ಮನೆ ಊಟದ ಅರ್ಜಿ ವಾಪಸ್ ಪಡೆಯೋದಾಗಿ ಹೈಕೋರ್ಟ್ಗೆ ದರ್ಶನ್ ಪರ ವಕೀಲರು ಮೆಮೋ ಸಲ್ಲಿಸಿದ್ದಾರೆ. ಹೀಗಾಗಿ ದರ್ಶನ್‌ಗೆ ಇನ್ಮುಂದೆ ಪರಪ್ಪನ ಅಗ್ರಹಾರದ ಜೈಲೂಟವನ್ನೆ ಸೇವಿಸಲಿದ್ದಾರೆ. ಈ ಮಧ್ಯೆ ಇನ್ನೊಂದು ಬೆಳವಣಿಗೆ ಆಗಿದೆ. ಅದೇನೆಂದರೆ..
ನಟಿ ಹಾಗೂ ದರ್ಶನ್ (Darshan) ಗೆಳತಿ ಪವಿತ್ರಾ ಗೌಡಗೆ (Pavithra Gowda) ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕನ್ನಡದ ಸ್ಟಾರ್ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿರುವುದು ಗೊತ್ತೇ ಇದೆ. ಕಳೆದ 39 ದಿನಗಳಿಂದ ಅಲ್ಲಿ ನ್ಯಾಯಾಂಗ ಬಂಧನದಲ್ಲಿರೋ ನಟ ದರ್ಶನ್, 'ನನಗೆ ಜೈಲೂಟ ಮಾಡೋದಕ್ಕೆ ಆಗಲ್ಲ, ಮನೆ ಊಟವನ್ನೇ ಕೊಡಿ; ಅಂತ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈಗ ಮನೆಯೂಟಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನಟ ದರ್ಶನ್ ಲಾಯರ್ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
'ನನಗೆ ಜೈಲೂಟ ಹಿಡಿಸುತ್ತಿಲ್ಲ. ಮನೆ ಊಟವೇ ಬೇಕು. ಆರೋಗ್ಯ ಹಾಳಾಗುತ್ತಿದೆ ಅಂತ ಕೋರ್ಟ್ಗೆ ಮೊರೆ ಹೋಗಿದ್ದ ದರ್ಶನ್‌ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಶಾಕ್ ಕೊಟ್ಟಿತ್ತು. ಇಲ್ಲ ಇಲ್ಲ ಮನೆ ಊಟ ಕೊಡೋಕೆ ಆಗಲ್ಲ. ಕಾನೂನು ಎಲ್ಲರಿಗೂ ಒಂದೇ ಅಂತ ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿತ್ತು. ಇದನ್ನ ಪ್ರಶ್ನಿಸಿ ನಟ ದರ್ಶನ್ ಮನೆಯೂಟಕ್ಕಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ ಈಗ ತನ್ನ ಮನೆ ಊಟದ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ.
undefined
ಪ್ಯಾನ್ ಇಂಡಿಯಾ ಟ್ರೆಂಡ್ ಭೂತಪ್ರೇತವೇ? ಇದಕ್ಕೆ ಬೈದರೆ ಸಮಸ್ಯೆ ಪರಿಹಾರ ಆಗುವುದೇ? ಯೆಸ್ or ನೋ..?!
ಮನೆ ಊಟದ ಅರ್ಜಿ ವಾಪಸ್ ಪಡೆಯೋದಾಗಿ ಹೈಕೋರ್ಟ್ಗೆ ದರ್ಶನ್ ಪರ ವಕೀಲರು ಮೆಮೋ ಸಲ್ಲಿಸಿದ್ದಾರೆ. ಹೀಗಾಗಿ ದರ್ಶನ್‌ಗೆ ಇನ್ಮುಂದೆ ಪರಪ್ಪನ ಅಗ್ರಹಾರದ ಜೈಲೂಟವನ್ನೆ ಸೇವಿಸಲಿದ್ದಾರೆ. ಈ ಮಧ್ಯೆ ಇನ್ನೊಂದು ಬೆಳವಣಿಗೆ ಆಗಿದೆ. ಅದೇನೆಂದರೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕೆ ದೇವಾಲಯದ ಕುಂಕುಮ ಹಾಗೂ ಪ್ರಸಾದವನ್ನು ಪತಿ ದರ್ಶನ್‌ಗೆ ಕೊಟ್ಟಿದ್ದಾರೆ.
