Kantara; ರಿಷಬ್ ಶೆಟ್ಟಿ ಸಿನಿಮಾ ನೋಡಿ ತೆಲುಗು ನಿರೂಪಕಿ ಅನಸೂಯ ಹೇಳಿದ್ದೇನು?

By Shruthi Krishna  |  First Published Dec 6, 2022, 4:56 PM IST

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ನೋಡಿ ತೆಲುಗಿನ ಖ್ಯಾತ ನಿರೂಪಕಿ ಅನಸೂಯ ಹಾಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿ ನಟನೆಗೆ ಫಿದಾ ಆಗಿದ್ದಾರೆ. 


ಕಾಂತಾರ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ ನಟ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾ ಇನ್ನೂ ಕೆಲವು ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಕಾಂತಾರ ಹವಾ ಮಾತ್ರ ಇನ್ನು ಕಡಿಮೆ ಆಗಿಲ್ಲ. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಳಿಕ ಕಾಂತಾರ ಇದೀಗ ಒಟಿಟಿಯಲ್ಲಿ ರಿಲೀಸ್ ಆಗಿದೆ. ಒಟಿಟಿಗೆ ಬಂದರೂ ಚಿತ್ರಮಂದಿರಗಳಲ್ಲಿಯೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು ರಿಷಬ್ ಶೆಟ್ಟಿ. 

ಅಂದಹಾಗೆ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಸ್ಯಾಂಡಲ್ ವುಡ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡುವಂತೆ ಒತ್ತಾಯ ಹೆಚ್ಚಿತು. ಬೇಡಿಕೆ ಮೇರಿಗೆ ನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಪ್ರೇಕ್ಷಕರು ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದರು. ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ನೋಡಿ ಹಾಡಿಹೊಗಳಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಕಾರ್ತಿ, ಧನುಷ್, ಪ್ರಭಾಸ್, ಅನುಷ್ಕಾ ಶೆಟ್ಟಿ, ನಾನಿ, ಶಿಲ್ಪಾ ಶೆಟ್ಟಿ, ಕಂಗನಾ, ಸುನಿಲ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾವನ್ನು ಹಾಡಿಹೊಗಳಿದರು. ರಿಷಬ್ ಶೆಟ್ಟಿ ಅಭಿನಯಕ್ಕೆ ಫಿದಾ ಆಗಿದ್ದಾರೆ. 

ಆನೆಗುಡ್ಡೆ ದೇವಸ್ಥಾನದಲ್ಲಿ 'ಕಾಂತಾರ' ಶಿವ; ಕುಟುಂಬ ಸಮೇತ ಭೇಟಿ ನೀಡಿದ ರಿಷಬ್ ಶೆಟ್ಟಿ

Tap to resize

Latest Videos

ರಜನಿಕಾಂತ್ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅಭಿನಯಕ್ಕೆ ಮನಸೋತು ಮನೆಗೆ ಕರೆಸಿಕೊಂಡಿದ್ದರು. ರಜನಿಕಾಂತ್ ಭೇಟಿಯಾಗಿ ರಿಷಬ್ ಕೂಡ ತುಂಬಾ ಸಂತಸ ಪಟ್ಟಿದ್ದರು. ಇದೀಗ ಕಾಂತಾರ ಸಿನಿಮಾ ಬಗ್ಗೆ ಮತ್ತೋರ್ವ ಪರಭಾಷೆಯ ನಟಿ ಮತ್ತು ನಿರೂಪಕಿ ಮಾತನಾಡಿ ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿದ್ದಾರೆ. ಅದು ಮತ್ಯಾರು ಅಲ್ಲ ತೆಲುಗಿನ ಖ್ಯಾತ ನಿರೂಪಕಿ ಅನಸೂಯ ಭಾರಧ್ವಜ್. ರಿಷಬ್ ಶೆಟ್ಟಿ ಅಭಿನಯಕ್ಕೆ ಫಿದಾ ಆಗಿರುವ ಅಗಿರುವ ಅನಸೂಯ ಸಿನಿಮಾ ನೋಡಿ ಅದರಿಂದ ಹೊರಬರಲು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.  
  
'ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅದರಿಂದ ನನಗೆ ಬೇಗ ಹೊರಬರಲಾಗಲಿಲ್ಲ' ಎಂದು ಅಚ್ಚರಿ ಹೊರಹಾಕಿದರು. ಇನ್ನೂ ಸಿನಿಮಾದ ಬ್ಯಾಗ್ರೌಂಡ್ ಸ್ಕ್ರೋರ್ ಬಗ್ಗೆಯೂ ಮಾತನಾಡಿದ್ದಾರೆ.  'ಕಾಂತಾರ ಚಿತ್ರದ ಸೌಂಡ್ ಥಿಯೇಟರ್‌ನಿಂದ ಹೊರಬಂದ ನಂತರವೂ ಕೆಲವು ನಿಮಿಷಗಳ ಕಾಲ ನಮ್ಮನ್ನು ಕಾಡುತ್ತಿತ್ತು ಅಂತಹ ಪ್ರಭಾವ ಬೀರಿದೆ' ಎಂದು ಹೇಳಿದರು. ಅಂದಹಾಗೆ ಇದೇ ಮಾತನ್ನು ಅನಸೂಯಾ ಜೊತೆಗೆ ಹಲವು ಸೆಲೆಬ್ರಿಟಿಗಳು ಕೂಡ ಹೇಳಿದ್ದಾರೆ.

ಹ್ಹೇ...ಲೀಲಾ ಏನಿದು ಅವತಾರಾ? ಕಾಂತಾರ ಸಪ್ತಮಿ ಗೌಡ ಹಾಟ್‌ ಲುಕ್‌ ವೈರಲ್

ಕಾಂತಾರ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನೂ ಖ್ಯಾತ ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ನಟ ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಸ್ಮ್ ನಿರ್ಮಾಣದಲ್ಲಿ ಕಾಂತಾರ ಮೂಡಿ ಬಂದಿದೆ.   

  

click me!