'ಇರುವುದೆಲ್ಲವ ಬಿಟ್ಟು' ಚಿತ್ರತಂಡದೊಂದಿಗೆ ಹೊಸ ಸಿನಿಮಾ ಒಪ್ಪಿಕೊಂಡ Meghana Raj!

Suvarna News   | Asianet News
Published : Feb 20, 2022, 05:38 PM IST
'ಇರುವುದೆಲ್ಲವ ಬಿಟ್ಟು' ಚಿತ್ರತಂಡದೊಂದಿಗೆ ಹೊಸ ಸಿನಿಮಾ ಒಪ್ಪಿಕೊಂಡ  Meghana Raj!

ಸಾರಾಂಶ

ಬಹುಭಾಷಾ ನಟಿ ಮೇಘನಾ ರಾಜ್ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್‍ಬ್ಯಾಕ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಮಧ್ಯೆ ಮತ್ತೊಂದು ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿರುವುದಾಗಿ ತಿಳಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 

ಬಹುಭಾಷಾ ನಟಿ ಮೇಘನಾ ರಾಜ್ (Meghana Raj) ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್‍ಬ್ಯಾಕ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಮೇಘನಾ ಗೆಳೆಯ ಪನ್ನಗ ಭರಣ (Pannaga Bharana) ನಿರ್ಮಾಣ ಮಾಡುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಅವರು ನಾಯಕಿಯಾಗಿದ್ದು, ಇದರ ಜತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸಿಂಗ್ ಚಾಂಪಿಯನ್‌'ನಲ್ಲಿ (Dancing Champion) ಮೇಘನಾ ರಾಜ್‌ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದಾರೆ. ಈ ಮಧ್ಯೆ ಮತ್ತೊಂದು ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿರುವುದಾಗಿ ತಿಳಿಸುವ ಮೂಲಕ ಅಭಿಮಾನಿಗಳಿಗೆ (Fans) ಗುಡ್ ನ್ಯೂಸ್ ನೀಡಿದ್ದಾರೆ. 

ಈ ಬಗ್ಗೆ ಮೇಘನಾ ರಾಜ್ ಸಿನಿಮಾದ ಹೆಸರು ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಅನೌನ್ಸ್ ಮಾಡಿದ್ದಾರೆ. ಈ ಹಿಂದೆ 'ಇರುವುದೆಲ್ಲವ ಬಿಟ್ಟು' (Iruvudellava Bittu) ಸಿನಿಮಾದಲ್ಲಿ ಅಭಿನಯಿಸಿದ್ದ ಮೇಘನಾ ರಾಜ್ ಇದೀಗ ಅದೇ ಚಿತ್ರತಂಡದೊಂದಿಗೆ 'ಶಬ್ಧ' (Shabda) ಎಂಬ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಮ್ಮ ಇನ್‍ಸ್ಟಾಗ್ರಾಮ್‍ (Instagram) ಖಾತೆಯಲ್ಲಿ ತಿಳಿಸಿದ್ದಾರೆ. ಸದ್ಯ ಈ ವಿಚಾರವಾಗಿ ಮೇಘನಾ ರಾಜ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಈ ಹಿಂದೆ ನಟಿಸಿದ್ದ 'ಇರುವುದೆಲ್ಲವ ಬಿಟ್ಟು' ಸಿನಿಮಾ ತಂಡದೊಂದಿಗೆ ನನ್ನ ಮುಂದಿನ ಸಿನಿಮಾ 'ಶಬ್ಧ' ಎಂದು ಅನೌನ್ಸ್ ಮಾಡುತ್ತಿದ್ದೇನೆ. 

ಚಿರು ಕೊಟ್ಟ ಮೊದಲ ಗಿಫ್ಟ್‌, ಧ್ವನಿ ಕೇಳಿ ವೇದಿಕೆ ಮೇಲೆ ಭಾವುಕರಾದ Meghana Raj!

