ನಾಯಿ ವಿಡಿಯೋ ಶೇರ್ ಮಾಡಿ ವಸಿಷ್ಠ ಜೊತೆಗಿನ ಲವ್ ಸ್ಟೋರಿ ರಿವೀಲ್ ಮಾಡಿದ ಹರಿಪ್ರಿಯಾ

By Shruthi KrishnaFirst Published Dec 7, 2022, 10:35 AM IST
Highlights

ನಟಿ ಹರಿಪ್ರಿಯಾ ಮುದ್ದು ನಾಯಿಯ ವಿಡಿಯೋ ಶೇರ್ ಮಾಡಿ ವಸಿಷ್ಠ ಜೊತೆಗಿನ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ.  

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟಿ ವಸಿಷ್ಠ ಸಿಂಹ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ಮಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದರು. ಅಂದಹಾಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅಂದಹಾಗೆ ಇಬ್ಬರೂ ಎಲ್ಲಿಯೂ ಪ್ರೀತಿಸುತ್ತಿದ್ದ ಬಗ್ಗೆ ಸುಳಿವು ನೀಡಿರಲಿಲ್ಲ. ಹಾಗಾಗಿ ಇಬ್ಬರು ಮದುವೆ ಸುದ್ದಿ ವೈರಲ್ ಆದಾಗ ಅನೇಕರಿಗೆ  ಅಚ್ಚರಿ ಮೂಡಿಸಿತ್ತು. ಅಂದಹಾಗೆ ಇಬ್ಬರ ನಡುವೆ ಪ್ರೀತಿ ಪ್ರಾಂಭವಾಗಿ ಒಂದು ವರ್ಷವಾಗಿದೆ. ವರ್ಷದಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಯಲ್ಲಿದ್ದಾರೆ. ಅಂದಹಾಗೆ ಇಬ್ಬಗ ಪ್ರೀತಿಗೆ ಕಾರಣವಾಗಿದ್ದು ಒಂದು  ನಾಯಿ. ಹೌದು ಒಂದು ನಾಯಿ ಇಬ್ಬರೂ ಪ್ರೀತಿಯಲ್ಲಿ ಬಿದ್ದು ಇದೀಗ ಮದುವೆ ಸಹ ಆಗುತ್ತಿದ್ದಾರೆ. ನಾಯಿಯಿಂದ ಪ್ರೀತಿನಾ ಎಂದು ಅಚ್ಚರಿ ಪಡಬೇಡಿ. ಈ ಬಗ್ಗೆ ಸ್ವತಃ ಹರಿಪ್ರಿಯಾನೇ ವಿವರಿಸಿದ್ದಾರೆ.

ವಸಿಷ್ಠ ಸಿಂಹ ಮೇಲೆ ಪ್ರೀತಿ ಪ್ರಾರಂಭವಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ ಹರಿಪ್ರಿಯಾ. ವಸಿಷ್ಠ ಸಿಂಹ ಒಂದು ನಾಯಿ ಮರಿಯನ್ನು ಹರಿಪ್ರಿಯಾಗೆ ಗಿಫ್ಟ್ ಆಗಿ ನೀಡಿದ್ದರು. ಈ ನಾಯಿ ಮರಿಯೇ ಇಬ್ಬರ ಪ್ರೀತಿಗೆ ಕಾರಣವಾಗಿದೆ. ಆ ನಾಯಿ ಮರಿಯ ಹೆಸರು ಕ್ರಿಸ್ಟಲ್. ಕ್ರಿಸ್ಟಲ್‌ಗೆ ಒಂದು ವರ್ಷ ಆಯಿತು ಎಂದಿರುವ ಹರಿಪ್ರಿಯಾ ಪ್ರೀತಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. 'ಕ್ರಿಸ್ಟಲ್‌ಗೆ ಒಂದು ವರ್ಷವಾಯಿತು. ಅವನು ಕೂಡ ನನ್ನ ಜೀವನಕ್ಕೆ ಬಂದು ಒಂದು ವರ್ಷವಾಯಿತು'  ಎಂದು ಹೇಳಿದ್ದಾರೆ. 