ದರ್ಶನ್ ಮನೆಯೂಟದ ಅರ್ಜಿ ವಾಪಸ್ ಪಡೆಯುತ್ತಿದ್ದಂತೆ ಸೆಂಟ್ರಲ್ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalaksmi) ಆಗಮಿಸಿದ್ದಾರೆ. ಮೊನ್ನೆಯಷ್ಟೆ ಕೊಲ್ಲೂರು ಮೂಕಾಂಬಿಕೆ ದೇವಿಗೆ ನವ ಚಂಡಿಕಾ ಯಾಗ ಪೂಜೆ ಮಾಡಿಸಿಕೊಂಡು ಬಂದಿದ್ದರು ವಿಜಯಲಕ್ಷ್ಮಿ. ದರ್ಶನ್ ಗೆ ಅಂಟಿರೋ ಕೊಲೆ ಆರೋಪ ದೂರಾಗ್ಲಿ ಅಂತ ಕೊಲ್ಲೂರು ಮುಕಾಂಬಿಕೆ ದೇವಿಯ ಪ್ರಸಾದ ತಂದು ಕೊಟ್ಟಿದ್ದಾರೆ ಎನ್ನಲಾಗಿದೆ. ಇವೆಲ್ಲವುಗಳ ಜೊತೆಗೆ, ನಟ ದರ್ಶನ್ ಆಪ್ತರಲ್ಲೊಬ್ಬರಾದ ಸಾಹಿತಿ ಕವಿರಾಜ್ ಅವರು ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ.
ಸ್ಟಾರ್ ನಟಿ ಜೊತೆ ಏನನ್ನೋ ಹಂಚಿಕೊಳ್ಳಲು ನಾಚಿದ ಸಿದ್ಧಾಂತ್; ನೀನೊಬ್ಬ ಪುರುಷ ಅಂದ್ರಂತೆ ಅಪ್ಪ!
ನಟ ದರ್ಶನ್ ಮನೆಯೂಟಕ್ಕೆ ಸಂಬಂಧಿಸಿದ ಅರ್ಜಿಯನ್ನು ವಾಪಸ್ ಪಡೆದಿರೋದು ಆಯ್ತು. ಆದರೆ ಹೊಸ ಅರ್ಜಿ ಹಾಕುವ ಬಗ್ಗೆ ಯೋಚೆನ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ದರ್ಶನ್ ಪರ ವಕೀಲರು ನಿರ್ಧಾರ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಹಾಗಿದ್ರೆ , ನಿಜವಾಗಿಯೂ ಒಳಗೊಳಗೆ ಏನೋ ಪ್ಲಾನ್ ನಡಿತಾ ಇದೆ ಎಂಬ ಗಾಸಿಪ್ ಹಬ್ಬಿದೆ. ಆದ್ರೆ ಅಧಿಕೃತವಾಗಿ ಯಾರೂ ಏನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಕೇಸ್ ನ್ಯಾಯಾಲಯದಲ್ಲಿದೆ. ಕೊಲ್ಲೂರು ಮೂಕಾಂಬಿಕೆ ಪ್ರಸಾದಕ್ಕೂ ಮನೆಯೂಟದ ಅರ್ಜಿ ವಾಪಸಾತಿಗೂ ಲಿಂಕ್ ಮಾಡಿಕೊಂಡು ಚರ್ಚೆ ಜೋರಾಗಿದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ!