ತತ್ಸಮ ತದ್ಭವ ಚಿತ್ರದ ಮೂಲಕ ಕಮ್ಬ್ಯಾಕ್ ಆಗಿರೋ ನಟಿ ಮೇಘನಾ ರಾಜ್, ಮೂವರು ಅಮ್ಮಂದಿರಿಗೆ ತಮ್ಮನ್ನು ಮೀಟ್ ಆಗುವ ಅವಕಾಶ ಕಲ್ಪಿಸಿದ್ದಾರೆ. ಏನಿದು ಚಾಲೆಂಜ್?
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲ ವರ್ಷಗಳ ಬಳಿಕ ತತ್ಸಮ ತತ್ಭವ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ಈಗ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್. ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿದ್ದವು. ಇದು ಮಹಿಳಾ ಪ್ರಧಾನ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ಇದಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನ ಮೇ 3ರ ಅವರ ಹುಟ್ಟುಹಬ್ಬದಂದು ‘ತತ್ಸಮ ತದ್ಭವ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದರು. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಟೀಸರ್ ನೋಡಿ ಇನ್ನಷ್ಟು ಕುತೂಹಲ ಮೂಡಿದೆ.
ಇದೀಗ ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಎಲ್ಲ ಅಮ್ಮಂದಿರಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಅದೇನೆಂದರೆ ಅವರ ‘ತತ್ಸಮ ತದ್ಭವ’ (Tatsama Tadbhava) ಚಿತ್ರದ ದೂರಿ ಲಾಲಿ ಹಾಡು ಇಂದು ರಿಲೀಸ್ ಆಗಿದ್ದು, ಆ ಹಾಡಿನ ಹಿನ್ನೆಲೆಯಲ್ಲಿ ತಮ್ಮ ಮಗ ರಾಯನ್ನನ್ನು ಮಲಗಿಸುವ ವಿಡಿಯೋ ಅನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗನನ್ನು ತಾವು ಹೇಗೆಲ್ಲಾ ಆಡಿಸುತ್ತಾ ಆತನನ್ನು ಮಲಗಿಸುತ್ತೇನೆ ಎಂಬ ಬಗ್ಗೆ ಈ ವಿಡಿಯೋದಲ್ಲಿ ನಟಿ ಮೇಘನಾ ರಾಜ್ ತೋರಿಸಿಕೊಟ್ಟಿದ್ದಾರೆ. ಇದೇ ವೇಳೆ ಎಲ್ಲ ಅಮ್ಮಂದಿರಿಗೆ ಒಂದು ಚಾಲೆಂಜ್ ಕೂಡ ಹಾಕಿದ್ದಾರೆ.
Meghana Raj ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ 'ತತ್ಸಮ ತದ್ಭವ' ಟೀಸರ್ ಬಿಡುಗಡೆ
ಅದೇನೆಂದರೆ ನಿಮ್ಮ ಮಕ್ಕಳನ್ನು ನೀವು ಹೇಗೆಲ್ಲಾ ಮಲಗಿಸುತ್ತೀರಿ ಎನ್ನುವ ರೀಲ್ಸ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು. ಮಗುವನ್ನು ಮಲಗಿಸುವಾಗ ದೂರಿ ಲಾಲಿ (Doori Laali) ಹಾಡನ್ನು ಹಾಡುತ್ತಿರಬೇಕು. ಅದರಲ್ಲಿ ಅದೃಷ್ಟವಂತ ಮೂವರು ಅಮ್ಮಂದಿರಿಗೆ ನಟಿ ಮೇಘನಾ ರಾಜ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಆ ಸಮಯದಲ್ಲಿ ಆ ಅಮ್ಮಂದಿರ ಜೊತೆ ಮೇಘನಾ ರಾಜ್ ತಮ್ಮ ಮಗ ಹಾಗೂ ವಿಜೇತರಾಗಿರುವ ಮೂವರು ಅಮ್ಮಂದಿರ ಮಕ್ಕಳ ಬಗ್ಗೆ ಚರ್ಚೆ ಮಾಡುವ ಅವಕಾಶ ಸಿಗುತ್ತದೆ. ಇದು ದೂರಿ ಲಾಲಿ ಚಾಲೆಂಜ್ ಆಗಿದ್ದು, ನಿಮ್ಮನ್ನು ಮೀಟ್ ಮಾಡಲು ನಾನು ಕಾಯುತ್ತಿರುತ್ತೇನೆ ಎಂದು ಮೇಘನಾ ಹೇಳಿದ್ದಾರೆ.
ಇದೇ ವೇಳೆ ಕೆಲ ದಿನಗಳ ಹಿಂದೆ ನಟಿ ಮೇಘನಾ (Meghana Raj) , ಪತಿಯನ್ನು ಕಳೆದುಕೊಂಡ ಬಳಿಕ ಮಗನನ್ನು ನೋಡಿಕೊಂಡ ಬಗ್ಗೆ ಹೇಳಿ ಭಾವುಕರಾಗಿದ್ದರು. 'ನಾಲ್ಕು ತಿಂಗಳ ಅಂತರದಲ್ಲಿ ಮರಣ ಮತ್ತು ಜನನ ನೋಡಿದ್ದೀನಿ. ಆ ಸಮಯವನ್ನು ಹೇಗೆ ಎದುರಿಸಿದೆ ಗೊತ್ತಿಲ್ಲ ಆದರೆ ನನಗೆ ಮಗು ಹುಟ್ಟುತ್ತದೆ ನನ್ನ ಎಲ್ಲಾ ಗಮನ ಮಗು ಮೇಲೆ ಇರಬೇಕು ಎಂದು ಮಾತ್ರ ಗೊತ್ತಿತ್ತು. ಮೆಡಿಕಲ್ ಆಗಿ ಕೆಲವರು ಹೇಳುತ್ತಾರೆ ಅಥವಾ ನನಗೆ ಅನಿಸುತ್ತಿತ್ತೋ ಗೊತ್ತಿಲ್ಲ ಆ ಸಮಯದಲ್ಲಿ ನನಗೆ ಶಕ್ತಿ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಆದರೆ ತಾಯಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಿನಲ್ಲಿದ್ದರೆ ಗರ್ಭದಲ್ಲಿರುವ ಮಗು ಒಂದು ವಿಶೇಷ ಹಾರ್ಮೋನ್ ರಿಲೀಸ್ ಮಾಡುತ್ತದೆ ಆ ಹಾರ್ಮೋನ್‌ನಿಂದ ನನಗೆ ಶಕ್ತಿ ಬಂತು. ಸಿನಿಮಾರಂಗಕ್ಕೆ ನಾನು ಮತ್ತೆ ಬರಬೇಕು ಸಿನಿಮಾ ಮಾಡಬೇಕು ಜೀವನ ಚೆನ್ನಾಗಿ ನಡೆಸಬೇಕು ಅನ್ನೋದಕ್ಕೆ ಶಕ್ತಿ ಕೊಟ್ಟಿದ್ದು ರಾಯನ್' ಎಂದು ಮೇಘನಾ ರಾಜ್ ಹೇಳಿದ್ದರು. ಈಗ ತತ್ಸಮ ತದ್ಭವದ ಮೊದಲು ರಿಲೀಸ್ ಆಗಿರೋ ಹಾಡಿಗೆ ಅಮ್ಮಂದಿರಿಗೆ ಒಂದು ಅವಕಾಶ ನೀಡಿದ್ದಾರೆ.
ತ್ರಿವರ್ಣ ಧ್ವಜಕ್ಕೆ 'ಜೂನಿಯರ್ ಚಿರು’ ಸೆಲ್ಯೂಟ್: ಸೋ ಕ್ಯೂಟ್ ಎಂದ ಫ್ಯಾನ್ಸ್