
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇದೀಗ ಜಾಕ್ವೆಲಿನ್ ಅವರ ಫಸ್ಟ್ ಲುಕ್ ಹಾಗೂ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ.
'What Rakkamma doesn't know, doesn't exist!' ನಿಮಗೆ ವಿಕ್ರಾಂತ್ ರೋಣ ಚಿತ್ರದ ಗಡಂಗ್ ರಕ್ಕಮ್ಮ ಪಾತ್ರ ಪರಿಚಯಿಸಿ ಕೊಡುತ್ತಿದ್ದೇವೆ,' ಎಂದು ನಿರ್ದೇಶಕ ಅನೂಪ್ ಬಂಡಾರಿ ಬರೆದುಕೊಂಡಿದ್ದಾರೆ. ಚಿತ್ರದ 2D ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಕಾನಿ ಸ್ಟುಡಿಯೋ ಈ ಚಿತ್ರವನ್ನು ಡಿಸೈನ್ ಮಾಡಿದೆ. ಟ್ಟಿಟರ್‌ನಲ್ಲಿ ನಟ ಸುದೀಪ್ ಕೂಡ ಜಾಕ್ವೆಲಿನ್ ಅವರನ್ನು ಬರ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ಜಾಕ್ವೆಲಿನ್ ಸ್ಪೆಷಲ್ ಹಾಡಿನ ಚಿತ್ರೀಕರಣ ಮುಗಿಸಿದ್ದರು. ಬಾಟಲಿ ಹಿಡಿದುಕೊಂಡು ಗಡಂಗ್ ರಕ್ಕಮ್ಮ ಪೋಸ್ಟರ್‌ನಲ್ಲಿ ಮಿಂಚುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೋಸ್ಟರ್ ವೈರಲ್ ಆಗಿದೆ.
ಚಿತ್ರದಲ್ಲಿ ಸುದೀಪ್, ಜಾಕ್ವೆಲಿನ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಹಾಗೂ ವಾಸುಕಿ ವೈಭವ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಚಿತ್ರದ ಪ್ರತಿಯೊಬ್ಬ ಕಲಾವಿದರೂ ಡಬ್ಬಿಂಗ್ ಮುಗಿಸಿದ್ದರು. ಚಿತ್ರದ ಬಗ್ಗೆ ಒಂದೊಂದೇ ಅಪ್ಡೇಟ್ ನೀಡುತ್ತಿರುವ ತಂಡ, ಶೀಘ್ರದಲ್ಲಿಯೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.