
ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಮಾತಾಡುವ ವೈಖರಿ, ಸೌಂದರ್ಯ ಹಾಗೂ ನಟನೆಯಿಂದ ಕನ್ನಡಿಗರ ಪ್ರೀತಿ ಗಳಿಸಿರುವ ನಟಿ ಅದಿತಿ ಪ್ರಭುದೇವ ತಾಯಿಯಾಗಿದ್ದಾರೆ.
ಏಪ್ರಿಲ್ 4ರಂದೇ ಹೆಣ್ಣುಮಗುವಿಗೆ ಜನ್ಮ ನೀಡಿರುವ ನಟಿಯು, ಯುಗಾದಿಯಂದು ತಮ್ಮ ಇನ್ಸ್ಟಾ ಖಾತೆಯ ಮೂಲಕ ಮಗುವಿನ ಜನನದ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕೈ ತಾನು ಹಾಗೂ ಪತಿ ಯಶಸ್ ಕೈ ಮೇಲಿರುವ ಚಿತ್ರ ಹಂಚಿಕೊಂಡಿರುವ ನಟಿ, 'ನಮ್ಮನೆ ಮಹಾಲಕ್ಷ್ಮಿ' ಎಂದು ಬರೆದುಕೊಂಡಿದ್ದು, ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಕೊನೆಗೂ ಈಡೇರಿದ ಅದಿತಿ ಪ್ರಭುದೇವ ಪುಟ್ಟ ಆಸೆ; ಪ್ರಗ್ನೆನ್ಸಿ ಕಡೆಯ ತಿಂಗಳ ಫೋಟೋಶೂಟ್
ಕಾಫಿ ಪ್ಲ್ಯಾಂಟರ್ ಯಶಸ್ ಪಾಟ್ಲಾ ಅವರನ್ನು ವಿವಾಹವಾಗಿರುವ ನಟಿ, ಕಳೆದ ಜನವರಿಯಲ್ಲಿ ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಆ ಬಳಿಕ ಸಾಕಷ್ಟು ಸರಣಿ ಪ್ರಗ್ನೆನ್ಸಿ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಮಗು ಹುಟ್ಟುವ ವಾರದ ಮುಂಚೆ ಕೂಡಾ ನಟಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ಅದಿತಿ ಹಂಚಿಕೊಂಡಿರುವ ಸುದ್ದಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.