ನಟಿ ಪೂಜಾ ಗಾಂಧಿಯವರ ತಾಯಿ ಜ್ಯೋತಿಯವರು ಕನ್ನಡ ಅಭ್ಯಾಸ ಮಾಡುತ್ತಿದ್ದು ಅವರು ಬರೆದಿರುವ ಕೈಬರಹದ ಪುಟವನ್ನು ಪೂಜಾ ಶೇರ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ನಟಿ ಪೂಜಾ ಗಾಂಧಿ (Pooja Gandhi). ಮುಂಗಾರು ಮಳೆಯ ಬಳಿಕ ಮಿಂಚಿದ್ದ ಪೂಜಾ ಗಾಂಧಿ ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿರು. ಮುಂಗಾರು ಮಳೆಯ ಯಶಸ್ಸಿನ ಬಳಿಕ ಕನ್ನಡದ ಟಾಪ್ ನಟಿ (Kannada Top Actress) ಎಂದೇ ಖ್ಯಾತಿ ಪಡೆದ ಪೂಜಾ, ಇದ್ದಕ್ಕಿದ್ದಂತೆಯೇ ಬಣ್ಣದ ಲೋಕದಿಂದ ಕಣ್ಮರೆಯಾಗಿದ್ದಾರೆ. ಪೀಕ್ನಲ್ಲಿದ್ದಾಗಲೇ ಪೂಜಾ ಚಿತ್ರರಂಗದಿಂದ ಹಿಂದೆ ಸರಿದಿದ್ದಾರೆ. ನಟಿ ನೋಡೋಕೆ ಚೆನ್ನಾಗಿಲ್ಲ. ಕುಳ್ಳಕ್ಕೆ ಇದ್ದಾರೆ. ಗಂಡಸರ ಹಾಗೇ ಕಾಣಿಸುತ್ತಾರೆ ಎಂದೆಲ್ಲಾ ಟೀಕೆಗಳನ್ನು ಎದುರಿಸುತ್ತಲೇ ಹಲವು ಭಾಷೆಗಳಲ್ಲಿ ನಟಿಸಿದ್ದ ನಟಿ ಎಲ್ಲರಿಗೂ ಹೆಚ್ಚು ಆಪ್ತವಾದದ್ದು ಅವರು ಕನ್ನಡ ಕಲಿತದ್ದರಿಂದ.
ಆದರೆ ಸ್ಲಿಮ್ ಆಗಿದ್ದ ಪೂಜಾ, ದಪ್ಪ ಆಗಿದ್ದರಿಂದ ಅವಕಾಶಗಳು ಕಡಿಮೆಯಾದವು, ಇದೇ ಕಾರಣಕ್ಕೆ ಸಿನಿಮಾದಿಂದ ದೂರವಾಗಿದ್ದಾರೆ ಎನ್ನಲಾಗಿದೆ. ದಂಡುಪಾಳ್ಯ (Dandupalya) ಸಿನಿಮಾ ಮಾಡಿ ಸಕ್ಸಸ್ ಆದರೂ ಪೂಜಾ ಗಾಂಧಿ ಅವರಿಗೆ ಅವಕಾಶಗಳು ಕಡಿಮೆಯಾದವು. ಇದರಿಂದ ಅವರು ಅಭಿನಯದಿಂದ ದೂರವೇ ಉಳಿದರು. ನಂತರ ಅಭಿನೇತ್ರಿ ಸಿನಿಮಾ ತಾವೇ ನಿರ್ಮಾಣ ಮಾಡಿ, ನಟಿಸಿದರೂ ಸಕ್ಸಸ್ ಆಗಿಲಿಲ್ಲ. 2012ರಲ್ಲಿ ಜೆಡಿಎಸ್ ಪಕ್ಷವನ್ನು ಸೇರಿಕೊಂಡು ಅಲ್ಲಿಂದ ಕೆಜಿಪಿ ಪಕ್ಷ ಬಳಿಕ ಕಾಂಗ್ರೆಸ್‌ಗೆ ಸೇರಿ ರಾಯಚೂರಿನಲ್ಲಿ ಸ್ಫರ್ಧೆ ಮಾಡಿ ಪರಾಭವಗೊಂಡರು. 2016ರಲ್ಲಿ ಮತ್ತೆ ಬಿಗ್ಬಾಸ್ಗೆ ಬಂದರೂ ಹೆಚ್ಚು ಸಕ್ಸಸ್ ಕಾಣಲಿಲ್ಲ.
