ಜೀವನದ ದೊಡ್ಡ ಪ್ರಶ್ನೆಗೆ ಫೆ.19ರಂದು ಉತ್ತರ ನೀಡುವುದಾಗಿ ತಿಳಿಸಿದ ನಟಿ ಮೇಘನಾ ರಾಜ್

Published : Feb 18, 2023, 09:44 PM ISTUpdated : Feb 18, 2023, 10:43 PM IST
ಜೀವನದ ದೊಡ್ಡ ಪ್ರಶ್ನೆಗೆ ಫೆ.19ರಂದು ಉತ್ತರ ನೀಡುವುದಾಗಿ ತಿಳಿಸಿದ ನಟಿ ಮೇಘನಾ ರಾಜ್

ಸಾರಾಂಶ

ನಟಿ ಮೇಘನಾರಾಜ್ ಭಾನುವಾರ ಅಂದರೆ ಫೆ.19ರಂದು ಜೀವನದ ಬಹುಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಳೆ ಭಾನುವಾರ ಬೆಳಗ್ಗೆ 10.30 ಬಹುದಿನಗಳ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು (ಫೆ.18): ನಟಿ ಮೇಘನಾರಾಜ್ ಭಾನುವಾರ ಅಂದರೆ ಫೆ.19ರಂದು ಜೀವನದ ಬಹುಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಳೆ ಭಾನುವಾರ ಬೆಳಗ್ಗೆ 10.30 ಬಹುದಿನಗಳ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. "2020, ಅದು ಭಾನುವಾರವಾಗಿತ್ತು ನನ್ನ ವಿಚಾರದಲ್ಲಿ ತೀವ್ರವಾದ ಬದಲಾವಣೆಯಾದವು, ಅಂದಿನಿಂದ, ಒಂದು ಸ್ಪಷ್ಟ ವಿಷಯದ ಬಗ್ಗೆ ನನ್ನನ್ನು ಕೇಳಲಾಯಿತು. ಅದು ಒಂದು ಪ್ರಶ್ನೆ. ನಾಳೆ, ಭಾನುವಾರ 10.30ಕ್ಕೆ ಬೆಳಗ್ಗೆ, ನಾನು ಅಂತಿಮವಾಗಿ ಇದಕ್ಕೆ ಉತ್ತರಿಸಲು ನಿರ್ಧರಿಸಿದ್ದೇನೆ ಎಂದು ತಮ್ಮ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ."

ಮೇಘನಾರಾಜ್ ತಮ್ಮ ಹೊಸ ನಿರ್ಧಾರದ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆಯೇ ತರಹೇವಾರಿ ಕಮೆಂಟ್ ಗಳು ಅವರ ಪೋಸ್ಟ್ ಗೆ ಬಂದಿದೆ. ಕೆಲವರು ನೀವು ಎರಡನೇ ಮದುವೆ ಆಗುತ್ತಿದ್ದೀರಾ? ಮಗ ರಾಯನ್ ಬಗ್ಗೆ ಕೂಡ ಯೋಚಿಸಿ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಬಳಿಕ ಮತ್ತು ರಾಯನ್ ಹುಟ್ಟಿದ ಬಳಿಕ ಸಿನೆಮಾ ರಂಗದಿಂದ ದೂರ ಇರುವ ನಟಿ ಮೇಘನಾ ರಾಜ್ ಅವರು ತಮ್ಮ ಮುಂದಿನ ಹೊಸ ಕೆಲಸದ ಬಗ್ಗೆ   ಅಥವಾ ಹೊಸ ಚಿತ್ರದ ಬಗ್ಗೆ ಪ್ರಕಟಣೆಗಳನ್ನು ಮಾಡಬಹುದು ಎಂದು ಅಂದಾಜಿಲಾಗಿದೆ.

ಇನ್ನು ಚಿರಂಜೀವಿ ಸರ್ಜಾ ಅವರು ನಟಿಸಿರುವ ಕೊನೆಯ ಚಿತ್ರ ರಾಜಮಾರ್ತಾಂಡ ಈಗ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಶೂಟಿಂಗ್ ಚಿರು ಇರುವಾಗಲೇ ಮುಗಿದಿತ್ತು. ಆದರೆ ಡಬ್ಬಿಂಗ್ ಮಾತ್ರ ಮುಗಿದಿರಲಿಲ್ಲ. ಚಿರು ಸಹೋದರ, ನಟ ಧ್ರುವ ಸರ್ಜಾ  ಅವರು ಡಬ್ಬಿಂಗ್ ಕೂಡ ಮಾಡಿದ್ದರು. ಈ ಚಿತ್ರದ ಬಿಡುಗಡೆ ದಿನಾಂಕ ಬಗ್ಗೆ ಕೂಡ ಮೇಘನಾ ರಾಜ್ ತಿಳಿಸಬಹುದು ಎಂದು ಹೇಳಲಾಗುತ್ತಿದೆ.

2020 ಭಾನುವಾರ ಜೂನ್ 7 ರಂದು ಮೇಘನಾ ಪತಿ ಹಾಗೂ ನಟ ಚಿರಂಜೀವಿ ಸರ್ಜಾ ಅವರನ್ನು ಬದುಕಿನಿಂದ ಕಳೆದುಕೊಂಡಿದ್ದರು. ಪತಿಯನ್ನು ಕಳೆದುಕೊಳ್ಳುವ ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರು.  ಅಕ್ಟೋಬರ್ 22, 2020 ರಂದು ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಅವರಿಗೆ ಜನ್ಮ ನೀಡಿದರು. ರಾಯನ್ ರಾಜ್ ಸರ್ಜಾ ಜನನದ ಬಳಿಕ ಅವರು ಮರಳಿ ಸರ್ಜಾ ಕುಟುಂಬಕ್ಕೆ ಹೋಗಿಲ್ಲ. ತಮ್ಮ ತಂದೆ ತಾಯಿ ಜೊತೆಗೆ ಇದ್ದಾರೆ. ಹೀಗಾಗಿ ಈ ಬಗ್ಗೆ ಕೂಡ ನಿರ್ಧಾರ ಪ್ರಕಟಿಸಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ನಾನು ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮರ ಚೆನ್ನಾಗಿದ್ದರೆ ಮಾತ್ರ ನೆರಳು ಕೊಡುವುದು: ಮೇಘನಾ ರಾಜ್

ಕೊನೆಯದಾಗಿ ಮೇಘನಾ ಸರ್ಜಾ ಹೊಸ ಮನೆ ಖರೀದಿ ಮಾಡಿ ಆ ಮನೆಗೆ ತಮ್ಮ ಮಗ ರಾಯನ್ ಜೊತೆ  ಶಿಫ್ಟ್ ಆಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ನಟಿ ಮೇಘನಾ ಅವರೇ ನಾಳೆ ಬೆಳಗ್ಗೆ ತೆರೆ ಎಳೆಯಲಿದ್ದಾರೆ.

ಮೇಘನಾ ರಾಜ್ ವಯಸ್ಸೆಷ್ಟು, ಮಾತೃಭಾಷೆ ಯಾವುದು; ಗೂಗಲ್‌ನಲ್ಲಿ ಅಭಿಮಾನಿಗಳು ಹುಡುಕಿರುವ ಪ್ರಶ್ನೆಗೆ ಉತ್ತರ ಕೊಟ್ಟ ನಟಿ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