ಖ್ಯಾತ ನಟಿ ಶಶಿಕಲಾ ಮುಖದ ಮೇಲೆ ಕಲೆ ಆಗೋಕೆ ಈ ಚಿತ್ರತಂಡವೇ ಕಾರಣ!

Published : Nov 07, 2024, 03:08 PM IST
ಖ್ಯಾತ ನಟಿ ಶಶಿಕಲಾ ಮುಖದ ಮೇಲೆ ಕಲೆ ಆಗೋಕೆ ಈ ಚಿತ್ರತಂಡವೇ ಕಾರಣ!

ಸಾರಾಂಶ

ಮನಸ್ಸು ಬಿಚ್ಚಿ ಮಾತನಾಡಿದ ನಟಿ ಶಶಿಕಲಾ.....ಮೇಕಪ್‌ನವರು ಮಾಡಿದ ಎಡವಟ್ಟಿಗೆ ಆಗಿದ ಅವಾಂತರ ನೋಡಿ.... 

ಕನ್ನಡ ಬೆಳ್ಳಿ ತೆರೆ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಶಶಿಕಲಾ ಮೊದಲ ಸಲ ತಮ್ಮ ಮುಖದಲ್ಲಿ ಉಂಟಾಗಿರುವ ಕಲೆ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ನಟನೆ ಜೊತೆಗೆ ಅಮ್ಮನ ಮಡಿಲು ಟ್ರಸ್ಟ್‌ ನಡೆಸುತ್ತಿರುವ ಶಶಿಕಲಾ ಕಲಾವಿದೆಯಾಗಿ ಬಂದ ಅವಕಾಶವನ್ನು ಮೀನಾಮೇಷ ಎಣಿಸದೆ ಒಪ್ಪಿಕೊಂಡ ಕಾರಣ ಈ ಸಮಸ್ಯೆ ಆಗಿದೆ. 

'ಇತ್ತೀಚಿನ ದಿನಗಳಲ್ಲಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಏಕೆಂದರೆ ನನ್ನ ಮುಖದ ಮೇಲೆ ಆಗಿರುವ ಮಾರ್ಕ್‌ನಿಂದ ಹೊರಗಡೆ ಓಡಾಡಲು ಕಷ್ಟವಾಗುತ್ತಿತ್ತು. ನನ್ನ ಮುಖ ಚೆನ್ನಾಗಿತ್ತು...ಮೂರ್ನಾಲ್ಕು ತಿಂಗಳ ಮುನ್ನ ಉತ್ತರ ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆಂದು ಕರೆದಿದ್ದರು ಆ ಚಿತ್ರಕ್ಕೆ ಪ್ರೊಡಕ್ಷನ್ ನಂ 1 ಅಂತ ಹೆಸರಿಟ್ಟಿದ್ದಾರೆ. ಹುಬ್ಬಳಿಯಲ್ಲಿ ಚಿತ್ರೀಕರಣ ನಡೆಯಿತ್ತು, ಆ ಚಿತ್ರದಲ್ಲಿ ಇದ್ದವರು ಯಾರೂ ಇಂಡಸ್ಟ್ರಿಯವರಲ್ಲ ಕಡಿಮೆ ಬಜೆಟ್‌ನಲ್ಲಿ ಕೈ ಜೋಡಿಸಿ ಮಾಡುತ್ತಿರುವುದು ಅಂದ್ರು. ಯಾರಾದರೆ ಏನು ನಾನು ಕೂಡ ಕಲಾವಿದೆ ಅಲ್ವಾ ಎಂದು ಸಿನಿಮಾ ಮಾಡಲು ಒಪ್ಪಿಕೊಂಡೆ...ಬೆಟ್ಟ ಮೇಲೆ ಸತ್ತಿರುವ ಸೀನ್ ಮಾಡಬೇಕಿತ್ತು. ರಾತ್ರಿ ಆಗಿತ್ತು ಲೈಟ್ ನೇರವಾಗಿ ನನ್ನ ಮುಖಕ್ಕೆ ಬಿಟ್ಟಿದ್ದರೆ ಅಲ್ಲಿದ್ದ ವ್ಯಕ್ತಿಯನ್ನು ಕಳುಹಿಸಿ ನನಗೆ ಅರಿಶಿಣ ಹಚ್ಚಿಸಿದ್ದರು, ಆ ಅರಿಶಿಣಕ್ಕೆ ಸುಣ್ಣ ಮಿಸ್ಕ್‌ ಮಾಡಿಬಿಟ್ಟಿದ್ದರು. ಮೇಕಪ್ ಮಾಡಿದ್ದು ಅಲ್ಲಿನ ಪಾರ್ಲರ್‌ ವ್ಯಕ್ತಿ....ಅರಿಶಿಣ ಹಚ್ಚಿದ ಕೆಲವೇ ನಿಮಿಷಗಳಲ್ಲಿ ಉರಿ ಆಯ್ತು ಬೆಳಗ್ಗೆ ಅಷ್ಟರಲ್ಲಿ ಫುಲ್ ವೈಟ್ ಆಯ್ತು' ಎಂದು ಚಿತ್ರಲೋಕ ಸಂದರ್ಶನದಲ್ಲಿ ಶಶಿಕಲಾ ಮಾತನಾಡಿದ್ದಾರೆ.