ನಾನು ಎಲ್ಲೂ ಹೋಗಿಲ್ಲ; ಇಷ್ಟು ವರ್ಷ ಕಾಣಿಸದೇ ಇದ್ದಿದ್ದಕ್ಕೆ ಉತ್ತರ ಕೊಟ್ಟ ಪೂಜಾ ಗಾಂಧಿ!
ಅದೇನೇ ಇದ್ದರೂ, ಸದ್ಯ ಪೂಜಾ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಗೆ ಕನ್ನಡ ಮೇಲಿರುವ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಿಗರು ಕೂಡ ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಲೇ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ ಪೂಜಾ ಮಾತ್ರವಲ್ಲದೇ ಇದೀಗ ಅವರ ತಾಯಿ ಕೂಡ ಕನ್ನಡ ಕಲಿಯಲು ಶುರು ಮಾಡಿರುವುದು ಕನ್ನಡಿಗರಿಗೆ ತುಂಬಾ ಖುಷಿ ಕೊಡುತ್ತಿದೆ. ಪೂಜಾ ಅವರ ತಾಯಿ ಜ್ಯೋತಿ ಗಾಂಧಿ ಅವರು ಕನ್ನಡದಲ್ಲಿ ಬರೆದ ಒಂದು ಪುಟವನ್ನು ಶೇರ್ ಮಾಡಿಕೊಂಡಿರುವ ಪೂಜಾ ಗಾಂಧಿ, 'ಕನ್ನಡದ ಅಕ್ಷರಾಭ್ಯಾಸವಿಲ್ಲದಿದ್ದರೂ, ನನ್ನ ಕನ್ನಡ ಕಲಿಕೆಯಿಂದ ಪ್ರೇರೇಪಿತರಾಗಿ ನನ್ನ ತಾಯಿ ಜ್ಯೋತಿ ಗಾಂಧಿ ಬರೆದಿರುವ ಚಂದದ ಕನ್ನಡ ಅಕ್ಷರಗಳು... ಅಮ್ಮ ಹಾಟ್ಸ್ ಆಫ್..' ಎಂದು ಫೇಸ್‌ಬುಕ್‌ನಲ್ಲಿ (Facebook) ಬರೆದುಕೊಂಡಿದ್ದಾರೆ.
ಸದ್ಯ ಬೆಂಗಳೂರಿನಲ್ಲಿಯೇ ವಾಸವಾಗಿದೆ ಪೂಜಾ ಕುಟುಂಬ. ಜ್ಯೋತಿ ಗಾಂಧಿ ಅವರು ಮಗಳಂತೆಯೇ ಕನ್ನಡ ಮಾತನಾಡುವುದನ್ನು ಮಾತ್ರವಲ್ಲದೇ ಬರೆಯುವುದನ್ನೂ ಕಲಿಯುತ್ತಿದ್ದಾರಂತೆ. ಈ ಬಗ್ಗೆ ಪೂಜಾ ಹೇಳಿದ್ದಾರೆ. ಅಮ್ಮನ ಕೈ ಬರಹದ ಫೋಟೋ ಶೇರ್ ಮಾಡಿದ್ದಾರೆ. ಇದಕ್ಕೆ ಸಹಸ್ರಾರು ಕಮೆಂಟ್‌ಗಳ (comments) ಸುರಿಮಳೆಯಾಗುತ್ತಿದ್ದು, ಕನ್ನಡಿಗರು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ನಿಮ್ಮ ಕನ್ನಡಭಿಮಾನಕ್ಕೆ ಕೋಟಿ ಕೋಟಿ ಅಭಿನಂದನೆಗಳು ಎನ್ನುತ್ತಿದ್ದಾರೆ.
ಕರ್ನಾಟಕದಲ್ಲಿದ್ದು, ಕನ್ನಡ್ ಗೊತ್ತಿಲ್ಲ ಅನ್ನೋರಿಗೆ ಏನು ಮಾಡ್ಬೇಕು ಹೇಳ್ತಿದ್ದಾರೆ ಪೂಜಾ ಗಾಂಧಿ