ಮನೆಯಲ್ಲೇ ಘಮ ಘಮ ತುಪ್ಪ ಮಾಡೋದು ಹೇಗೆ? ತಿಂದ್ರೆ ಏನೆಲ್ಲಾ ಆಗತ್ತೆ? ನಟಿ ಹರಿಪ್ರಿಯಾ ಮಾವನ ಟಿಪ್ಸ್​ ಕೇಳಿ...

Published : Nov 17, 2023, 01:01 PM ISTUpdated : Nov 17, 2023, 01:02 PM IST
ಮನೆಯಲ್ಲೇ ಘಮ ಘಮ ತುಪ್ಪ ಮಾಡೋದು ಹೇಗೆ? ತಿಂದ್ರೆ ಏನೆಲ್ಲಾ ಆಗತ್ತೆ? ನಟಿ ಹರಿಪ್ರಿಯಾ ಮಾವನ ಟಿಪ್ಸ್​ ಕೇಳಿ...

ಸಾರಾಂಶ

ಮನೆಯಲ್ಲೇ ತುಪ್ಪ ಮಾಡೋದು ಹೇಗೆ? ತುಪ್ಪ ತಿಂದರೆ ಪ್ರಯೋಜನಗಳೇನು? ನಟಿ ಹರಿಪ್ರಿಯಾ ಮಾವನ ಟಿಪ್ಸ್​ ಕೇಳಿ...  

ಆಯುರ್ವೇದದಲ್ಲಿ ತುಪ್ಪದ ಬಳಕೆಯ ಕುರಿತು ಹಲವಾರು ಮಾಹಿತಿ ನೀಡಲಾಗಿದೆ. ಭಾರತದಲ್ಲಿನ ಈ ಆಯುರ್ವೇದ ಪದ್ಧತಿಯ ಮಹತ್ವ ಅರಿತಿರುವ ವಿದೇಶಿಗರೂ ಇದೀಗ ತುಪ್ಪವನ್ನು ಅತಿ ಹೆಚ್ಚಿನ ರೀತಿಯಲ್ಲಿ ಬಳಸಲು ಶುರು ಮಾಡಿದ್ದಾರೆ.  ತುಪ್ಪವನ್ನು ಒಂದು ಚಮಚವಾದರೂ ದಿನವೂ ಊಟದ ಜೊತೆ ಸೇವಿಸಿದರೆ, ಅದು ಆರೋಗ್ಯವೃದ್ಧಿಗೆ ಸಹಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ತುಪ್ಪವು, ಜೀವ ರಾಸಾಯನಿಕ ಕ್ರಿಯೆಯಲ್ಲಿ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಒತ್ತಡದ ಸ್ಥಿತಿಯಲ್ಲಿ, ಪಿತ್ತಜನಕಾಂಗವು ಹೆಚ್ಚು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಒತ್ತಡವನ್ನು ಬಿಡುಗಡೆ ಮಾಡಲು, ಉತ್ತಮವಾಗಿ ನಿದ್ರೆ ಮಾಡಲು ಮತ್ತು ತಾಜಾತನ ಪಡೆಯಲು ತುಪ್ಪ ನಿಮಗೆ ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಆಯುರ್ವೇದವು ತುಪ್ಪವನ್ನು ಅಗತ್ಯ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸುತ್ತದೆ.

