
ಕನ್ನಡ ಚಿತ್ರರಂಗದ ಅದ್ಭುತ ನಟಿ ಭಾವನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ರಾಜಕೀಯ ಹಾಗೂ ಇನ್ನಿತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವರ್ಷಗಳ ಕಾಲ ಮುಂಬೈನಲ್ಲೂ ವಾಸವಿದ್ದರು. ನೃತ್ಯ ಅಂದ್ರೆ ಪಂಚ ಪ್ರಾಣ ಎಂದು ಹೇಳುವ ಭಾವನ ಹಿರಿಯ ನಟಿ ಜಯಂತಿ ಅವರು ಹೇಳಿದ ಕಿವಿ ಮಾತು ಹಾಗೂ ಚಿತ್ರರಂಗದಲ್ಲಿದ್ದ ಹೈಟ್ ಅಂಟ್ ಕಲರ್ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರು ಉದ್ದವಿದ್ದ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣಿಸುವುದಿಲ್ಲ ಅಥವಾ ಆಯ್ಕೆನೇ ಮಾಡೋಲ್ಲ ಅನ್ನೋ ಮಾತುಗಳಿದೆ ಇದರ ಬಗ್ಗೆ ಭಾವನ ರಿಯಾಕ್ಟ್ ಮಾಡಿದ್ದಾರೆ. 'ನಾನು ತುಂಬಾ ಹೈಟ್ ಇರಲಿಲ್ಲ ಹೀಗಾಗಿ ತೊಂದರೆ ಇಲ್ಲ ಆದರೆ ನೀವು ನಟಿ ಪ್ರೇಮಾ ಬಗ್ಗೆ ಯೋಚನೆ ಮಾಡಿದ್ದೀರಾ? ಅವರು 5' 9'' ಇರಬೇಕು ಅನ್ಸುತ್ತೆ. ಫುಲ್ ಹೈಟ್ ಅಂದ್ರೆ ಹೈಟ್. ಆ ಸಮಯದಲ್ಲಿ ಇದ್ದ ಹೀರೋಗಳು ಹಾಗೆನೇ...ರಮೇಶ್ ಅರವಿಂದ್ ಅವರ ಜೊತೆ ಪ್ರೇಮಾ ಅಂದ್ರೆ ನಾನೇ ಓ ಅಂದುಕೊಳ್ಳುತ್ತಿದ್ದೆ. ಅದ್ಬುತ ಕಲಾವಿದರಿಗೆ ಇದ್ದ ಬ್ಯೂಟಿ ಇದೆಲ್ಲಾ ಏಕೆಂದರೆ ರಮೇಶ್ ಸರ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲಆದರೆ ಕೆಲವರಿಗೆ ಆ conciousness ಇದೆ ನಾನು ಕೆಲವರಲ್ಲಿ ನೋಡಿದ್ದೀನಿ ಹಾಗೂ ಅನುಭವಿಸಿರುವೆ.' ಎಂದು ಖಾಸಗಿ ಯೂಟ್ಯೂಬಿಗೆ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಹೈಟ್ ಇರುವುದಾಗಲಿ ಅಥವಾ ಅವರಿಗಿಂತ ಬೆಳ್ಳಗಿದ್ದರೆ ಚೆನ್ನಾಗಿ ಕಂಡರೆ ಅವರಲ್ಲಿ conciousness. ಕನ್ನಡದಲ್ಲಿ ನಾನು ಈ ರೀತಿ ಕಂಡಿಲ್ಲ. ಪ್ರೇಮಾ ತುಂಬಾನೇ ಉದ್ದವಿದ್ದರು, ಇಂಡಿಯನ್ ಸಿನಿಮಾ ಅಂತ ಬಂದಾಗ ಸುಶ್ಮಿತಾ ಸೇನ್ ನಂತರ ಪ್ರೇಮಾ ಅವರೇ ಉದ್ದ ಇದ್ದವರು. ತುಂಬಾ ಎತ್ತರವಿದ್ದರೆ ಪಿಕ್ಚರ್ ಮ್ಯಾಗ್ನಿಫೈ ಆದಾಗ ಹೆಗಲು ಅಗಲ ಕಾಣಿಸುತ್ತದೆ ಇರುವುದಕ್ಕಿಂತ 20% ಹೆಚ್ಚಿಗೆ ಕಾಣಿಸುತ್ತೀವಿ ಆ ಮೇಲೆ ಇನ್ನೂ ದಪ್ಪ ಕಾಣಿಸುತ್ತೀವಿ. ಹುಡುಗರು ತುಂಬಾ ಫಿಟ್ ಆಗಿದ್ದರೆ ಹುಡುಗಿಯರು ಬಲವಾಗಿ ಕಾಣಿಸಿಬಿಡುತ್ತಾರೆ. ಇದೆಲ್ಲಾ ಈಗಲ್ಲೂ ನಡೆಯುತ್ತದೆ' ಎಂದು ಭಾವನ ಹೇಳಿದ್ದಾರೆ.
