ಐಎಂಡಿಬಿ 250 ಸಾರ್ವಕಾಲಿಕ ಭಾರತೀಯ ಶ್ರೇಷ್ಠ ಸಿನಿಮಾಗಳಲ್ಲಿ ಕನ್ನಡ ಚಿತ್ರ ಯಾವುದಿದೆ?

By Suvarna News  |  First Published Oct 3, 2024, 3:43 PM IST

IMDb ಭಾರತದ ಸಾರ್ವಕಾಲಿಕ 250 ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹಲವು ಕ್ಲಾಸಿಕ್ ಮತ್ತು ಹೊಸ ಚಿತ್ರಗಳು ಸ್ಥಾನ ಪಡೆದಿವೆ. ಕನ್ನಡ ಸೇರಿ ಎಲ್ಲಾ ಭಾಷೆಯ ಚಿತ್ರಗಳೂ ಸೇರಿವೆ.


ಐಎಂಡಿಬಿ (www.imdb.com) ಜಗತ್ತಿನ ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಜನಪ್ರಿಯತೆ ಬಗ್ಗೆ ಪಕ್ಕಾ ಮಾಹಿತಿ ನೀಡೋ ಅಧಿಕೃತ ವೆಬ್‌ಸೈಟ್. ವಿಶ್ವವೇ ಈ ಅಧಿಕೃತ ಮೂಲದ ಮೇಲೆ ಅವಲಂಬಿತವಾಗಿದ್ದು, ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಿನಿಮಾ ಹಾಗೂ ಕಿರುತೆರೆ ಶೋ ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಈ ವೆಬ್‌ಸೈಟಿನ ಭಾರತದ ಇನ್‌ಸ್ಟಾಗ್ರಾಮ್‌ ಖಾತೆ  ಅಕ್ಟೋಬರ್ 2022ರಲ್ಲಿ ಆರಂಭವಾಗಿದ್ದು, ಇದೀಗ  250,000 ಫಾಲೋವರ್ಸ್  ಹೊಂದಿದೆ.

ಸಿನಿ ಪ್ರಿಯರು ತಾವು ನೋಡಬೇಕಾದ ಶೋ ಬಗ್ಗೆ ಮಾಹಿತಿ ಪಡೆಯಲು ಐಎಂಡಿಬಿ ಇಂಡಿಯಾದ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ಸ್ ಫಾಲೋ ಮಾಡುತ್ತಾರೆ. ಜಗತ್ತಿನಲ್ಲಿ ಆಗು ಹೋಗುವ ಮನೋರಂಜನಾ ಜಗತ್ತಿನ ಟ್ರೆಂಡ್ಸ್ ಇಲ್ಲಿ ಗೊತ್ತಾಗಿಬಿಡುತ್ತೆ. ಪೂರ್ತಿ ಮನೋರಂಜನೆ ಬೇಕೆಂದರೆ ನಾವು ನೋಡಬೇಕಾದ ಸಿನಿಮಾ ಅಥವಾ ಶೋ ಬಗ್ಗೆ ಪೂರ್ಣ ಅರಿವು ಇರಬೇಕು. ಆದರೆ, ಪರಿಪೂರ್ಣ ಮಾಹಿತಿ ಕೊಡುವ ಏಕೈಕ ಮಾಧ್ಯಮವೆಂದರೆ ಐಎಂಡಿಬಿ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಯಾವ ಮೂವಿ, ಎಲ್ಲಿ ನೋಡಬೇಕು. ಯಾರು ನಟಿಸಿದ್ದಾರೆ ಎಂಬುದರಿಂದ ಹಿಡಿದು,  ಒಂದು ಸಿನಿಮಾದ ಬಗ್ಗೆ ಎಲ್ಲ ಅತ್ಯಗತ್ಯ ಮಾಹಿತಿಗಳು ಈ ಜಾಲತಾಣದಲ್ಲಿ ಲಭ್ಯ. 

Latest Videos

undefined

ಇದೀಗ ಭಾರತೀಯ ಸಾರ್ವಕಾಲಿಕ 250 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದ್ದು, ವಿಶೇಷ ಪೋಸ್ಟರನ್ನೂ ವಿನ್ಯಾಸಗೊಳಿಸಿದೆ. ಇದನ್ನು ಮನೋರಂಜನಾ ಉದ್ಯಮದ ಆಯ್ದ ವಿಶೇಷ ವ್ಯಕ್ತಿಗಳಿಗೆ ಉಡುಗೊರೆಯಾಗಿಯೂ ನೀಡುತ್ತದೆ. ಅಷ್ಟೇ ಅಲ್ಲ ಐಎಂಡಿಬಿ ಇಂಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪರ್ಧೆಯೊಂದನ್ನು ಆಯೋಜಿಸಿದ್ದು, ಆಯ್ದ ಸಿನಿ ಪ್ರಿಯರಿಗೂ ಈ ಪೋಸ್ಟರ್ ಗೆಲ್ಲುವ ಅವಕಾಶವಿದೆ. 

ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಿತ್ರಗಳಿವು: 
ಐಎಂಡಿಬಿ ಟಾಪ್ 250 ಅತ್ಯಧಿಕ ರೇಟಿಂಗ್ ಪಡೆದ ಸಾರ್ವಕಾಲಿಕ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿನಿ ಪ್ರಿಯರು ಜೀವಮಾನದಲ್ಲೊಮ್ಮೆಯಾದರೂ ಈ ಚಿತ್ರಗಳನ್ನು ನೋಡಲೇಬೇಕೆಂಬ ಆಸೆ ಚಿಗರುವಂತೆ ಮಾಡುತ್ತದೆ. ಮನೋರಂಜನಾ ಕ್ಷೇತ್ರದಲ್ಲಿ ಹೊಸತನ್ನು ಅನ್ವೇಷಿಸಲು ಈ ಪಟ್ಟಿ ನೆರವಾಗಲಿದೆ. ಈ ಪಟ್ಟಿಯಲ್ಲಿ ಎಲ್ಲ ವಯಸ್ಸು, ವರ್ಗದವರೂ ಮೆಚ್ಚುವಂಥ ಸಿನಿಮಾಗಳಿದ್ದು, ದಶಕಗಳಿಂದಲೂ ಹೆಚ್ಚು ರೇಟಿಂಗ್ ಪಡೆದ ಚಿತ್ರಗಳಲ್ಲದೇ, ಕನ್ನಡ ಸೇರಿ ಎಲ್ಲ ಭಾಷೆಯ ಚಿತ್ರಗಳೂ ಸೇರಿವೆ ಎಂಬುವುದು ವಿಶೇಷ. ಮತ್ತೊಂದು ವಿಶೇಷವೆಂದರೆ IMDB ಆಗಾಗ ಸಿನಿ ಪ್ರೇಕ್ಷಕರಿಂದಲೇ ವೋಟಿಂಗ್ ಹಾಕಿಸಿಕೊಂಡು ರೇಟಿಂಗ್ ಪಡೆಯುತ್ತದೆ ಎಂಬುವುದು ವಿಶೇಷ. ಅಧಿಕ ವೋಟಿಂಗ್ ಪಡೆದ ಚಿತ್ರಗಳನ್ನು ಅಗತ್ಯ ಮಾಹಿತಿಯೊಂದಿಗೆ ಪಟ್ಟಿ ಮಾಡಿ, ಮೂವಿ ನೋಡಬೇಕೋ, ಬೇಡವೆ ಎಂಬ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳಲು ಸಹಕರಿಸುತ್ತದೆ. 

ಮಹಾರಾಜ ಮೂವಿ ರಿವ್ಯೂ

ಈ ಪಟ್ಟಿಯಲ್ಲಿ ಕಳೆದ ವರ್ಷ ಅಪಾರ ಜನ ಮೆಚ್ಚುಗೆ ಪಡೆದ 12th ಫೇಲ್ ಮೊದಲ ಸ್ಥಾನದಲ್ಲಿದ್ದು, ಜೊತೆಗೆ ಮಹಾರಾಜ, ರಿಷಭ್ ಶೆಟ್ಟಿ ನಿರ್ದೇಶನ, ನಿರ್ಮಾಣದ ಕನ್ನಡದ ಚಿತ್ರ ಕಾಂತಾರ ಮತ್ತು ಆಮೀರ್ ಖಾನ್ ನಿರ್ಮಾಣ ಹಾಗೂ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್‌ನಂತಹ ಇತ್ತೀಚೆಗೆ ಬಿಡುಗಡೆಯಾಗಿ ಹೆಸರು ಮಾಡುತ್ತಿರುವ ಚಿತ್ರಗಳೂ ಇವೆ ಎಂಬುವುದು ವಿಶೇಷ. ಅಷ್ಟೇ ಅಲ್ಲ ಜಾನೇಭಿ ದೋ ಯಾರೋ, ಪರಿಯೇರುಮ್‌ಪೆರುಮಾಳ್ ಮತ್ತು ಪಥೇರ್‌ ಪಾಂಚಾಲಿಯಂತಹ ಹಳೇ ಕ್ಲಾಸಿಕ್‌ ಚಿತ್ರಗಳೂ ಈ ಪಟ್ಟಿಯಲ್ಲಿದ್ದು, ಭಾರತೀಯ ಸಿನಿಮಾ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಒಟ್ಟಾರೆಯಾಗಿ, ಪಟ್ಟಿಯಲ್ಲಿರುವ 250 ಚಲನಚಿತ್ರಗಳು IMDb ನಲ್ಲಿ 8.5 ಮಿಲಿಯನ್‌ಗಿಂತಲೂ ಹೆಚ್ಚು ಮತಗಳನ್ನು ಪಡೆದಿವೆ.

