
ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಎಂಟ್ರಿ ಕೊಟ್ಟ ಪ್ರಿಯಾಮಣಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಟ್ ಸಿನಿಮಾಗಳಲ್ಲಿ ನೀಡಿರುವ ನಟಿ 2017ರಲ್ಲಿ ಮುಸ್ತಫಾ ರಾಜ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಆ ಸಮಯದಲ್ಲಿ ಪ್ರಿಯಾಮಣಿ ಸಾಕಷ್ಟು ಟ್ರೋಲ್ ಮತ್ತು ಬಾಡಿ ಶೇಮಿಂಗ್ ಎದುರಿಸಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ತುಂಬಾ ಬಾಡಿ ಶೇಮಿಂಗ್ ಎದುರಿಸಿರುವೆ. ಬಾಡಿ ಶೇಮಿಂಗ್ ಒಂದೇ ಅಲ್ಲ ನನ್ನ ಜೀವನದ ಮುಖ್ಯ ಹೆಜ್ಜೆ ಮದುವೆಯಾಗಲು ನಿರ್ಧರಿಸಿದಾಗ ಕೂಡ ಯಾಕೆ ಹೊರಗಿನ ವ್ಯಕ್ತಿಯನ್ನು ಮದುವೆಯಾಗುತ್ತಿರುವೆ ಮಕ್ಕಳು ಜಿಹಾದ್ ಆಗಿ ಬೆಳೆಯುತ್ತಾರೆ ಲವ್ ಜಿಹಾದ್ ಆಗುತ್ತೆ ಎಂದು ಏನ್ ಏನೋ ಹೇಳುವರು. ಅವರಿಗೆ ನಾನು ಒಂದೇ ಮಾತು ಹೇಳುವುದು.. ನಾನು ಸಿಂಗಲ್ ಆಗಿದ್ದಾಗ ವಾವ್ ಎಂದು ಕಾಮೆಂಟ್ ಮಾಡುತ್ತಿದ್ದವರು ನಾನು ಮದುವೆಯಾಗುತ್ತಿರುವೆ ಅಂದ್ರೆ ಮೊದಲು ಪ್ರೀತಿ ನೋಡಬೇಕು ಜಾತಿ ಅಲ್ಲ ಎಷ್ಟು ದೂರ ಯೋಚನೆ ಮಾಡಿದ್ದೀರಿ ಎಲ್ಲವೂ ನೆಗೆಟಿವ್. ಎಲ್ಲಾ ಮುಸ್ಲಿಮರು ISIS ಅಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಯವಿರುತ್ತದೆ. ನಾನು ಎಂಗೇಜ್ ಆಗಿರುವ ಎಂದು ಫೋಟೋ ಹಾಕಿದಾಗ ನೆಗೆಟಿವ್ ಎನರ್ಜಿ ಬಂತು' ಎಂದು ಗುಲ್ಟೆ ಡಾಟ್ ಕಾಮ್ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಪ್ರಿಯಾ ಮಾತನಾಡಿದ್ದಾರೆ.
ಟೀಕೆಗೆ ತಿರುಗೇಟು ಕೊಟ್ಟ ಪ್ರಿಯಾಮಣಿ -ಮುಸ್ತಫಾ ಜೋಡಿಯ ಸುಂದರ ಫೋಟೋಸ್
'ಕೊರೋನಾ ಆದ್ಮೇಲೆ ನಾನು ತುಂಬಾ ಸಣ್ಣಗಾಗಿರುವೆ ಅದಿಕ್ಕೆ ಎಲ್ಲರೂ ದಪ್ಪ ಇರುವಾಗ ಚೆನ್ನಾಗಿದ್ದೆ ಈಗ ಯಾಕೆ ಮತ್ತೆ ದಪ್ಪ ಆಗಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗ ನಾನು ಇರುವುದು ನನ್ನ ಆರೋಗ್ಯಕ್ಕೆ ಪರ್ಫೆಕ್ಟ್ ಸೈಜ್. ಗೊತ್ತಿರದ ನಂಬರ್‌ಗಳಿಂದ ರಾತ್ರಿ ಕರೆ ಮಾಡುತ್ತಾರೆ ಬಾಡಿ ಶೇಮಿಂಗ್ ಮಾಡುತ್ತಾರೆ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅವರು ಬಳಸುವ ಪದಗಳನ್ನು ಹೇಳುವುದಕ್ಕೆ ಬೇಸರವಾಗುತ್ತದೆ. ಕಾಲ್ ಮೆಸೇಜ್‌ಗಳನ್ನು ಮೊದಲು ಡಿಲೀಟ್ ಮಾಡುವ ಅದರ ಬಗ್ಗೆ ಯೋಚನೆ ಮಾಡಲು ಸಮಯವಿಲ್ಲ' ಎಂದು ಪ್ರಿಯಾಮಣಿ ಹೇಳಿದ್ದಾರೆ.
ರೀ ಶಾಕ್ ಆಗ್ಬೇಡಿ! ಇದು ಪಕ್ಕಾ ಪ್ರಿಯಾಮಣಿನೇ..ಸಣ್ಣ ಆಗಿದ್ದಾರೆ ಅಷ್ಟೆ
'ಒಂದು ಸಮಯದಲ್ಲಿ ದೇಹ ತೂಕ ಹೆಚ್ಚಾಗುತ್ತಿದ್ದಾಗ ಜನರ ಪ್ರಶ್ನೆಗೆ ಉತ್ತರ ಕೊಡಲು ಏನೂ ಇರಲಿಲ್ಲ ಆಗ ಪಾತ್ರಕ್ಕೆ ಬೇಕು ಎಂದು ಸುಳ್ಳು ಹೇಳುತ್ತಿದ್ದೆ. ನಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಮಗೆ ಹೇಗೆ ತಿಳಿಯಬೇಕು ಹಾರ್ಮೋನ್ ಇರಬಹುದು, ಔಷದಿ ಸೈಡ್ ಎಫೆಕ್ಟ್ ಇರಬಹುದು. ದಪ್ಪ ಇರಲಿ ಸಣ್ಣ ಇರಲಿ ಅಥವಾ ಫಿಟ್ ಆಗಿರಿ ನೀವು ಚೆನ್ನಾಗಿದ್ದೀರಾ ಆರೋಗ್ಯವಾಗಿದ್ದೀರಾ ಅಂದ್ರೆ ಖುಷಿಯಾಗಿರಿ ಯಾರಿಗೂ ಮೆಚ್ಚಿಸುವ ಅಗತ್ಯವಿಲ್ಲ. ಒಬ್ಬರಿಗೆ ನೆಗೆಟಿವ್ ಕಾಮೆಂಟ್ ಮಾಡುವ ಬದಲು ಒಳ್ಳೆ ಕಾಮೆಂಟ್ ಮಾಡಿ ಅವರ ಮನಸ್ಸಿಗೆ ಖುಷಿ ಕೊಡುತ್ತಿದೆ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಪಾಸಿಟಿವ್ ಹೇಳಲು ಮನಸ್ಸಿಲ್ಲ ಅಂದ್ರೆ ನೆಗೆಟಿವ್ ಹೇಳಬೇಡಿ.' ಎಂದಿದ್ದಾರೆ ಪ್ರಿಯಾಮಣಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.