ಕಾಂತಾರದ ಪುಟ್ಟ ಪಾತ್ರಕ್ಕೂ ಇದ್ದಾರೆ ತದ್ರೂಪಿಗಳು, ಪಾತ್ರಧಾರಿಗಳನ್ನು ಹೋಲುವವರಿಗೂ ಸಖತ್ ಡಿಮ್ಯಾಂಡ್!

By Suvarna News  |  First Published Feb 17, 2023, 6:42 PM IST

ಕಾಂತಾರ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸು ಪ್ರತಿಯೊಬ್ಬ ಪಾತ್ರಧಾರಿಗೂ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದೆ. ಇದೀಗ ಚಿತ್ರದ ಪಾತ್ರಧಾರಿಗಳನ್ನು ಹೊಲುವ ವ್ಯಕ್ತಿಗಳಿಗೂ ಸಖತ್ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ಬರುವ ಅತ್ಯಂತ ಸಣ್ಣ ಪಾತ್ರಕ್ಕೂ ಡಿಮ್ಯಾಂಡ್ ಬಂದಿದ್ದು. ತದ್ರೂಪಿಯೊಬ್ಬ ಗಮನ ಸೆಳೆಯುತ್ತಿದ್ದಾರೆ. 


ಉಡುಪಿ (ಫೆ.17): ಕಾಂತಾರ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸು ಪ್ರತಿಯೊಬ್ಬ ಪಾತ್ರಧಾರಿಗೂ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದೆ. ಇದೀಗ ಚಿತ್ರದ ಪಾತ್ರಧಾರಿಗಳನ್ನು ಹೊಲುವ ವ್ಯಕ್ತಿಗಳಿಗೂ ಸಖತ್ ಡಿಮ್ಯಾಂಡ್ ಶುರುವಾಗಿದೆ. ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಅವರ ತದ್ರೂಪಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡಿಗರಿಗೆ ಪರಿಚಯಿಸಿತ್ತು. ಇದೀಗ ಚಿತ್ರದಲ್ಲಿ ಬರುವ ಅತ್ಯಂತ ಸಣ್ಣ ಪಾತ್ರಕ್ಕೂ ಡಿಮ್ಯಾಂಡ್ ಬಂದಿದ್ದು. ತದ್ರೂಪಿಯೊಬ್ಬ ಗಮನ ಸೆಳೆಯುತ್ತಿದ್ದಾರೆ. 

ಕಾಂತಾರ ಯಶಸ್ವಿಯ ಹಿಂದೆಯೆ ತದ್ರೂಪಿ ಎನಿಸಿದ ದೈವ ನರ್ತಕ ಈಗ ಸಖತ್ ಸದ್ದು ಮಾಡುತ್ತಿದ್ದಾರೆ. ಪರ್ಕಳ, ಹೆರ್ಗಗ್ರಾಮದ ಶೆಟ್ಟಿ ಬೆಟ್ಟು ವಾರ್ಡಿನ ಐತು ಪಾನರ ಕಳೆದ 20 ವರ್ಷದ ದೈವಾರಾಧನೆಯ ಮೂಲಕ ದೈವ ನರ್ಥಕರಾಗಿ ತೊಡಗಿಸಿಕೊಂಡಿದ್ದಾರೆ. ಇವರು ಪಂಜುರ್ಲಿ, ವರ್ತೆ ಪಂಜುರ್ಲಿ, ಚಾವುಂಡಿ, ಗುಳಿಗೆ, ತನಿಮನಿಗ, ಬೊಬ್ಬರ್ಯ, ಈ ಮೊದಲಾದ ದೈವಗಳ  ನರ್ತನದಿಂದ ಸೇವೆ ಸಲ್ಲಿಸುತ್ತಾ ಸ್ಥಳೀಯವಾಗಿಯೂ ಹಾಗೂ ಊರ ಹಾಗೂ ಪರ ಊರಿನ ಕಡೆಗಳಲ್ಲಿಯೂ ತಮ್ಮ ದೈವ ನರ್ತನದಿಂದ ಗುರುತಿಸಿಕೊಂಡಿದ್ದಾರೆ.

Tap to resize

Latest Videos

undefined

ಇತ್ತೀಚಿನ ದಿನಗಳಲ್ಲಿ ಕಾಂತಾರ ಚಿತ್ರ ಯಶಸ್ಸು ಪಡೆದ ನಂತರ, ಇವರಲ್ಲಿ ಕಾಂತಾರ ಚಿತ್ರದ ಪಾತ್ರಧಾರಿಯನ್ನು ಜನ ಕಾಣುತ್ತಿದ್ದಾರೆ. ಕಾಂತಾರ ಚಿತ್ರದಲ್ಲಿ ನೀವು ನಟಿಸಿದ್ದೀರಾ? ಎಂದು ಎಲ್ಲರೂ ಮುಗಿಬೀಳುತ್ತಿದ್ದಾರೆ. 

