ಪವಿತ್ರಾ ಗೌಡ ತುಂಬಾ ಕೋಪಿಷ್ಠೆ, ಕೋಪ ಬಂದ್ರೆ ಏನ್ ಮಾಡ್ತಾಳೆ ಅವಳಿಗೂ ಗೊತ್ತಿಲ್ಲ: ಮಾಜಿ ಪತಿ ಸಂಜಯ್ ಹೇಳಿಕೆ ವೈರಲ್

By Vaishnavi Chandrashekar  |  First Published Jun 13, 2024, 11:25 AM IST

12 ವರ್ಷಗಳ ಹಿಂದೆಯೇ ಬೆಂಗಳೂರು ಬಿಟ್ಟು ಹೋದ ಸಂಜಯ್ ಸಿಂಗ್. ಪವಿತ್ರಾ ಗೌಡ ಕೊಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪತಿ....


ಇಡೀ ಕರ್ನಾಟಕವೇ ರೇಣುಕಾಸ್ವಾಮಿ-ದರ್ಶನ್- ಪವಿತ್ರಾ ಗೌಡ ಬಗ್ಗೆ ಮಾತನಾಡುತ್ತಿದೆ. ಕೊಲೆ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ನಿಜಕ್ಕೂ ಕೊಲೆ ಮಾಡಿದ್ದಾಳಾ?

'ಪವಿತ್ರಾ ಇಲಿ ಕಂಡರೂ ಹೆದರುತ್ತಿದ್ದಳು ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಜೊತೆ ಪವಿತ್ರಾ ಇದ್ದಿರಬಹುದು ಅಷ್ಟೆ. ಪವಿತ್ರಾ ತುಂಬಾ ಸಾಫ್ಟ್‌ ಹೌದು ಧೈರ್ಯವಂತೆಯೂ ಹೌದು. ಈಗ ನಾನು ಪವಿತ್ರಾ ಬಳಿ ಏನೂ ಮಾತನಾಡಿಲ್ಲ. ಅವಳು ಯಾವ ಸ್ಥಿತಿಯಲ್ಲಿದ್ದಾಳೆ ಅಂತ ನನಗೆ ಅರ್ಥವಾಗುತ್ತಿದೆ. ಪವಿತ್ರಾ ಗೌಡ ತುಂಬಾ ಕೋಪಿಷ್ಠ ಕೋಪ ಬಂದರೆ ಅವಳು ಏನು ಮಾಡ್ತಾಳೆ ಅಂತ ಅವಳಿಗೂ ಗೊತ್ತಿಲ್ಲ. ನನ್ನ ಅಣ್ಣ ತಮ್ಮಂದಿರು ವಿದೇಶದಲ್ಲಿದ್ದಾರೆ, ನಾನು ಈಗ ಉತ್ತರ ಪ್ರದೇಶದಲ್ಲಿರುವ ಸಮ್ಮದೇ ಆದ ಶಾಲೆಯನ್ನು ನಡೆಸುತ್ತಿದ್ದೇನೆ' ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸಂಜಯ್ ಸಿಂಗ್ ಮಾತನಾಡಿದ್ದಾರೆ.

Tap to resize

Latest Videos

ಮತ್ತೊಂದು ಶಾಕ್; ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಛೇದನ ತೀರ್ಪು

'ಗಂಡ ಹೆಸಂತಿ ಮಧ್ಯೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ನಾನು, ದರ್ಶನ್ ಮದುವೆ ಆಗೇಕು ಅಂದುಕೊಂಡಿದ್ದೇವೆ ಹೀಗಾಗಿ ನಿನ್ನಿಂದ ವಿಚ್ಚೇದನ ಬೇಕು ಅಂತ ಹೇಳಿ ಪವಿತ್ರಾಳೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಆಮೇಲೆ 2013ರಲ್ಲಿ ನಮ್ಮ ವಿಚ್ಛೇದನ ಆಯ್ತು. ಪವಿತ್ರಾ, ದರ್ಶನ್ ಮದುವೆಯಾಗಿದ್ದಾರಾ? ಇಲ್ಲವಾ ಅಂತ ನನಗೆ ಗೊತ್ತಿಲ್ಲ. ಕಳೆದ 12 ವರ್ಷಗಳಲ್ಲಿ ನಾನು ಮಗಳ ಜೊತೆ ಎರಡು ಬಾರಿ ಮಾತನಾಡಿದ್ದು, 2017ರಲ್ಲಿ ಬೆಂಗಳೂರಿಗೆ ಬಂದು ಅವಳನ್ನು ಭೇಟಿ ಮಾಡಿದ್ದೆ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. 

ಚೆನ್ನೈನ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ; ಫೋಟೋ ನೋಡಿ ಎಲ್ಲರು ಶಾಕ್!

'ನಾನು ಯತ್ತರ ಪ್ರದೇಶದ ಹುಡುಗ. 2002ರಲ್ಲಿ ನಾನು ಬೆಂಗಳೂರಿಗೆ ಬಂದೆ ಆಗ ನನಗೆ ಪವಿತ್ರಾಗೆ ಪರಿಚಯ ಆಗಿ ಮದುವೆಯಾದೆ. 2 ವರ್ಷಕ್ಕೊಮ್ಮೆ ನಾನು ಮಗಳು ಖುಷಿ ಜೊತೆಗೆ ಮಾತನಾಡುತ್ತೇನೆ. ನನ್ನ ಬಳಿ ಪವಿತ್ರಾ ನಂಬರ್ ಇಲ್ಲ. ಅತ್ತೆ ಮಾವಗೆ ಪೋನ್ ಮಾಡಿದಾಗ ಮಗಳು ಇದ್ದಾಗ ಆಗ ಅವಳ ಬಳಿ ಮಾತನಾಡುತ್ತೇನೆ. ನಾನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪವಿತ್ರಾ ಗೌಡಗೆ ನನಗೆ ಪರಿಚಯ ಆಯ್ತು. ಮದುವೆಯಾಗಿ 3 ವರ್ಷ ಆದ ಮೇಲೆ ನಮಗೆ ಮಗಳು ಹುಟ್ಟಿದಳು. ಆಮೇಲೆ ಪವಿತ್ರಾ ಚಿತ್ರರಂಗಕ್ಕೆ ಕಾಲಿಟ್ಟಳು. ಆಮೇಲೆ ನಮ್ಮಿಬ್ಬರ ಮಧ್ಯೆ ಮನಸ್ತಾಪ ಆಗಿ ನಾವಿಬ್ಬರೂ 1 ವರ್ಷ ದೂರ ಇದ್ದೇವು' ಎಂದಿದ್ದಾರೆ ಸಂಜಯ್ ಸಿಂಗ್. 

click me!