2 ವರ್ಷದ ರಾಯನ್‌ಗೆ ಹೊಸ ಕಾರು ಗಿಫ್ಟ್‌ ಕೊಟ್ಟ ಮೇಘನಾ ರಾಜ್; ಬರ್ತಡೇ ವಿಡಿಯೋ ವೈರಲ್

By Vaishnavi Chandrashekar  |  First Published Dec 29, 2022, 5:02 PM IST

ಪುತ್ರನ ಬರ್ತಡೇ ವಿಡಿಯೋ ಹಂಚಿಕೊಂಡ ಮೇಘನಾ ರಾಜ್. ಹೊಸ ಕಾರು ಗಿಫ್ಟ್‌ ಕಂಡು ನೆಟ್ಟಿಗರು ಶಾಕ್.....


ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ತಮ್ಮ ಪುತ್ರ ರಾಯನ್ ರಾಜ್‌ ಸರ್ಜಾ 2ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅಕ್ಟೋಬರ್ 22ರಂದು ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಪಾರ್ಟಿ ಇದಾಗಿದ್ದು ರಾಯನ್ ತುಂಟಾಟವನ್ನು ಈ ವಿಡಿಯೋದಲ್ಲಿ ನೋಡಬಹುದು. ಅಷ್ಟಕ್ಕೂ ಈ ವಿಡಿಯೋ ಎಲ್ಲಿದೆ ಎಂದು ಚಿಂತಿಸಬೇಡಿ....ಮೇಘನಾ ರಾಜ್‌ ಯೂಟ್ಯೂಬ್ ಚಾನೆಲ್‌ನಲ್ಲಿದೆ. 

ಹೌದು! ಡಿಸೆಂಬರ್ 25ರಂದು ಮೇಘನಾ ರಾಜ್‌ ತಮ್ಮ ಯೂಟ್ಯೂಬ್ ಚಾನೆಲ್‌ ಆರಂಭಿಸಿದರು. ಮೊದಲ ವಿಡಿಯೋ ಏನಿರಬಹುದು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದರು. 'ನನ್ನ ಯೂಟ್ಯೂಬ್ ಲಾಂಚ್ ಮಾಡಿರುವ ವಿಚಾರ ನಿಮ್ಮಗೆ ಗೊತ್ತಿದೆ. ನನ್ನ ಲೈಫ್‌ ಸ್ಟೈಲ್ ಪ್ರತಿಯೊಂದರ ಬಗ್ಗೆ ಯೂಟ್ಯೂಬ್‌ನಲ್ಲಿ ಮಾತನಾಡುತ್ತೀನಿ. ಏನಾದರೂ ಸ್ಪೆಷಲ್ ಪೋಸ್ಟ್‌ ಮಾಡಬೇಕು ಅಂದ್ರೆ ಅದು ನನ್ನ ಮಗ...ಆತನೇ ನನ್ನ ಲೈಫ್‌ನ ಸ್ಪೆಷಲ್ ವ್ಯಕ್ತಿ. ರಾಯನ್ ಬರ್ತಡೇ ವಿಡಿಯೋವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ' ಎಂದು ಮೇಘನಾ ಹೇಳಿದ್ದಾರೆ. 

Tap to resize

Latest Videos

'ನಾನು ಯಾವ ರೀತಿ ಗುರುತಿಸಿಕೊಳ್ಳಬೇಕು ಅಂದ್ರೆ ರಾಯನ್ ರಾಜ್ ಸರ್ಜಾ ಅಜ್ಜಿ ಎಂದು ಗುರುತಿಸಿಕೊಳ್ಳಬೇಕು. ನನ್ನನ್ನು ಅಮ್ಮಾಚ್ಚಿ ಎಂದು ಕರೆಯುತ್ತಾನೆ. ರಾಯನ್ ಬರ್ತಡೇ ನಮಗೆಲ್ಲಾ ಒಂದು ದೊಡ್ಡ ಹಬ್ಬ' ಎಂದು ಅಜ್ಜಿ ಪ್ರಮೀಳಾ ಹೇಳಿದ್ದಾರೆ. 'ರಾಯನ್ ತುಂಬಾ ಕ್ಯೂಟ್‌ ಲಿಟಲ್ ಲಿಟಲ್ ಟೈನಿ ಟೈನಿ ನಡಿಗೆ ಇಷ್ಟವಾಗುತ್ತದೆ. ಈ ಎರಡು ವರ್ಷಗಳಲ್ಲಿ ಅವನು ಎಷ್ಟು ಬೆಳೆದಿದ್ದಾನೆ ಎಷ್ಟು ತಿಳಿದುಕೊಂಡಿದ್ದಾನೆ, ಎಷ್ಟು ಮುಗ್ಧನಾಗಿದ್ದಾನೆ ಎಷ್ಟು ತಿಳಿದುಕೊಂಡಿದ್ದಾನೆ ...ಅವನ ತೊದಲು ತೊದಲು ಮಾತುಗಳನ್ನು ಕೇಳೋಕೆ ಆನಂದವಾಗುತ್ತದೆ.' ಎಂದು ಸುಂದರ್ ರಾಜ್‌ ಮಾತನಾಡಿದ್ದಾರೆ. 