 

ಸೆಪ್ಟೆಂಬರ್ 22, 2024ರಂತೆ ಟಾಪ್‌ 20 ಸಿನಿಮಾಗಳಿವು: 
1.    12 ಫೇಲ್‌ 
2.    ಗೋಲ್‌ಮಾಲ್‌
3.    ನಾಯಕನ್‌ 
4.    ಮಹಾರಾಜ 
5.    ಅಪುರ್ ಸಂಸಾರ್ 
6.    ಅನ್‌ಬೆ ಶಿವಂ 
7.    ಪೆರಿಯೆರುಂ ಪೆರುಮಾಳ್‌ 
8.    3 ಈಡಿಯಟ್ಸ್‌ 
9.    ಹೋಮ್‌ 
10.  ಮಣಿಚಿತ್ರತಾಳ್‌ 
11.  ಬ್ಲಾಕ್‌ ಫ್ರೈಡೇ 
12.  ಕುಂಬಳಂಗಿ ನೈಟ್ಸ್‌ 
13.   ರಾಕೆಟ್ರಿ: ದಿ ನಂಬಿ ಎಫೆಕ್ಟ್ಸ್‌ 
14.  777 ಚಾರ್ಲಿ 
15.  ಕರೀಡಿಂ 
16.  ಕೇರಾಫ್‌ ಕಂಚಾರಪಾಲೆಂ 
17.  ತಾರೆ ಜಮೀನ್‌ ಪರ್
18.  ಸಂದೇಶಂ
19.  ದಂಗಲ್ 
20.  ಲಾಪತಾ ಲೇಡೀಸ್ 

2024ರ ಐದು ಚಿತ್ರಗಳಾದ ಮಹಾರಾಜ, ಮೈದಾನ್, ದಿ ಗೋಟ್‌ ಲೈಫ್‌, ಲಾಪತಾ ಲೇಡಿಸ್ ಮತ್ತು ಮಂಜುಮ್ಮೆಲ್ ಬಾಯ್ಸ್‌  ಈ ಪಟ್ಟಿಯಲ್ಲಿವೆ. 1955ರಲ್ಲಿ ಬಿಡುಗಡೆಯಾದ ಸತ್ಯಜಿತ್ ರೇ ನಿರ್ದೇಶನದ ಶ್ರೇಷ್ಠ ಚಿತ್ರ ಪಥೇರ್ ಪಾಂಚಾಲಿಯೂ ಸೇರಿದೆ ಅನ್ನೋದು ಮತ್ತೊಂದು ವಿಶೇಷ. ದಕ್ಷಿಣ ಭಾರತ ಖ್ಯಾತ 
ಮಣಿರತ್ನಂ ನಿರ್ದೇಶನದ 7 ಚಿತ್ರಗಳು ಈ ಪಟ್ಟಿಯಲ್ಲಿದ್ದು. ನಂತರದ ಸ್ಥಾನದಲ್ಲಿ ಅನುರಾಗ್‌ ಕಶ್ಯಪ್ ನಿರ್ದೇಶನದ 6 ಚಿತ್ರಗಳಿವೆ. 

ಕೆಜಿಎಫ್1-2 ಇವೆ: 
ಅಚ್ಚರಿ ಎಂದರೆ ಸೀಕ್ವೆಲ್‌ಗಳನ್ನು ಒಳಗೊಂಡ 6 ಚಿತ್ರಗಳೂ ಈ ಪಟ್ಟಿಯಲ್ಲಿದೆ. ದೃಶ್ಯಂ ( ಮಲಯಾಳಂ) ಮತ್ತು ದೃಶ್ಯಂ 2 (ಮಲಯಾಳಂ), ದೃಶ್ಯಂ (ಹಿಂದಿ) ಮತ್ತು ದೃಶ್ಯಂ 2 (ಹಿಂದಿ), ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾ ಭಾಯಿ, ಜಿಗರ್‍‌ಥಂಡಾ, ಮತ್ತು ಜಿಗರ್‍‌ ಥಂಡಾ ಡಬಲ್ ಎಕ್ಸ್‌, ಕೆಜಿಎಫ್‌: ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಮತ್ತು ಬಾಹುಬಲಿ: ದಿ ಬಿಗಿನಿಂಗ್‌ ಮತ್ತು ಬಾಹುಬಲಿ 2: ದಿ ಕನ್‌ಕ್ಲೂಷನ್‌ ಚಿತ್ರಗಳಿವೆ.

ರಿಲೀಸ್ ಆದ ಮೊದಲ ದಿನವೇ ಹೆಚ್ಚು ಹಣ ಗಳಿಸಿದ ಚಿತ್ರಗಳಿವು

ಟಾಪ್ 250 ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಚಿತ್ರಗಳ ಪೂರ್ಣ ಪಟ್ಟಿ ನೋಡಲು ಇಲ್ಲಿ ಕ್ಲಿಕ್ಕಿಸಿ:

 

click me!