Sudeep: 'ಮೈ ಆಟೋಗ್ರಾಫ್' ಚಿತ್ರಕ್ಕೆ 17 ವರ್ಷ; ಈ ವಿಶೇಷ ಸಿನಿಮಾದ ಬಗ್ಗೆ ಕಿಚ್ಚ ಹೇಳಿದ್ದೇನು?

Published : Feb 17, 2023, 06:21 PM IST
Sudeep: 'ಮೈ ಆಟೋಗ್ರಾಫ್' ಚಿತ್ರಕ್ಕೆ 17 ವರ್ಷ; ಈ ವಿಶೇಷ ಸಿನಿಮಾದ ಬಗ್ಗೆ ಕಿಚ್ಚ ಹೇಳಿದ್ದೇನು?

ಸಾರಾಂಶ

ಕಿಚ್ಚ ಸುದೀಪ್ ನಟನೆಯ ಮೈ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಿ 17 ವರ್ಷಗಳು ಆಗಿದೆ. ಈ ಬಗ್ಗೆ ಸುದೀಪ್ ವಿಶೇಷ ಮಾತುಗಳನ್ನು ಹೇಳಿದ್ದಾರೆ. 


ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕ್ಕೂ ಮರೆಯದ ನೆನಪು.. ಈ ಹಾಡನ್ನು ಮರೆಯಲು ಸಾಧ್ಯನಾ? ಖಂಡಿತ ಇಲ್ಲ. ಇದು ಕಿಚ್ಚ ಸುದೀಪ್ ನಿರ್ದೇಶನ  ಮಾಡಿ ನಟಿಸಿರುವ ಮೈ ಆಟೋಗ್ರಾಫ್ ಸಿನಿಮಾದ ಹಾಡು ಎನ್ನುವುದು ವಿಶೇಷ. ಅಂದಹಾಗೆ ಈ ಸಿನಿಮಾದ ಬಗ್ಗೆ ಈಗ್ಯಾಕೆ ಅಂತೀರಾ? ಬ್ಲಾಕ್‌ಬಸ್ಟರ್  ಮೈ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಿ 17 ವರ್ಷಗಳು ಆಗಿವೆ. ಫೆಬ್ರವರಿ 17, 2006ರಂದು ಈ ಸಿನಿಮಾ ರಿಲೀಸ್ ಆಯಿತು. ಅಂದರೆ ಇಂದಿಗೆ 17 ವರ್ಷಗಳು. ಕಿಚ್ಚ ಸುದೀಪ್ ಸುದೀಪ್ ವೃತ್ತಿ ಬದುಕಿಗೆ ಮರುಹುಟ್ಟು ನೀಡಿದ ಸಿನಿಮಾವಿದು. ಈ ವಿಶೇಷ ಚಿತ್ರದ ಬಗ್ಗೆ ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ. ಎವರ್ ಗ್ರೀನ್ ಸಿನಿಮಾದ ಬಗ್ಗೆ ಮೆಲಕು ಹಾಕಿದ್ದಾರೆ. ಕಿಚ್ಚನ ಮೊದಲ ನಿರ್ದೇಶನದ ಸಿನಿಮಾವೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. 

ಮೈ ಆಟೋಗ್ರಾಫ್ ಸಿನಿಮಾವನ್ನು ನೆನಪಿಸಿಕೊಂಡಿರುವ ಸುದೀಪ್ ತನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸದ್ದಾರೆ. ನಾನು ನಿರ್ದೇಶಕನಾಗಿ 17 ವರ್ಷಗಳು ಆಯಿತು.  ನಿರ್ದೇಶನದ ಕುರ್ಚಿಯಲ್ಲಿ ಕೂರುವುದು ಯಾವಾಗಲೂ ಉತ್ತಮ ಭಾವನೆಯಾಗಿದೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರ ನಟರು, ತಂತ್ರಜ್ಞರು, ನಿರ್ಮಾಣ ತಂಡ, ಸಿಬ್ಬಂದಿ ಮತ್ತು ಸೆಟ್ ನಲ್ಲಿರುವ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.  

ಕಿಚ್ಚನ ಟ್ವೀಟ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದೆ ರೀತಿಯ ಸಿನಿಮಾಗಳನ್ನು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಗ್ರೇಟ್ ಸಿನಿಮಾ ಎಂದು ಹೇಳುತ್ತಿದ್ದಾರೆ. 

