ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?

By Shriram Bhat  |  First Published Jul 12, 2024, 11:48 AM IST

ನಟಿಯಾಗಿ ಹೆಚ್ಚು ಮಿಂಚದಿದ್ದರೂ ನಿರೂಪಕಿಯಾಗಿ ಅಪರ್ಣಾ ಮಾಡಿದ ಸಾಧನೆ ಹೇಳಲಸಾಧ್ಯ. ಅದೆಷ್ಟು ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ, ಅದೆಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು..


ಅಚ್ಚಗನ್ನಡದ ಸ್ವಚ್ಛ ಪದಬಳಕೆಯ ನಿರೂಪಕಿ ಅಪರ್ಣಾ (Aparna) ಇನ್ನಿಲ್ಲ ಎಂಬ ಸುದ್ದಿ ನಿಜವಾಗಿಯೂ ಕನ್ನಡಿಗರಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ಅಪರ್ಣಾ ಪ್ರಾರಂಭದಲ್ಲಿ ನಟಿಯಾಗಿ ತಮ್ಮ ಛಾಪು ಮೂಡಿಸಿದ್ದರೂ ಬಳಿಕ ಅವರು ಕನ್ನಡದ ಅಮೋಘ ನಿರೂಪಕಿಯಾಗಿಯೇ ಹೆಚ್ಚು ಪ್ರಸಿದ್ಧರಾದರು. ಕ್ಯಾನ್ಸರ್ ಮಹಾಮಾರಿಯೊಂದಿಗೆ ಹೋರಾಡಿ ಕೊನೆಗು ಸೋತು ಸಾವಿಗೆ ಶರಣಾಗಿದ್ದಾರೆ ಅಪರ್ಣಾ. ಆದರೆ. ಅವರು ಬಿಟ್ಟುಹೋದ ಕನ್ನಡತನ, ಸವಿನೆನಪುಗಳು ಎಂದೆಂದಿಗೂ ಜೀವಂತ ಎಂಬುದು ಸತ್ಯ!

ಹಾಗಿದ್ದರೆ ನಟಿ, ನಿರೂಪಕಿ ಅಪರ್ಣಾ (Aparna Vastarey) ಸಾವು ಕನ್ನಡಿಗರ ಮನಸ್ಸಿಗೆ ಯಾಕಿಷ್ಟು ಆಘಾತ ನೀಡಿದೆ? ಅವರಲ್ಲಿ ಅಂತಹಾ ಮಾಂತ್ರಿಕತೆ ಏನಿತ್ತು? ಅಪರ್ಣಾ ಸಾವು ಯಾಕೆ ಕರುನಾಡಿಗೆ ತುಂಬಲಾರದ ನಷ್ಟ ಎಂಬುದು ಬಹುತೇಕರಿಗೆ ಅರ್ಥವಾಗಿದೆ. ಕಾರಣ, ಇಂಗ್ಲೀಷ್ ಆಕ್ರಮಣದಿಂದ ಕನ್ನಡ ನರಳುತ್ತಿರುವ ಈ ಕಾಲದಲ್ಲಿ ಅಪರ್ಣಾ ಅವರು ತುಂಬಾ ಸ್ವಚ್ಛವಾದ ಕನ್ನಡ ಪದಗಳನ್ನು ಬಳಸುತ್ತಿದ್ದರು. ಜೊತೆಗೆ, ಕಂಗ್ಲೀಷ್‌ನಲ್ಲಿಯೇ ನಿರೂಪಣೆಯನ್ನು ಮಾಡುವವರ ಮಧ್ಯೆ ಅಪರ್ಣಾ ಕನ್ನಡತನ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. 

Tap to resize

Latest Videos

ಬೆಂಗಳೂರಲ್ಲೆ ಬೇಕಾದಷ್ಟು ಜಾಗ ಸಿಗ್ತವೆ, ಮಾರಿದ್ರೆ ತುಂಬಾ ರೇಟೂ ಬರುತ್ತೆ; ರಾಕಿಂಗ್ ಸ್ಟಾರ್ ಯಶ್!

ಪುಟ್ಟಣ್ಣ ಕಣಗಾಲರ 'ಮಸಣದ ಹೂವು' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರೂ ಅಪರ್ಣಾ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಅಂದುಕೊಂಡಷ್ಟು ಅವಕಾಶಗಳು ಬರಲಿಲ್ಲ ಎನ್ನಬಹುದು. ಆದರೆ, ಅಪರ್ಣಾ ಅವರ ಕೆಲವು ಆಪ್ತರು ಹೇಳುವಂತೆ, ಅವರಿಗೆ ಅವಕಾಶ ಸಿಗಲಿಲ್ಲ ಎನ್ನುವುದಕ್ಕಿಂತ ಅವರು ಆಯ್ಕೆಯಲ್ಲಿ ತುಂಬಾ ಚೂಸಿಯಾಗಿದ್ದಾರೆ. ತಮಗೆ, ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಪಾತ್ರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಿದ್ದ ನಟಿ ಅಪರ್ಣಾ, ಹೆಚ್ಚು ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುವ ಯತ್ನವನ್ನೇ ಮಾಡಲಿಲ್ಲ ಎನ್ನಲಾಗಿದೆ. 

ಹಾಸನದಲ್ಲೇ ಹುಟ್ಟಿರೋ ಮಗ ನಾನು, ನಮ್ ತಂದೆ-ತಾಯಿ ಹಾಸನದವ್ರೇ..; KGF ಸ್ಟಾರ್ ಯಶ್!

ನಟಿಯಾಗಿ ಹೆಚ್ಚು ಮಿಂಚದಿದ್ದರೂ ನಿರೂಪಕಿಯಾಗಿ ಅಪರ್ಣಾ ಮಾಡಿದ ಸಾಧನೆ ಹೇಳಲಸಾಧ್ಯ. ಅದೆಷ್ಟು ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ, ಅದೆಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಅವರು ಪಡೆದಿದ್ದಾರೆ ಎಂದರೆ, ಅದೇ ಒಂದು ಸಾಧನೆಯ ಉತ್ತಂಗಕ್ಕೆ ಸಾಕ್ಷಿ ಎನ್ನಬಹುದು. ಆದರೆ, 2 ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್‌ಗೆ ತಾನು ಒಳಗಾಗಿದ್ದೇನೆ ಎಂದಾಗಲೂ ಅಪರ್ಣಾ ಮಾನಸಿಕವಾಗಿ ಕುಗ್ಗದೇ ತಮ್ಮಿಂದಾದ ಹೋರಾಟ ಮಾಡುತ್ತಲೇ ಇದ್ದರು. 

ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!

ಆದರೆ, ಅಪರ್ಣಾ ನಿನ್ನೆ, ಅಂದರೆ 11 ಜುಲೈ 2024ರಂದು ಇಹಲೋಕ ತ್ಯಜಿಸಿದ ಅಪರ್ಣಾ ಅವರು ಕನ್ನಡ ನಾಡಿನ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದಾರೆ. ಸಾವಿನ ನಂತರವೂ ಉಳಿಯುವುದು ಸಾಧನೆಯೊಂದೇ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಅಪರ್ಣಾ ಸಾವಿನ ಬಳಿಕ ಹರಿದು ಬರುತ್ತಿರುವ ಭಾವನಾತ್ಕಕ ಸಂದೇಶಗಳನ್ನು ನೋಡಿದರೆ, ಅವರ ಸಾಧನೆ ಅದೆಷ್ಟು ಮೇರು ಮಟ್ಟದ್ದು ಎಂಬುದು ಅರ್ಥವಾಗುತ್ತದೆ. ಅಂದಹಾಗೆ, ಅಪರ್ಣಾ ಅವರು ನಟಿಸಿದ ಚಿತ್ರಗಳು ಇವು.. 

ಮಸಣದ ಹೂವು (1985)
ಸಂಗ್ರಾಮ (1987)
ನಮ್ಮೂರ ರಾಜ (1988)
ಸಾಹಸ ವೀರ (1988)
ಮಾತೃ ವಾತ್ಸಲ್ಯ (1988)...ರೋಹಿಣಿ
ಒಲವಿನ ಆಸರೆ (1989)
ಇನ್‌ಸ್ಪೆಕ್ಟರ್ ವಿಕ್ರಮ್ (1989)
ಒಂದಾಗಿ ಬಾಲು (1989)
ಡಾಕ್ಟರ್ ಕೃಷ್ಣ (1989)
ಒಂಟಿ ಸಲಗ (1989)
ಚಕ್ರವರ್ತಿ (1990)
ಗ್ರೇ ಗೇಮ್ಸ್ (2024)...ತಾರಾ

ಎಲ್ಲ ಕಥೆಗಳೂ ಸುಖಾಂತ್ಯ ಕಾಣುವುದಿಲ್ಲ, ಮಿಸ್ ಯೂ ಕ್ವೀನ್; ಈ ಕ್ಲಿಪಿಂಗ್‌ಗೆ ಕಣ್ಣೀರೇ ಕಾಮೆಂಟ್..!

click me!