
ಕನ್ನಡ ಚಿತ್ರರಂಗದಲ್ಲಿ ಶ್ಯಾನೆ ಟಾಪ್ ಆಗಿ ಮಿಂಚುತ್ತಿರುವ ನಟಿ ಅದಿತಿ ಪ್ರಭುದೇವ ತಮ್ಮದೇ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಹವ್ಯಾಸ, ದಿನಚರಿ ಮತ್ತು ವಿಭಿನ್ನ ವಿಚಾರಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶೇರ್ ಮಾಡಿದ 'ಮೈ ವಿಲೇಜ್ ಮೈ ಲವ್' ವಿಡಿಯೋ ಸಖತ್ ವೈರಲ್ ಅಗುತ್ತಿದೆ.
ಈ ವಿಡಿಯೋದಲ್ಲಿ ಅದಿತಿ ಬೇಗ ಎದ್ದು, ಕೊಟ್ಟಿಗೆ ಸಗಣಿ ಬಾಚಿ, ದನ ಕರುಗಳನ್ನು ತೊಳೆದು, ಹಾಲು ಕರೆದು, ಮನೆ ಕಸ ಗುಡಿಸಿ ಆ ನಂತರ ರೊಟ್ಟಿ ಮಾಡಿ ಪಕ್ಕಾ ಹಳ್ಳಿ ಹುಡುಗಿ ರೀತಿ ಜೀವನ ಮಾಡಿದ್ದಾರೆ. ಈ ವಿಡಿಯೋ ಒಂದು ಭಾಗವಾಗಿದ್ದು, ಮತ್ತೊಂದು ಭಾಗ ಕೆಲವು ದಿನಗಳಲ್ಲಿ ಅಪ್ಲೋಡ್ ಮಾಡಲಿದ್ದಾರೆ.
'ಚಿಕ್ಕ ವಯಸ್ಸಿನಿಂದಲೂ ಹಳ್ಳಿಯಲ್ಲಿ ಬೆಳೆದವಳು ನಾನು. ಬೆಳೆಯುತ್ತಾ ಆಧುನಿಕ ಬದುಕಿಗೆ ಹತ್ತಿರವಾದರು ಮನಸ್ಸು ಮಾತ್ರ ಹಳ್ಳಿಯಲ್ಲಿ ಜೀವಂತ. ಜೀವನದಲ್ಲಿ ಏನೇ ಸಿಕ್ಕರೂ ಪ್ರೀತಿ, ನೆಮ್ಮದಿ ಎಲ್ಲದಕ್ಕೂ ಮಿಗಿಲು ಎಂದು ತಿಳಿದವಳು ನಾನು. ಹಳ್ಳಿಯಲ್ಲಿ ಅಜ್ಜಿ ಮನೆಗೆ ಹೋದಾಗ ನನ್ನ ದಿನಚರಿ ಹೀಗೆ ಇರುತ್ತದೆ' ಎಂದು ಅದಿತಿ ಹೇಳಿದ್ದಾರೆ. ಅದಿತಿ ಮಾತುಗಳನ್ನು ಕೇಳಿ 'ನೀವೇ ಕಣ್ರೀ ಅಪ್ಪಟ್ಟ ಕನ್ನಡತಿ, ಈಗಿನ ನಟಿಯರು ಈ ರೀತಿ ಮಾಡಲ್ಲ ಬಿಡಿ'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.