ರಚಿತಾ ರಾಮ್ 'ಮದುವೆ ವಾರ್ಷಿಕೋತ್ಸವ'ಕ್ಕೆ ಸಿಕ್ತು ರೋಲ್ಸ್ ರಾಯ್ ಕಾರ್ ಗಿಫ್ಟ್, ಹೊರಬಿತ್ತು ಈಗ ಮದುವೆ ಸೀಕ್ರೆಟ್!

Published : Nov 22, 2023, 01:29 PM ISTUpdated : Nov 22, 2023, 01:35 PM IST
ರಚಿತಾ ರಾಮ್ 'ಮದುವೆ ವಾರ್ಷಿಕೋತ್ಸವ'ಕ್ಕೆ ಸಿಕ್ತು ರೋಲ್ಸ್ ರಾಯ್ ಕಾರ್ ಗಿಫ್ಟ್, ಹೊರಬಿತ್ತು ಈಗ ಮದುವೆ ಸೀಕ್ರೆಟ್!

ಸಾರಾಂಶ

ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್ ಮೇಲೆ ಅದೆಷ್ಟೋ ಹುಡುಗರು ಕಣ್ಣಿಟ್ಟು ಕುಳಿತಿದ್ದಾರೆ. ಆದರೆ, ಅವರಿಗೆ ಮದುವೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ ಈ ಸಂಗತಿ ಎಲ್ಲರಿಗೂ ತಿಳಿಯುವ ಸಂದರ್ಭ ಬಂದಿದ್ದು ಮಾತ್ರ ಇತ್ತೀಚೆಗೆ. ವಿಷಯ ಹೊರಬಂದಿದ್ದು ಕೂಡ ಅವರಿಗೆ ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ ಕಾರು ಗಿಫ್ಟ್ ಆಗಿ ಸಿಕ್ಕಿ ಬಳಿಕವಷ್ಟೇ ಎನ್ನಬಹುದು. 

ಸ್ಯಾಂಡಲ್‌ವುಡ್ ಕ್ವೀನ್ ಮತ್ತು ಪದ್ಮಾವತಿ ಯಾರು ಅಂದ್ರೆ ಹೆಚ್ಚಿನ ಎಲ್ಲರೂ ಹೇಳೋದು ನಟಿ ರಮ್ಯಾ ಹೆಸರನ್ನ. ಅದೇ ವೇಳೆ, ರಚಿತಾ ರಾಮ್ ಅವರಿಗೂ ಅವ್ರ ಫ್ಯಾನ್ಸ್ ಇದೇ ಪಟ್ಟ ಕಟ್ಟಿದ್ದಾರೆ. ಯಾಕಂದ್ರೆ ಚಿತ್ರರಂಗದಲ್ಲಿ ರಮ್ಯಾ ನೆಟ್ಟಿದ್ದ ಹಲವು ಮೈಲುಗಲ್ಲುಗಳನ್ನು ನಟಿ ರಚಿತಾ ರಾಮ್ ಕೂಡ ಸ್ಥಾಪಿಸಿದ್ದಾರೆ. ಇಂತಹ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಫಾರ್ಮ್ ಹೌಸ್ ಒಂದರಲ್ಲಿ ತಮ್ಮ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ್ದಾರೆ. ಅದೂ ಕೂಡ ಮೊದಲ ವೆಡ್ಡಿಂಗ್ ಆನಿವರ್ಸರಿ ಅಲ್ಲ, 10ನೇ ವರ್ಷದ್ದು ಎಂಬುದು ಗಮನ ಸೆಳೆಯುತ್ತಿರುವ ಸಂಗತಿ!

ರಚಿತಾ ರಾಮ್ ಇನ್ನೂ ಮದುವೆನೇ ಆಗಿಲ್ಲ. ಅದು ಹೇಗೆ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಮಾಡ್ಕೊಂಡ್ರು ಅಂತ ಆಶ್ಚರ್ಯ ಆಗ್ತಿದೆಯಾ.? ಅಚ್ಚರಿ ಆದ್ರೂ ಸತ್ಯ, ನಟಿ ರಚಿತಾ ರಾಮ್ ತಮ್ಮ 10ನೆಯ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಡಿಂಪಲ್ ಕ್ವೀನ್ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿಗೆ ಅವರಿಗೆ ಐಶಾರಾಮಿ ಕಾರು ರೋಲ್ಸ್ ರಾಯ್ ಕೂಡ ಗಿಫ್ಟ್ ಆಗಿ ಸಿಕ್ಕಿದೆ. ಇವೆಲ್ಲಾ ಪಕ್ಕಾ ನ್ಯೂಸ್‌ಗಳೇ ಆಗಿವೆ. 

ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್ ಮೇಲೆ ಅದೆಷ್ಟೋ ಹುಡುಗರು ಕಣ್ಣಿಟ್ಟು ಕುಳಿತಿದ್ದಾರೆ. ಆದರೆ, ಅವರಿಗೆ ಮದುವೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ ಈ ಸಂಗತಿ ಎಲ್ಲರಿಗೂ ತಿಳಿಯುವ ಸಂದರ್ಭ ಬಂದಿದ್ದು ಮಾತ್ರ ಇತ್ತೀಚೆಗೆ. ವಿಷಯ ಹೊರಬಂದಿದ್ದು ಕೂಡ ಅವರಿಗೆ ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ ಕಾರು ಗಿಫ್ಟ್ ಆಗಿ ಸಿಕ್ಕಿ ಬಳಿಕವಷ್ಟೇ ಎನ್ನಬಹುದು. ಅದೇನೋ ಸರಿ, ಆದರೆ ರಚಿತಾ ರಾಮ್ ಗಂಡ ಯಾರು ಹಾಗಿದ್ದರೆ ಎಂಬುದು ನಿಮ್ಮೆಲ್ಲರ ಪ್ರಶ್ನೆ ಆಗಿರುತ್ತದೆ. ಅದಕ್ಕೆ ಉತ್ತರ ನಟ ಶ್ರೀನಗರ ಕಿಟ್ಟಿ. ಹೌದು, ರಮ್ಯಾ ಮತ್ತು ಶ್ರೀನಗರ ಕಿಟ್ಟಿ 10ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. 

ಡಾಲಿ ಧನಂಜಯ್‌ ಸಿನಿಮಾದಲ್ಲಿ ರಮ್ಯಾ, ಶಿವರಾಜ್‌ ಕುಮಾರ್; ಯಾರಿಗೆ ಜೋಡಿಯಾಗ್ತಾರೆ ಸ್ಯಾಂಡಲ್‌ವುಡ್ ಕ್ವೀನ್?

ಆದರೆ, ಇದು ರಿಯಲ್ ಮದುವೆ ವಾರ್ಷಿಕೋತ್ಸವ ಅಲ್ಲ, ರೀಲ್ ಮದುವೆ. ಅಷ್ಟಕ್ಕೂ ನಟ ಶ್ರೀನಗರ ಕಿಟ್ಟಿ 10 ವರ್ಷದ ಹಿಂದೆ ಮದುವೆ ಆಗಿದ್ದು ನಟಿ ರಮ್ಯಾರನ್ನು. ಆದರೆ, ಇದೀಗ 10ನೇ ವರ್ಷದ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವುದು ನಟಿ ರಚಿತಾ ರಾಮ್ ಜತೆ. ಅಂದರೆ, ನಿಮಗೆ ಅರ್ಥವಾಗುತ್ತೆ, ಇದು 'ಸಂಜು ವೆಡ್ಸ್ ಗೀತಾ' ಚಿತ್ರದ ಸೀನ್. ಸಣಜು ಗೀತಾಳನ್ನು ಮದುವೆಯಾಗಿದ್ದು 10 ವರ್ಷಗಳ ಹಿಂದೆ. ಆಗಿನ ಗೀತಾ ರಮ್ಯಾ ಆಗಿದ್ದರು, ಆದರೆ ಈಗಿನ ಗೀತಾ ರಚಿತಾ ರಾಮ್!

ಬಿಗ್ ಬಾಸ್ ಮನೆಯಿಂದ ಹೊರಹೋಗ್ಬಿಟ್ರಾ ಸಂಗೀತಾ ಶೃಂಗೇರಿ; ಕಾರ್ತಿಕ್ ಮಾತಿಗೆ ಡೋಂಟ್ ಕೇರ್ ಅಂದಿದ್ದು ಯಾಕೆ?

ಈಗ 'ಸಂಜು ವೆಡ್ಸ್ ಗೀತಾ' ಪಾರ್ಟ್2 ಶೂಟಿಂಗ್ ನಡೆಯುತ್ತಿದ್ದು ಸೆಟ್‌ಬಲ್ಲಿ ಶ್ರೀನಗರ ಕಿಟ್ಟಿ ಸಂಜುಗೆ ಗೀತಾ ಆಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪತ್ನಿ ಗೀತಾಗೆ ಪತಿ ಸಂಜು 10ನೇ ವರ್ಷದ ವೆಡ್ಡಿಂಗ್ ಆನಿರ್ಸರಿ ಮಾಡಿಕೊಳ್ಳೋ ದೃಶ್ಯ ಇದೆ. ಅದರ ಚಿತ್ರೀಕರಣ ಕನಕಪುರ ಪಾರ್ಮ್ ಹೌಸ್ ಒಂದರಲ್ಲಿ ಸೆರೆ ಹಿಡಿದಿದ್ದಾರೆ ನಿರ್ದೇಶಕ ನಾಗಶೇಖರ್. ಆ ದೃಶ್ಯದಲ್ಲಿ ನಟಿ ರಚಿತಾ ರಾಮ್‌ಗೆ ಐಶಾರಾಮಿ ರೋಲ್ಸ್ ರಾಯ್ ಕಾರನ್ನು ಗಿಫ್ಟ್ ಮಾಡಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲಲ್ಲಿ ಮುಂದುವರೆದ ದಾಸನ ದಾದಾಗಿರಿ.. ಟಿವಿ ಬದಲು ಸಿಸಿಟಿವಿ ಬಂತು ದರ್ಶನ್ ಸೆಲ್‌ಗೆ!
Actress Amulya: ತಮ್ಮ ಮುದ್ದಾದ ‘Family’ ಜೊತೆ Golden Girl.. ಯಾರ್ ದೃಷ್ಟಿ ಬೀಳದಿರಲಿ