ಜಾಹೀರಾತು ಫಲಕಗಳಿಗೆ ಅನುಮತಿ; ಸಂತಸದಲ್ಲಿ ಕನ್ನಡ ಚಿತ್ರರಂಗ!

By Suvarna NewsFirst Published Jul 31, 2021, 4:32 PM IST
Highlights

ಮೂರು ವರ್ಷಗಳ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕಗಳು ಹಾಕದಂತೆ ನಿಷೇಧ ಹೇರಲಾಗಿತ್ತು. ಬಿಬಿಎಂಪಿ ಇದೀಗ ಈ ನಿಷೇಧವನ್ನು ಹಿಂಪಡೆದಿದೆ. ಇನ್ನು ಮುಂದೆ ಸಿನಿಮಾ ಪ್ರಚಾರವೂ ಆಗಲಿದೆ ಜೋರು....

ಸೋಷಿಯಲ್ ಮೀಡಿಯಾದಲ್ಲಿ, ಸಿನಿಮಾ ಥಿಯೇಟರ್‌ಗಳಲ್ಲಿ ಎಷ್ಟು ಸಿನಿಮಾ ಪ್ರಚಾರ ಮಾಡಿದರೂ ಜಾಹೀರಾತು ಫಲಕಗಳು ಜನರಿಗೆ ತಲುಪುವಷ್ಟು ಇನ್ಯಾವುದೂ ತಲುಪುವುದಿಲ್ಲ.  ಹೊಸ ಕಲಾವಿದರಿಗೆ ಜಾಹೀರಾತು ಫಲಕಗಳು ಪ್ರಚಾರಕ್ಕೆ ಸಹಾಯ ಮಾಡುತ್ತವೆ, ಸಿನಿಮಾ ಕ್ಲಿಕ್ ಆಗದಿದ್ದರೂ, ಕಲಾವಿದರ ಫೇಸ್‌ ಜನರ ಕಣ್ಣ ಮುಂದೆ ಉಳಿಯುತ್ತದೆ.

ಎಲ್ಲೆಂದರಲ್ಲಿ ಫಲಕಗಳನ್ನು ಅಂಟಿಸುವುದರಿಂದ ನಗರದ ಸೌಂದರ್ಯ ಹಾಗೂ ಪರಿಸರ ಹಾಳಾಗುತ್ತದೆ ಎಂಬ ಕಾರಣ ಮೂರು ವರ್ಷಗಳ ಹಿಂದೆ ಸರ್ಕಾರ ಇಂಥ ಜಾಹೀರಾತು ಫಲಕಕ್ಕೆ ಬೆಂಗಳೂರಲ್ಲಿ ಬಿಬಿಎಂಪಿ ನಿಷೇಧ ಹೇರಿತ್ತು. ಇದರಿಂದ ಅತಿ ಹೆಚ್ಚು ಹೊಡೆತ ಬಿದ್ದಿದ್ದು ಚಿತ್ರರಂಗದವರಿಗೆ. ಆದರೀಗ ಈ ನಿಷೇಧವನ್ನು ಹಿಂಪಡೆದಿದೆ. ಪರಿಸರ ಹಾಗೂ ನಗರದ ಸೌಂದರ್ಯ ಕೆಡಿಸದಂತೆ ಎಚ್ಚರಿಕೆ ವಹಿಸಿ, ಫಲಕ ಅಳವಡಿಸಲು ಅನುಮತಿ ನೀಡಲಾಗುತ್ತಿದೆ. 

ರಾಜ್ಯದಲ್ಲಿ 50 ಮಲ್ಟಿಪ್ಲೆಕ್ಸ್‌,30 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಓಪನ್!

'ಪೋಸ್ಟರ್ ಅಂಟಿಸಿ ಪ್ರಚಾರ ಮಾಡುವುದು ದಶಕಗಳಿಂದ ಬಂದ ಸಂಪ್ರದಾಯ. ನಿಷೇಧ ತೆರುವುಗೊಳಿಸಿದ್ದು, ನನಗೆ ಖುಷಿ ಕೊಟ್ಟಿದೆ' ಎಂದು ನಿರ್ದೇಶಕ ಪವನ್ ಒಡೆಯರ್‌ ಖಾಸಗಿ ವೆಬ್‌‌ಸೈಟ್‌ವೊಂದಕ್ಕೆ ಹೇಳಿದ್ದಾರೆ. 'ಸೋಷಿಯಲ್ ಮೀಡಿಯಾ ಇರುವುದರಿಂದ ಪ್ರಚಾರಕ್ಕೆ ಅಷ್ಟೇನೂ ಸಮಸ್ಯೆ ಆಗುತ್ತಿಲ್ಲ. ಫಲಕಗಳಿಂದ ಪ್ರಚಾರಕ್ಕೆ ಅನುಕೂಲ ಆಗುತ್ತದೆ, ಎಂದು ಮರಗಳಿಗೆ ಮೊಳೆ ಹೊಡೆಯುತ್ತಾರೆ. ಸಿನಿಮಾ ಮಾತ್ರವಲ್ಲ ಜಾಹೀರಾತುಗಳಿಗೆ ನಿಯಂತ್ರಣ ಬೇಕಿದೆ. ಅದ್ದರಿಂದ ಅದಕ್ಕೆ ಅಂತಾನೇ ಸ್ಥಳಗಳನ್ನು ನಿಗದಿ ಮಾಡಿ ಅನುಮತಿ ನೀಡಬೇಕು,' ಎಂದು ಲವ್ಲಿ ಸ್ಟಾರ್ ಪ್ರೇಮ್ ಹೇಳಿದ್ದಾರೆ.

click me!