 ಇದರ ಮಹತ್ವ ಹೆಚ್ಚು ಅರಿತಿರುವ ಜನರು ತುಪ್ಪದ ಬಳಕೆ ಹೆಚ್ಚು ಮಾಡಲು ಶುರು ಮಾಡಿದಂತೆ, ಇದರಲ್ಲಿ ಕಲಬೆರಿಕೆ ಶುರುವಾಗಿದೆ. ಅನಾರೋಗ್ಯಕರ ಡಾಲ್ಡಾ ಮಿಕ್ಸ್​ ಮಾಡುವ ಕಾರಣ, ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಇದೇ ಕಾರಣಕ್ಕೆ ತುಪ್ಪದ ಸಹವಾಸವೇ ಬೇಡ ಎಂದು ಅದರಿಂದ ದೂರ ಇರುವ ಜನರೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಮನೆಯಲ್ಲಿಯೇ ತುಪ್ಪ ತಯಾರಿಸಿ ಸವಿದರೆ ನಿಜವಾಗಿಯೂ ಅದ್ಭುತ ಪರಿಣಾಮ ಸಿಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ನಟಿ ಹರಿಪ್ರಿಯ ಸಿಂಹ ಅವರ ಮಾವ ವಿಜಯ್​ ಸಿಂಹ. ತುಪ್ಪದ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯಗಳನ್ನು ಅವರು ಈ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಮತ್ತು ಮಾವ ವಿಜಯ್​ ಅವರು ಹೇಳಿದ್ದಾರೆ.  

ಆರೋಗ್ಯ ವರ್ಧಕ ಹೆಸರು ಕಾಳಿನ ದೋಸೆ- ಶುಂಠಿ ಚಟ್ನಿ ರೆಸಿಪಿ ತಿಳಿಸಿದ ನಟಿ ಅದಿತಿ ಪ್ರಭುದೇವ

ತುಪ್ಪದಷ್ಟು ಶುದ್ಧವಾದ ಪರಾರ್ಥ ಮತ್ತೊಂದು ಇಲ್ಲ. ಇದು ತಿನ್ನುವವರು ಮನಸ್ಸು, ದೇಹ ಎರಡೂ ಶುದ್ಧವಾಗಿರುತ್ತದೆ. ಇದು ಜೀರ್ಣಕ್ಕೂ ಒಳ್ಳೆಯದು ಎಂದಿದ್ದಾರೆ. ಇದೇ ವೇಳೆ ವಿಜಯ್​ ಅವರು ಬಾಣಂತಿಯವರಿಗೆ ತುಪ್ಪ ಹೆಚ್ಚು ಕೊಡಬೇಕು. ಆಗ ಅವರು ಬೇಗ ಚೇತರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ,  ಚಳಿಗಾಲದಲ್ಲಿ ಮುಖಕ್ಕೆ ಹಚ್ಚಿಕೊಂಡರೆ ಚೆನ್ನಾಗಿರುತ್ತದೆ.  ವಿವಿಧ ಕಾರಣಗಳಿಂದ ತುಂಬಾ ಹೊಟ್ಟೆ ನೋವು ಬಂದಾಗ, ಬಿಸಿ ನೀರಿಗೆ ಅರ್ಧ ಚಮಚ ಹಾಕಿಕೊಂಡು ಕುಡಿದರೆ ಹೊಟ್ಟೆ ನೋವು ಹೋಗುತ್ತದೆ. ಉಷ್ಣದಿಂದ  ಕಣ್ಣು ಕೆಂಪಾದಾಗ ಇದನ್ನು ಹಚ್ಚಿಕೊಂಡರೆ ಕಣ್ಣು ಉರಿ ಹೋಗುತ್ತದೆ ಎಂದಿದ್ದಾರೆ.

ಇದೇ ವೇಳೆ ಕಲಬೆರಕೆಯ ತುಪ್ಪಗಳ ಬಗ್ಗೆಯೂ ಎಚ್ಚರಿಕೆ ನೀಡಿರುವ ಅವರು, ಶುದ್ಧ ತುಪ್ಪ ತಯಾರಿಸುವ ಬಗೆಯನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಊರಿನಿಂದ ತಂದ ಬೆಣ್ಣೆಯನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಬಿಸಿಗೆ ಇಟ್ಟಿದ್ದಾರೆ. ಸುಮಾರು   45 ನಿಮಿಷ ಆದ್ಮೇಲೆ ನೀರು ಇಂಗುತ್ತ ಬರುತ್ತದೆ. ಆಗ  ಜೇನುತುಪ್ಪದ ರೀತಿಯಲ್ಲಿ ಬಣ್ಣ ಬರುತ್ತದೆ. ಅದಾಗಲೇ ಮನೆಯಲ್ಲ ಘಮ ಘಮ ಎನ್ನುತ್ತಿರುತ್ತದೆ. ಸ್ಟಿಕಿ ಸ್ಟಿಕಿ ಆದ ಮೇಲೆ ತುಪ್ಪ ಆಗುತ್ತಾ ಬಂತು ಎಂದು ಅರ್ಥ. ತುಪ್ಪ ಹಲವು ತಿಂಗಳು ಹಾಳಾಗದೇ ಇರಲು ಅದನ್ನು ಇಳಿಸಿದ ಮೇಲೆ ಕೆಲವರು ಮೆಣಸು ಹಾಕುತ್ತಾರೆ, ಇನ್ನು ಕೆಲವರು ವೀಳ್ಯದೆಲೆ ಹಾಕುತ್ತಾರೆ. ಇದು ಹಲವು ಕಡೆಗಳಲ್ಲಿ ಮಾಡುತ್ತಾರೆ ಎಂದಿರುವ ವಿಜಯ್​ ಅವರು, ತಾವು ತಲೆತಲಾಂತರಗಳಿಂದ ಮೊಸರು ಇನ್ನಷ್ಟು ಟೇಸ್ಟ್​ ಆಗಲು ಹಾಗೂ ಹಾಳಾಗದೇ ಇರುವ ಕಾರಣ ಅದಕ್ಕೆ ಒಂದು ಚಮಚ ಮೊಸರು ಹಾಕುವುದಾಗಿ ಹೇಳಿದ್ದಾರೆ.  ಹೀಗೆ ಇಟ್ಟರೆ ಆರು ತಿಂಗಳಿಗೂ ಅಧಿಕ ಕಾಲ ಇರುತ್ತದೆ ಎಂದು ಅವರು ಟಿಪ್ಸ್​ ಕೊಟ್ಟಿದ್ದಾರೆ. ಕೆಳಗೆ ಇಳಿಸಿ ಒಂದು ಚಮಚ ಮೊಸರು ಹಾಕಿದ ನಂತರ ಅದನ್ನು ಆರಲು ಬಿಟ್ಟಿದ್ದಾರೆ.

ತಲೆಗೂದಲು ಸೋಂಪಾಗಿ, ಹೊಟ್ಟಿಲ್ಲದೇ ಬೆಳೆಯಲು ಸಿಂಪಲ್​ ಟಿಪ್ಸ್​ ತಿಳಿಸಿದ ನಟಿ ಅದಿತಿ ಪ್ರಭುದೇವ

ಈ ತುಪ್ಪನ್ನು ಫ್ರಿಜ್​ನ ಐಸ್​ ಟ್ರೇನಲ್ಲಿದ್ದು ಕೂಲ್​ ಮಾಡಿ ನಟಿ ಹರಿಪ್ರಿಯಾ ದೇವರಿಗೆ ಹಚ್ಚುವುದಾಗಿ ಹೇಳಿದರು. ಅಂದಹಾಗೆ,  ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ ಇದೇ ವರ್ಷದ  ಜನವರಿ 26ರಂದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಮದುವೆ ನಡೆದಿದೆ.  ಕೆಲ ವರ್ಷಗಳಿಂದ ಹರಿಪ್ರಿಯಾ (Hari Priya) ಹಾಗೂ ವಸಿಷ್ಠ ಸಿಂಹ (Vasishta Simha) ಆತ್ಮೀಯ ಸ್ನೇಹಿತರಾಗಿದ್ದರು.  ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.  ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಕೆಲವೊಂದು ಮಾಹಿತಿಗಳನ್ನು ಶೇರ್​ ಮಾಡುತ್ತಿರುತ್ತಾರೆ. 


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!