ಈ ಚಿತ್ರಕ್ಕಾಗಿ ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಹೀಗಾಗಿ ಈ ಚಿತ್ರತಂಡದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಕಾಂತ ಕನ್ನಳ್ಳಿ (Kantha Kannalli) ಅವರೊಂದಿಗೆ 2ನೇ ಬಾರಿ ಕೆಲಸ ಮಾಡುತ್ತಿರುವುದು ನನಗೆ ವರದಾನವಾಗಿದ್ದು, ಶೀಘ್ರದಲ್ಲೇ ಮುಂದಿನ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರಾರ್ಥನೆಗಳಿಗಾಗಿ ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಮೇಘನಾ ಬಳಿ ಒಂದೊಂದೇ ಸಿನಿಮಾಗಳು ಹುಡುಕಿಕೊಂಡು ಬರುತ್ತಿದ್ದು, ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ಮೇಘನಾ ಅಭಿಮಾನಿಗಳ ಮುಂದೆ ದರ್ಶನ ಕೊಡಲಿದ್ದಾರೆ.



ಇನ್ನು ಮೇಘನಾ ರಾಜ್ ಮುದ್ದು ಮಗ ರಾಯನ್ ರಾಯ್ ಸರ್ಜಾನ (Rayan Raj Sarja) ಆರೈಕೆಯಲ್ಲಿ ದಿನಕಳೆಯುತ್ತಿದ್ದು, ಮುದ್ದು ಮಗನ ಆಟ, ತುಂಟಾಟ ನೋಡುತ್ತಾ ಅಭಿಮಾನಿಗಳೊಂದಿಗೂ ಇದನ್ನು ಶೇರ್ ಮಾಡುತ್ತಿರುತ್ತಾರೆ. ಅಪ್ಪನ ತರನೇ ತುಂಬಾ ತರ್ಲೆ ಮಾಡ್ತಾನಂತೆ ರಾಯನ್ ರಾಯ್ ಸರ್ಜಾ. ಯಾವಾಗಲೂ ಅಮ್ಮ ಅನ್ನು ಅಮ್ಮ ಅನ್ನು ಎಂದರೆ ಪುಟ್ಟ ಕಂದ ಅಪ್ಪ ಅಪ್ಪ ಎನ್ನುತ್ತಾನೆ ಎಂದಿದ್ದಾರೆ ನಟಿ. ಚಿರು ಬಗ್ಗೆ ಆಲೋಚಿಸಿದಾಗ ಅಲ್ಲಿ ಅವನಲ್ಲಿ ಯಾವಾಗಲೂ ನಗು ಇತ್ತು. ಇವತ್ತು ಎಲ್ಲರೂ ಚಿರುನನ್ನು ನೆನಪಿಸಿಕೊಳ್ಳುವಾಗ ಅವನ ನಗುವನ್ನೇ ನೆನಪಿಸಿಕೊಳ್ಳುತ್ತಾರೆ. 

Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

ಖುಷಿಯನ್ನೇ ಹಂಚುತ್ತಾರೆ. ಮುಂದೆ ಏನಾಗುತ್ತೋ ಆಗಲಿ, ಹಿಂದೇನಾಯ್ತೋ ನಮಗೆ ಬೇಕಾಗಿಲ್ಲ. ಈಗಿನ ಕ್ಷಣ ಖುಷಿಯಾಗಿರಬೇಕು ಎಂದು ಈ ಹಿಂದೆ ಹೇಳಿದ್ದರು. ಇನ್ನು ನಟಿ ಮೇಘನಾ ರಾಜ್ ಪಾಲಿಗೆ 2020 ತುಂಬಾನೇ ಕರಾಳವಾಗಿತ್ತು. ಅವರ ಪತಿ ಚಿರಂಜೀವಿ ಸರ್ಜಾ (Chiranjeevi Sarja) ಇಹಲೋಕ ತ್ಯಜಿಸಿದರು. ಇದು ಅವರಿಗೆ ಆಘಾತ ತಂದಿತ್ತು. ಈ ಘಟನೆ ನಡೆದು ಒಂದೂವರೆ ವರ್ಷದ ಮೇಲಾಗಿದೆ. ಆ ನೋವಿನ ಜತೆಯಲ್ಲಿ ಜೀವನ ಸಾಗಿಸುವುದನ್ನು ಮೇಘನಾ ರೂಢಿಸಿಕೊಂಡಿದ್ದು, ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?