
ಮಹಾಮಾರಿ ಕೊರೋನಾ ವೈರಸ್ ಜನರಲ್ಲಿ ವಾಸ್ತವ ಏನೆಂದು ತಿಳಿಸುತ್ತಿದೆ. ಊಟಕ್ಕಾಗಿ, ಒಂದೊಳ್ಳೆ ಬಟ್ಟೆಗಾಗಿ ಊರಿಂದೂರಿಗೆ ಪ್ರಯಾಣಿಸಿ, ಕೆಲಸ ಮಾಡುವವರೆಲ್ಲಾ ತಮ್ಮ ಹುಟ್ಟೂರಿನ ಕಡೆ ಮುಖ ಮಾಡಿದ್ದಾರೆ. ಕೆಲ್ಸ ಕೆಲ್ಸ ಅನ್ಕೊಂಡು ಮನೆಯಲ್ಲಿದ್ದ ಹಿರಿಯರನ್ನೇ ಮರೆಯುವಂತೆ ಮಾಡಿತ್ತು ಜೀವನ. ಈಗ ಅವರೊಟ್ಟಿಗೆ ಸಾಕೆನುವಷ್ಟು ಸಮಯ ಕಳೆಯಲು ಅವಕಾಶ ನೀಡುತ್ತಿದೆ.
ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರ್ ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಸಂಗೀತ ನಿರ್ದೇಶನ ಮಾಡುತ್ತ, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ರವಿ, ತಮ್ಮ ಹುಟ್ಟೂರಿನಲ್ಲಿ ಅಪ್ಪಯ್ಯಂಗ ಕುಲುಮೆ ಮಾಡಲು ಸಹಾಯ ಮಾಡುತ್ತಿದ್ದಾರೆ.
ರವಿಶಂಕರ್ ಭಟ್ ಸಾಹಿತ್ಯಕ್ಕೆ ನಾಗಚಂದ್ರಿಕಾ ಭಟ್ ಮತ್ತು ಮಕ್ಕಳ ಗಾಯನ;ವಿಡಿಯೋ ವೈರಲ್!
ಕುಲುಮೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸಲಾಕೆ ತಯಾರಿಸುತ್ತಿರುವ , ತಂದೆಯನ್ನು ಹದ ಸರಿ ಇದ್ಯಾ ಎಂದು ಕೇಳುತ್ತಾರೆ. ಇದನ್ನು ಮಾಡುವ ಮೂಲಕ ದಿನಕ್ಕೆ 35 ರೂ. ಸಂಪಾದಿಸುತ್ತಿರುವೆ. ಅಪ್ಪನಿಗೆ ಕೊಂಚ ನಿರಾಳವಾಗಿದ್ದು, ನನಗೆ ತಲೆಬಿಸಿ ಕಮ್ಮಿ ಆಗಿದೆ ಎಂದು ಹೇಳಿಕೊಂಡಿದ್ದಾರಂತೆ. 'ಮತ್ತೆ ಹಳೆ ನನಪುಗಳನ್ನು ನೆನಪಿಸಿದ ಭಗವಂತ. ಸೂತ್ರದಾರ ಅವನು, ಪಾತ್ರದಾರಿಗಳು ನಾವು' ಎಂದು ಬರೆದುಕೊಂಡಿದ್ದಾರೆ.
ಹೊಟ್ಟೆಪಾಡಿಗಾಗಿ ಬೆಂಗಳೂರು ಹಾಗೂ ಇತರೆ ದೊಡ್ಡ ದೊಡ್ಡ ಪಟ್ಟಣಗಳನ್ನು ಸೇರಿರುವ ಮಂದಿ, ಇದೀಗ ತಮ್ಮ ಹುಟ್ಟೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು, ಶ್ರೀ ಸಾಮಾನ್ಯನವರೆಗೂ ಇದೇ ಪಾಡು. ಯಾವತ್ತೂ ತೋಟಕ್ಕೆ ಗೊಬ್ಬರ, ಮಣ್ಣು ಹಾಕದವರೂ, ಟೈಮ್ ಪಾಸ್ ಮಾಡಲು ಈ ಕೆಲಸ ಮಾಡಬೇಕಾಗಿದೆ. ಮೊಬೈಲ್, ಟಿವಿ, ಕಂಪ್ಯೂಟರ್ ನೋಡಲು ಹಳ್ಳಿಗಳಲ್ಲಿ ವಿಪರೀತ ಪವರ್ ಕಟ್ ಇರುವುದರಿಂದ ಸಾಧ್ಯವಾಗುವುದೂ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.