ಪತಿ ಜೊತೆ ವಿದೇಶಕ್ಕೆ ಹಾರಿದ ರಾಮಚಾರಿ ವೈಶಾಖ; ಸೀರಿಯಲ್‌ ಬಿಟ್ಬಿಟ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು!

'ಶೂಟಿಂಗ್‌ ಸಮಯದಲ್ಲಿ ಮೇಕಪ್ ಹಾಕಿಕೊಂಡು ಸರಿ ಮಾಡಿಕೊಳ್ಳಬಹುದು ಆದರೆ ಉಳಿದ ಸಮಯದಲ್ಲಿ ಹೇಗೆ ಮುಖ ತೋರಿಸಿಕೊಂಡು ಓಡಾಡುವುದು. ಹುಬ್ಬಳಿಯಲ್ಲಿ ಚಿತ್ರೀಕರಣ ಮಾಡಿದ ಆ ನಿರ್ಮಾಪಕರನ್ನು ನಾನು ಪ್ರಶ್ನೆ ಮಾಡುತ್ತಿದ್ದೀನಿ..ಕಲಾವಿದೆಯಾಗಿ ನನ್ನ ಮುಖಕ್ಕೆ ಹೀಗೆ ಮಾಡಿದರೆ ನಾನು ಯಾರನ್ನ ಪ್ರಶ್ನೆ ಮಾಡೋದು? ಈಗ ಸಿನಿಮಾಗಳ ಆಫರ್ ಕೊಡುವುದು ಕಡಿಮೆ ಮಾಡಿಬಿಟ್ಟಿದ್ದಾರೆ ಹೀಗಾಗಿ ದಯವಿಟ್ಟು ಗೊತ್ತಿಲ್ಲದೆ ಇರುವ ವ್ಯಕ್ತಿಗಳನ್ನು ಕರೆಸಿ ಮೇಕಪ್ ಮಾಡಬೇಡಿ. ಚೆನ್ನಾಗಿದ್ದಾಗಲೇ ಕೆಲಸ ಕೊಡುವುದು ತುಂಬಾ ಕಷ್ಟ ಈ ರೀತಿ ಆದ ಮೇಲೆ ಯಾರು ಕೆಲಸ ಕೊಡುತ್ತಾರೆ. ಕೆಲವು ದಿನಗಳ ಹಿಂದೆ ನಾನು ನೋಡಿದೆ ಎರಡು ಮೂರು ಜನರಿಗೆ ಈ ರೀತಿ ಕಷ್ಟ ಎದುರಾಗಿದೆ. ತೆರೆ ಮೇಲೆ ನಾವು ಚೆನ್ನಾಗಿ ಕಾಣಿಸಬೇಕು ಅಂದ್ರೆ ಹಿಂದೆ ಕೆಲಸ ಮಾಡುವವರು ಚೆನ್ನಾಗಿ ಕೆಲಸ ಮಾಡಬೇಕು. ದಿನದಿಂದ ದಿನಕ್ಕೆ ಕಡಿಮೆ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಾರನೇ ದಿನ ಶೂಟಿಂಗ್‌ಗೆ ಹೋಗಿ ನಿರ್ದೇಶಕರಿಗೆ ಮುಖ ತೋರಿಸಿದೆ..ಅಯ್ಯೋ ನಿಮಗೆ ಸ್ಕಿನ್‌ ಅಲರ್ಜಿ ಆಗಿರಬೇಕು ಅಂದುಬಿಟ್ಟರು. ಸುಮಾರು 20 ವರ್ಷಗಳಿಂದ ಮೇಕಪ್ ಹಾಕಿಕೊಳ್ಳುತ್ತಿದ್ದೀನಿ ....ದೂರದರ್ಶನದಲ್ಲಿ 100 ರೂಪಾಯಿ ಸಂಭಾವನೆ ಕೊಟ್ಟಾಗಲೂ ಮೇಕಪ್ ಹಾಕಿದ್ದೀನಿ' ಎಂದು ಶಶಿಕಲಾ ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್