ಸ್ಕ್ರಿಪ್ಟ್‌ ರೈಟರ್‌ ಆದ ಮಾನ್ವಿತಾ ಹರೀಶ್‌; ವಿಭಿನ್ನವಾಗಿ ರೆಡಿಯಾಗಿವೆ ಎರಡು ಕಥೆಗಳು!

By Kannadaprabha News  |  First Published Mar 31, 2020, 8:44 AM IST

ಕೊರೋನಾ ಕಾಲದ ಗೃಬಂಧನವನ್ನು ಮಾನ್ವಿತಾ ಹರೀಶ್‌ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರೀಗ ಸಿನಿಮಾದ ಕತೆ, ಚಿತ್ರಕತೆ ಬರೆಯುವುದಲ್ಲಿ ಬ್ಯುಸಿ ಆಗಿದ್ದು, ಈಗಾಗಲೇ ಎರಡು ಚಿತ್ರಕತೆ ಬರೆದಿಟ್ಟಿದ್ದಾರೆ.


ಒಂದು ಚಿತ್ರಕತೆಯನ್ನು ಕೊರೋನಾ ಪರಿಣಾಮದಿಂದ ಶೂಟಿಂಗ್‌ ರದ್ದಾಗುವುದಕ್ಕಿಂತ ಮುಂಚೆ ಬರೆದಿದ್ದರೆ, ಇನ್ನೊಂದು ಈಗಿನ ಹೋಮ್‌ ಕ್ವಾರಂಟೈನ್‌ ಅವಧಿಯಲ್ಲಿ ಬರೆದಿದ್ದು ಎನ್ನುವುದು ವಿಶೇಷ. ‘ಸುಮ್ನೆ ಪ್ರಯತ್ನ ಮಾಡೋಣ ಅಂತ ಬರೆದಿದ್ದೇನೆ . ಇದರಲ್ಲಿ ಒಂದು ಚಿತ್ರಕತೆ ತುಂಬಾ ಹಿಂದೆಯೇ ಬರೆದಿದ್ದು. ಅದಕ್ಕೀಗ ಫೈನಲ್‌ ರೂಪ ಕೊಟ್ಟಿದ್ದೇನೆ. ಮತ್ತೊಂದು ಹೋಮ್‌ ಕ್ವಾರಂಟೈನ್‌ನಲ್ಲಿ ಬರೆದಿದ್ದು’ ಎನ್ನುತ್ತಾರೆ ಮಾನ್ವಿತಾ ಹರೀಶ್‌.

'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ!

Tap to resize

Latest Videos

ಇನ್ನು ನಟಿಯರು ಚಿತ್ರಕತೆ ಬರೆದರೆ ಅದು ಮಹಿಳಾ ಪ್ರಧಾನ ಕತೆಯೇ ಎನ್ನುವ ಕುತೂಹಲ ಮೂಡುವುದು ಸಹಜ.ಆದರೆ ತಾವು ಬರೆದಿದ್ದು ಎರಡೂ ಪಕ್ಕಾ ಕಮರ್ಷಿಯಲ್‌ ಚಿತ್ರಗಳೇ ಎನ್ನುತ್ತಾರೆ ನಟಿ ಮಾನ್ವಿತಾ ಹರೀಶ್‌. ‘ಯಾವ ಥರದ ಕತೆಗಳು, ಏನು ವಿಶೇಷ ಅನ್ನೋದನ್ನು ಸದ್ಯಕ್ಕೆ ಹೇಳಲಾರೆ, ಆದರೆ ಎರಡು ಪಕ್ಕಾ ಕಮರ್ಷಿಯಲ್‌ ಕತೆಗಳೇ ಎನ್ನುವುದು ಬಹುಸ್ಪಷ್ಟ.ನಾಯಕ, ನಾಯಕಿ ಸೇರಿ ಎಲ್ಲಾ ಪಾತ್ರಗಳು ಹಾಗೆಯೇ ಎಲ್ಲಾ ಬಗೆಯ ಕಮರ್ಷಿಯಲ್‌ ಅಂಶಗಳು ಈ ಕತೆಯಲ್ಲಿವೆ’ ಎನ್ನುತ್ತಾರೆ ಮಾನ್ವಿತಾ.

'ಕೆಂಡಸಂಪಿಗೆ'ಯಲ್ಲಿ ಅರಳಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌ ಏನ್‌ ಬಾಂಬ್ ಅಂತೀರಾ!

ಇನ್ನು ಈ ಕತೆಗಳಿಗೆ ನಿರ್ದೇಶಕರು ಯಾರು, ಯಾವಾಗ ಸಿನಿಮಾ ಆರಂಭ ಎಂಬಂತಹ ಕುತೂಹಲದ ಪ್ರಶ್ನೆಗೆ ಅದ್ಯಾವುದನ್ನು ನಾನಿನ್ನು ಯೋಚಿಸಿಲ್ಲ ಎನ್ನುತ್ತಾರೆ ಅವರು.

click me!