'ಎಂದೂ ನಿನ್ನ ನೆರಳಾಗಿ ಕಾಯುವೆ'; ಹರಿಪ್ರಿಯಾ ಜೊತೆ ಸಿಂಹ ರೊಮ್ಯಾಂಟಿಕ್‌ ಫೋಟೋ ವೈರಲ್

ಹರಿಪ್ರಿಯಾ ಲಕ್ಕಿ ಮತಾತು ಹ್ಯಾಪ್ ಎರಡು ನಾಯಿಗಳನ್ನು ಸಾಕಿದ್ದರು. ಆದರೆ ಲಕ್ಕಿ ನಾಯಿ ಸತ್ತುಹೋದ ಬಳಿಕ ಹ್ಯಾಪಿ ಒಂಟಿಯಾಗಿತ್ತು. ಲಕ್ಕಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹರಿಪ್ರಿಯಾ ಮತ್ತೆ ಹಿಂದಿರುಗಲಿ ಎಂದು ಅನೇಕ ಬಾರಿ ಕನಸು ಕಂಡಿದ್ದರು. ಆಗ ವಸಿಷ್ಠ ಸಿಂಹ ಕ್ರಿಸ್ಟಲ್ ಅನ್ನು ಗಿಫ್ಟ್ ಆಗಿ ನೀಡಿದರು. ಅಲ್ಲಿಂದ ಪ್ರಾರಂಭವಾಯ್ತಿ ಇಬ್ಬರ ಪ್ರೀತಿ. 

'ಹ್ಯಾಪಿ ಮತ್ತು ಕ್ರಿಸ್ಟಲ್​ ನಡುವೆ ಸ್ನೇಹ ಬೆಳೆಯಲು ಸ್ವಲ್ಪ ಸಮಯ ಹಿಡಿಯಿತು. ಕ್ರಿಸ್ಟಲ್​ ಯಾವಾಗಲೂ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಅದರಿಂದ ಹ್ಯಾಪಿಗೆ ಸಿಟ್ಟು ಬರ್ತಿತ್ತು. ಕ್ರಿಸ್ಟಲ್​ ಮೋಡಿ ಮಾಡಿದ. ಯಾರನ್ನು ಬೇಕಾದರೂ ಬೇಗ ಫ್ರೆಂಡ್​ ಮಾಡಿಕೊಳ್ತಾನೆ. ಹ್ಯಾಪಿ ಜೊತೆಗೂ ಫ್ರೆಂಡ್​ಶಿಪ್​ ಬೆಳೆಸಿಕೊಂಡ. ಈಗ ಅವರಿಬ್ಬರೂ ಜೊತೆಯಲ್ಲೇ ಇರ್ತಾರೆ' ಎಂದು ಹರಿಪ್ರಿಯಾ ಹೇಳಿದರು.

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)

'ಇವತ್ತು ನಿಮಗೊಂದು ಸೀಕ್ರೆಟ್​ ಹೇಳ್ತೀನಿ. ವಸಿಷ್ಠ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಎದೆಯ ಭಾಗದಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ತ್​ ಮಾರ್ಕ್​ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್​ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ' ಎಂದಿದ್ದಾರೆ ಹರಿಪ್ರಿಯಾ. 

ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ ಫೋಟೋ ರಿವೀಲ್; ಮದುವೆ ಯಾವಾಗ?

ಹರಿಪ್ರಿಯಾ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. ನಾಯಿಯಲ್ಲಿ ಅರಳಿದ ಪ್ರೀತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸರಳವಾಗಿ ಲವ್ ಸ್ಟೋರಿ ವಿವರಸಿದ್ದೀರಾ ಎಂದು ಹೇಳುತ್ತಿದ್ದಾರೆ. ಸದ್ಯ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಫೋಟೋ ವೈರಲ್ ಆದ ಬಳಿಕ ಇಬ್ಬರೂ ಮದುವೆ ಆಗುತ್ತಿರುವ ವಿಚಾರವನ್ನು ಅಧಿಕೃತ ಗೊಳಿಸಿದರು. ಅಂದಹಾಗೆ ಇಬ್ಬರ ಮದುವೆ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲಿದೆ ಎನ್ನಲಾಗಿದೆ. 

click me!