ಕಿಚ್ಚನ 120 ಕೋಟಿಯ ಬಿಗ್ ಬಜೆಟ್ ಸಿನಿಮಾಗೆ ಸಿದ್ಧತೆ: ಯುಗಾದಿ ಹಬ್ಬಕ್ಕೆ ಅನೌನ್ಸ್

ಮೈ ಆಟೋಗ್ರಾಫ್ ಸುದೀಪ್ ಗೆ ಮರುಹುಟ್ಟು ನೀಡಿದ ಸಿನಿಮಾ ಮೈ ಆಟೋಗ್ರಾಫ್ ಸಿನಿಮಾ ಪ್ರಾರಂಭಮಾಡುವ ಮೊದಲು ಸುದೀಪ್ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದರು. ಚಿತ್ರರಂಗದಲ್ಲಿ ಸುದೀಪ್ ಅವರ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಈ ಸಮಯದಲ್ಲಿ ಸುದೀಪ್ ಧೈರ್ಯ ಮಾಡಿ, ತನ್ನದೆ ನಿರ್ಮಾಣದಲ್ಲಿ, ತನ್ನದೇ ನಿರ್ದೇಶನದಲ್ಲಿ ಮಾಡಿದ ಸಿನಿಮಾ ಮೈ ಆಟೋಗ್ರಾಫ್. ಆ ಸಮಯದಲ್ಲಿ ಸುದೀಪ್ ಎದುರಿಸಿದ ಕಷ್ಟಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಸುದೀಪ್ ಅವರಿಗೆ ಮರುಹುಟ್ಟು ನೀಡಿದ್ದ ಸಿನಿಮಾ 

ಮೈ ಆಟೋಗ್ರಾಫ್ ಸಿನಿಮಾ ಪ್ರಾರಂಭ ಮಾಡುವ ಮೊದಲು ಸುದೀಪ್ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದರು. ಚಿತ್ರರಂಗದಲ್ಲಿ ಸುದೀಪ್ ಅವರ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಈ ಸಮಯದಲ್ಲಿ ಸುದೀಪ್ ಧೈರ್ಯ ಮಾಡಿ, ತನ್ನದೆ ನಿರ್ಮಾಣದಲ್ಲಿ, ತನ್ನದೇ ನಿರ್ದೇಶನದಲ್ಲಿ ಮಾಡಿದ ಸಿನಿಮಾ ಮೈ ಆಟೋಗ್ರಾಫ್. ಮೊದಲ ನಿರ್ದೇಶನದ ಸಿನಿಮಾವೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಯಿತು. ಕಿಚ್ಚ ಸ್ಟಾರ್ ಆಗಿ ಹೊರಹೊಮ್ಮಿದರು. 

ಘಟನೆ ಬಗ್ಗೆ ತೀವ್ರ ವಿಷಾದವಿದೆ, ಪ್ರೀತಿ ಇರಲಿ; ವಾಲ್ಮಿಕಿ ಜಾತ್ರೆಗೆ ಗೈರಾದ ಬಗ್ಗೆ ಸುದೀಪ್ ರಿಯಾಕ್ಷನ್

ಮೈ ಆಟೋಗ್ರಾಫ್​ ಬಗ್ಗೆ

ಕಿಚ್ಚ ಸುದೀಪ್​, ಮೀನಾ, ಶ್ರೀದೇವಿಕಾ, ದೀಪಾ ಭಾಸ್ಕರ್​ ಮುಂತಾದವರು ನಟಿಸಿದ್ದರು. ಮೈ ಆಟೋಗ್ರಾಫ್​ ಸಿನಿಮಾ 2006ರಲ್ಲಿ ತೆರೆಕಂಡು ಸೂಪರ್​ ಹಿಟ್​ ಆಯಿತು. ಅಂದಹಾಗೆ ಇದು ತಮಿಳಿನ ‘ಆಟೋಗ್ರಾಫ್​’ ಚಿತ್ರದ ರಿಮೇಕ್​. ಆದರೂ ಕೂಡ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿ ಗೆದ್ದರು. ಕನ್ನಡಿಗ ಹೃದಯ ಗೆದ್ದರು ಕಿಚ್ಚ.

ಸೂಪರ್ ಹಿಟ್ ಹಾಡಿಗಳು 

ಭಾರದ್ವಜ್​ ಸಂಗೀತ ನಿರ್ದೇಶನದಲ್ಲಿ ಬಂದ ‘ಮೈ ಆಟೋಗ್ರಾಫ್​’ ಸಿನಿಮಾದ ಎಲ್ಲಾ ಹಾಡುಗಳು ಸೂಪರ್​ ಹಿಟ್​. ‘ಅರಳುವ ಹೂವುಗಳೇ ಆಲಿಸಿರಿ..’, ‘ಸವಿ ಸವಿ ನೆನಪು..’ ಹಾಡುಗಳು ಇಂದಿಗೂ ಕೇಳುಗರ ಹಾಟ್ ಫೇವರಿಟ್.​ 17 ವರ್ಷ ತುಂಬಿದ ಈ ಸಮಯದಲ್ಲಿ ಕಿಚ್ಚ ಮತ್ತೆ ನಿರ್ದೇಶನ ಮಾಡಲಿ, ಮೈ ಆಟೋಗ್ರಾಫ್ ಹಾಗೆಯೇ ಮತ್ತೊಂದು ಸಿನಿಮಾ ನೀಡಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