ಮೇಘನಾ ರಾಜ್‌ ಪುತ್ರನಿಗೆ ಕೆಂಪು ಕಪ್ಪು ಬಣ್ಣದ ಜೀಪ್‌ ಗಿಫ್ಟ್‌ ಕೊಟ್ಟಿದ್ದಾರೆ. ಓಪನ್ ಮಾಡಿದ ರಾಯನ್ ಕುಣಿದು ಕುಪ್ಪಳಿಸಿದ್ದಾನೆ. 'ನನ್ನ ಮಗನ ಜನ್ಮದಿನ ಅದು ರಾಯನ್ ರಾಜ್ ಸರ್ಜಾ ತುಂಬಾ ಖುಷಿಯಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಎನೇ ಬೇಸರ ಇರಲಿ ರಾಯನ್‌ನ ನೋಡಿದ ತಕ್ಷಣ ಎಲ್ಲಾ ಮರೆತು ಬಿಡುತ್ತೀವಿ. ರಾಯನ್ ಈಗ ಧುವ ಧುವ ಎಂದು ಕರೆಯಲು ಶುರು ಮಾಡಿದ್ದಾನೆ. ಅದೇ ಖುಷಿ ಅದೇ ಜೀವನದಲ್ಲಿ ಮರೆಯಲಾಗದ ಕ್ಷಣ. ಅತ್ತಿಗೆ ಅವರ ಯೂಟ್ಯೂನ್ ಚಾನೆಲ್ ನೋಡುವವರು ಸಪೋರ್ಟ್‌ ಮಾಡಿ' ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

Meghana Raj ರಾಯನ್ ರಾಜ್‌ ಸರ್ಜಾ ಬರ್ತಡೇ; ಪುತ್ರನ ತುಂಟ ಫೋಟೋ ಹಂಚಿಕೊಂಡ ನಟಿ!

ಪ್ರವಾಸದ ಫೋಟೋಗಳು ವೈರಲ್:

2022ರಲ್ಲಿ ಅಂತ್ಯದಲ್ಲಿ ಮೇಘನಾ ರಾಜ್‌ ತಮ್ಮ ಗರ್ಲ್‌ ಗ್ಯಾಂಗ್ ಜೊತೆ ಥೈಲ್ಯಾಂಡ್ ಟ್ರಿಪ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಫೋಟೋ ಹಂಚಿಕೊಂಡಾಗ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಿ ವ್ಯಕ್ತ ಪಡಿಸಿದ್ದರು. ಇದರ ಬಗ್ಗೆ ಮೇಘನಾ ಮಾತ್ರವಲ್ಲ ತಂದೆ ಸುಂದರ್ ರಾಜ್‌ ಕೂಡ ರಿಯಾಕ್ಟ್‌ ಮಾಡಿದ್ದರು.

'ಹಲವು ವರ್ಷಗಳೇ ಆಗಿತ್ತು ನಾನು ಮತ್ತು ನನ್ನ ಗರ್ಲ್‌ ಗ್ಯಾಂಗ್ ಜೊತೆ ಟ್ರಿಪ್ ಮಾಡಿ. ಟ್ರಿಪ್‌ಗೆ ಹೋಗಿದ್ದ ನಾವೆಲ್ಲರೂ ತಾಯಂದಿರು ಹೀಗಾಗಿ ಒಂದು ದೊಡ್ಡ ಬ್ರೇಕ್ ಅಗತ್ಯವಿತ್ತು. ಕಳೆದ ಬಾರಿ ನಾವು 2018ರಲ್ಲಿ ಬ್ಯಾಚುಲರ್ ಪಾರ್ಟಿ ಮಾಡಲು ಸಿಂಗಪೂರ್‌ಗೆ ಹೋಗಿದ್ದು. ಆದರೆ ಈ ಸಲ ಥೈಲ್ಯಾಂಡ್‌ ಹೋಗುವ ಪ್ಲ್ಯಾನ್ ಮಾಡಿದ ಕಾರಣವೇ ಚಿರು ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಅಲ್ಲಿ ಸೆಲೆಬ್ರೇಟ್ ಮಾಡಿದ್ದರು. ಚಿರು ಭೇಟಿ ಕೊಟ್ಟ ಸ್ಥಳಗಳಿಗೆ ಭೇಟಿ ಕೊಟ್ಟ ಪ್ರತಿ ಕ್ಷಣವನ್ನು ರೀ-ಕ್ರಿಯೇಟ್ ಮಾಡಿದೆವು' ಎಂದು ಮೇಘನಾ ರಾಜ್‌ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

 

click me!