಾನ ನಿಲ್ದಾಣದಿಂದ ಟೇಕ್‌ಅಪ್ ಆದ ಕೆಲವೇ ಕ್ಷಣದಲ್ಲಿ ಹೆಲಿಕಾಪ್ಟರ್‌ ದುರಂತಕ್ಕೀಡಾಗಿ ನಟಿ ಸೌಂದರ್ಯ ಸಾವನ್ನಪ್ಪಿದ್ದಾರೆ. ಅವರ ಜೊತೆ ಅವರ ಅಣ್ಣ ಅಮರನಾಥ್ ಸಹ ಇದ್ದು, ಅವರೂ ಸಹ ತಂಗಿಯ ಜೊತೆ ಬೆಂಕಿಯಲ್ಲಿ ಬೆಂದುಹೋಗಿದ್ದಾರೆ. ಆಪ್ತಮಿತ್ರ ಸಿನಿಮಾ ಶೂಟಿಂಗ್ ಮುಗಿದು ಡಬ್ಬಿಂಗ್ ಹಂತದಲ್ಲಿತ್ತು. ಮಲ್ಲೇಶ್ವರದಲ್ಲಿ ಡಾ ಅಶ್ವಥ್ ನಾರಾಯಣ ಅವರು ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 

Tap to resize

Latest Videos

ಕೊನೆಯ ಕ್ಷಣದಲ್ಲಿ ಕುಂಕುಮ ಕೇಳಿದ್ಯಾಕೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಸೌಂದರ್ಯ..?

ಹೀಗಾಗಿ ನಟಿ ಸೌಂದರ್ಯ ಅವರು 2004ರ ಏಪ್ರಿಲ್ 17 ರಂದು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಲು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರ ಪ್ರದೇಶದ ಕರೀಂ ನಗರಕ್ಕೆ ಹೊರಟಿದ್ದರು ಸೌಂದರ್ಯಾ. ವಿಮಾನ ಮೇಲೇರುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಳಗೆ ಉರಿದು ಬಿತ್ತು. ಸೌಂದರ್ಯಾ ಜತೆಯಲ್ಲೇ ಇದ್ದ ಅಣ್ಣ, ನಿರ್ಮಾಪಕ ಅಮರನಾಥ್ ಸಹ ಮೃತಪಟ್ಟರು.

ಅಂದು ಚುನಾವಣಾ ಪ್ರಚಾರಕ್ಕೆ ಹೊರಟಾಗಲೇ ನಟಿ ಸೌಂದರ್ಯ ಅವರು ಯಾಕೋ ತುಂಬಾ ಚಡಪಡಿಕೆಯಲ್ಲಿ ಇದ್ದರು ಎನ್ನಲಾಗಿದೆ. ಒಮ್ಮೆ ಹೊರಟವರು ಮತ್ತೆ ಮನೆಯೊಳಕ್ಕೆ ವಾಪಸ್ ಬಂದು, ಅತ್ತಿಗೆ ನಿರ್ಮಲಾ ಅವರ ಬಳಿ ಕುಂಕುಮ ಕೇಲಿ ಪಡೆದು ಹಣೆಗೆ ಹಚ್ಚಿಕೊಂಡಿದ್ದರು. ಜತೆಗೆ, ಅತ್ತಿಗೆಯನ್ನು ಹಗ್ ಮಾಡಿ ಹೋಗಿದ್ದರಂತೆ. ಆಗ ನಿರ್ಮಲಾ ಅವರಿಗೆ ಅದೇಕೆ ಹಾಗೆ ಮಾಡಿದ್ದರು ಎಂಬುದು ಅರ್ಥವಾಗಿರಲಿಲ್ಲ.

ಪ್ರೀತಿ ಮತ್ತೆ ಸಂಬಂಧನಾ ಬಲವಂತವಾಗಿ ಇಟ್ಕೊಳ್ಳೋಕೆ ಆಗಲ್ಲ ಅಂದ್ಬಿಟ್ರು ಅದಿತಿ ಪ್ರಭುದೇವ..! 

ಆದರೆ, ದುರಂತದ ಬಳಿಕ ನಟಿ ಸೌಂದರ್ಯ ಅವರು ಅಮದು ನಡೆದುಕೊಂಡ ರೀತಿ, ಯಾವತ್ತೂ ಹೊರಗೆ ಹೊರಟಾಗ ಕುಂಕುಮ 
ಕೇಳದಿದ್ದವರು, ತಬ್ಬಿಕೊಂಡು ಬಾಯ್ ಹೇಳದಿದ್ದವರು ಅಂದು ಮಾಡಿದ್ದಕ್ಕೆ ವಿಶೇಷ ಅರ್ಥ ಗೋಚರಿಸಿತ್ತು. ಅಂದರೆ, ನಟಿ ಸೌಂದರ್ಯ ಅವರಿಗೆ ಮುಂದೆ ನಡೆಯಲಿರುವ ದುರ್ಘಟನೆಯ ಅರಿವಿತ್ತು ಎಂದೇನಲ್ಲ. ಆದರೆ, ಆ ಬಗ್ಗೆ ವಿಧಿಗೆ ಗೊತ್ತಿತ್ತು. ಆ ಕಾರಣಕ್ಕೆ ಸೌಂದರ್ಯ ಅಂದು ವಿಭಿನ್ನವಾಗಿ ನಡೆದುಕೊಂಡಿದ್ದರು ಎನ್ನಬಹುದೇನೋ!

click me!