'ರಾಮಾಚಾರಿ' ಧಾರಾವಾಹಿಯಿಂದ ನಟಿ ಭಾವನಾ ಔಟ್; ಮಾನ್ಯತಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ
ಹೆಸರು ಬದಲಾಯಿಸಲು ಕಾರಣ:
'ನಂದಿನಿಯಿಂದ ಭಾವನ ಎಂದು ಹೆಸರು ನಾನು ಬದಲಾಯಿಸಿಕೊಂಡಿರುವುದು. ನಾನು ಇಷ್ಟ ಪಟ್ಟ ಬದಲಾಯಿಸಿಕೊಂಡಿರುವುದು. ಆಗಲೇ ನಾನು ನಂದಿನಿ ರಾಮಣ್ಣ ಅಂತ ಫೇಮಸ್ ಅಗಿದ್ದೆ ಈಗಲ್ಲೂ ನಂದಿನಿ ಎಂದು ಕರೆಯುತ್ತಾರೆ. ನನ್ನ ಮೊದಲು ತುಳು ಸಿನಿಮಾದಲ್ಲಿ ನಂದಿನಿ ರಾಮಣ್ಣ ಅಂತಾನೇ ಬರುತ್ತದೆ ಹಿಂದಿ ಸಿನಿಮಾ ಟೈಟಲ್ ಕಾರ್ಡ್ ಕೂಡ ಹಾಗೆ ಇದೆ. ಇಬ್ರು ಮೂರು ಜನ ನಂದಿನಿ ಅಂತ ಇದ್ರು ಅಂದುಕೊಂಡ ಮಟ್ಟಕ್ಕೆ ಅವರಿಗೆ ಸಾಧನೆ ಮಾಡಲಿಲ್ಲ ಅಂತ ಹೆಸರು ಬದಲಾಯಿಸಿಕೊಳ್ಳಲು ಸರ್ ಹೇಳಿದ್ದರು. ನಂದಿನಿ ಹೆಸರು ಯಾರಿಗೂ ವರ್ಕ್ ಆಗಿಲ್ಲ ಎಂದರು. ನಮ್ಮ ಮನೆಯಲ್ಲಿ ಯಾರನ್ನು ಕೇಳಿಲ್ಲ ಅವರೇ ಹೆಸರು ಆಯ್ಕೆ ಮಾಡಿಕೊಂಡು ಬಂದರು. ಮನೆಯಲ್ಲಿ ಇವತ್ತಿಗೂ ನಂದಿನಿ ಎಂದು ಕರೆಯುತ್ತಾರೆ' ಎಂದಿದ್ದಾರೆ ಭಾವನ.
ಭಾವನೆ ಅವರಿಗೆ ನೃತ್ಯ ಅಂದ್ರೆ ತುಂಬಾನೇ ಇಷ್ಟ. ಎಂದೂ ನೀನು ಡ್ಯಾನ್ಸ್ ನಿಲ್ಲಸಬೇಡ ಅದು ನಿನ್ನ ವಿದ್ಯೆ ಎಂದು ಹಿರಿಯ ನಟಿ ಜಯಂತಿ ಅವರು ಕಿವಿ ಮಾತು ಹೇಳಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.