ಇವರ ಜೊತೆ ಸೆಲ್ಫಿ ತೆಗೆಯುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಕಾಂತಾರ ಚಿತ್ರದಲ್ಲಿ ಪ್ರಾರಂಭದಲ್ಲಿ ಮೊದಲಿನ ರಾಜನೊಬ್ಬ ಕಾಡಿನ ಬಳಿ ಬಂದಾಗ ಅಲ್ಲಿ ಚಿತ್ರದ ಸನ್ನಿವೇಶದಲ್ಲಿ ದೈವ ನರ್ತಕ ಆವೇಶಗೊಂಡು  "ದೈವ ಬೇಕಲ್ಲ ನಿನಗೆ. ಪಂಜುರ್ಲಿ ದೈವ ಬೇಕಲ್ಲ ನಿನಗೆ.  ನಿನ್ನ ಬಿಟ್ಟು ಬೇರೆಂತ ಬೇಡ. ನೀನು ಎಂಥ ಸಹ ಕೇಳಿದರೆ ಕೊಡುತ್ತೇನೆ. ಪಂಜರ್ಲಿ,, ನಿನಗೆ ಸುಖ ಶಾಂತಿ ಬೇಕಾದರೆ ನನ್ನನ್ನು ಕೇಳುತ್ತಿ ನನಗೇನು ಕೊಡುತ್ತಿ? ನನ್ನ ಸ್ವರ ಎಲ್ಲಿಯ ತನಕ  ಕೇಳುತ್ತೋ ಅಷ್ಟೆಲ್ಲ ಜಾಗವನ್ನು ಊರಿನ ಜನಕ್ಕೆ ಕೊಡಬೇಕು. ಎಂದು ರಾಜನ ಮುಂದೆ ದೈವನರ್ಥನದಾರಿ ಕೇಳುವ ದೃಶ್ಯ ಬರುತ್ತೆ.

ದೈವ ವೇಷವಾಗಿ ಜೋರಾಗಿ ಕಿರುಚಾಡುತ್ತ ಕೇಳುತ್ತದೆ.. ನನ್ನ ಸ್ವರ ಎಲ್ಲಿಯ ತನಕ ಕೇಳುತ್ತದೆ ಅಲ್ಲಿಯತನಕ ಭೂಮಿ ಊರಿನ ಜನಕ್ಕೆ ಕೊಡುಬೇಕು ನನ್ನ ಜೊತೆ ಉಂಚಂಗ ಗುಳಿಗನೂ ಬರುತ್ತಾನೆ, ಕೊಟ್ಟ ಮಾತನ್ನು ತಪ್ಪಬೇಡ.  ಓ..... ಕೂಗಾಡುವ ಸನ್ನಿವೇಶ ಚಿತ್ರರಸಿಕರಿಗೆ ರೋಮಾಂಚನ ಉಂಟುಮಾಡಿತ್ತು. ಪುರಾತನ ಕಾಲವನ್ನು ನೆನಪಿಸುವಂತ, ಈ ನಟನೆಯನ್ನು  ಮಂಗಳೂರಿನ ಕಲಾವಿದ ಒಬ್ಬರು ನಟಿಸಿದ್ದರು.

Varaha Roopam: 'ಕಾಂತಾರ' ವಿರೋಧಿಗಳಿಗೆ ಮತ್ತೊಂದು ಬ್ಯಾಡ್​ನ್ಯೂಸ್​: ಎಫ್​ಐಆರ್​ಗೆ ತಡೆ ನೀಡಿದ ಹೈಕೋರ್ಟ್​ 

ಆದರೆ ಅವರಂತೆಯೇ ಕಾಣುವ ಉಡುಪಿ   ಶೆಟ್ಟಿ ಬೆಟ್ಟುವಿನ ದೈವ ನರ್ತಕ ಐತ ಪಾನರನ್ನು ಈಗ ಎಲ್ಲರೂ ಗಮನಿಸಲು ಆರಂಭಿಸಿದ್ದಾರೆ. ಮತ್ತು ದೈವ ದರ್ಶನ ಮುಗಿದ ಬಳಿಕ ಚಲನಚಿತ್ರದಲ್ಲಿ ನಟಿಸಿದ್ದೀರಾ ಎಂದು ಮುಗಿಬಿದ್ದು ಸೆಲ್ಫಿ ತೆಗೆದು ಕೈಮುಗಿಯುತ್ತಾರೆ.

'ಕಾಂತಾರ'ದ ಅರಮನೆಗೆ ತಲೈವಾ ಭೇಟಿ: ಜೈಲರ್ ಸಿನಿಮಾದ ಶೂಟಿಂಗ್ ಆರಂಭ

ಕಾಂತಾರ ಚಿತ್ರ ತೆರೆಕಂಡು ಯಶಸ್ವಿಯಾದಗಿಂದ ತುಳುನಾಡಿನ ದೈವಾರಾಧನೆ ಹೆಚ್ಚು ಮಹತ್ವ ಸಿಕ್ಕಿದಂತಾಗಿದೆ. ತುಳುನಾಡಿನಲ್ಲಿ ತಮ್ಮ ತಮ್ಮ ಕುಟುಂಬಸ್ಥರು, ಮನೆ ದೇವಸ್ಥಾನದ ಮಂದಿರಗಳಲ್ಲಿರುವ ದೈವದ ಕೋಲವನ್ನು ಆರಾಧಿಸುವ ಪದ್ಧತಿ ಹೆಚ್ಚಾಗಿದೆ. ನಮ್ಮ ದೈವ ನರ್ತನಕ್ಕೂ ಮಾನ್ಯತೆ ಗೌರವ ಹೆಚ್ಚಾಗಿದೆ, ಮುಂಬೈಯಿಂದ ಬರುವ ತುಳುನಾಡಿನ ಭಕ್ತಾದಿಗಳು ಕೂಡ ನೀವು ನಟಿಸಿದ್ದೀರಾ ಎಂದು ಕೇಳುವ  ಮೂಲಕ ಇನ್ನಷ್ಟು ಸಂತೋಷ ತಂದಿದೆ ಎಂದು ಐತುಪಾನರ ಹೇಳಿದ್ದಾರೆ.

click me!