Aghora Movie: ಇಂದಿನಿಂದ ಬೆಳ್ಳಿತೆರೆ ಮೇಲೆ ವಿಭಿನ್ನ ಕಥಾಹಂದರದ 'ಅಘೋರ' ದರ್ಶನ!

Suvarna News   | Asianet News
Published : Mar 04, 2022, 02:09 PM IST
Aghora Movie: ಇಂದಿನಿಂದ ಬೆಳ್ಳಿತೆರೆ ಮೇಲೆ ವಿಭಿನ್ನ ಕಥಾಹಂದರದ 'ಅಘೋರ' ದರ್ಶನ!

ಸಾರಾಂಶ

ದೆವ್ವ, ಪ್ರೇತ, ಆತ್ಮಗಳು ಆಗಾಗ ಸ್ಯಾಂಡಲ್‌ವುಡ್‌ ಕದ ತಟ್ಟುತ್ತಿರುತ್ತವೆ. ಕೆಲವು ದೊಡ್ಡದಾಗಿ ಸದ್ದು ಮಾಡಿದೆ, ಇನ್ನೂ ಕೆಲವು ದೆವ್ವಗಳು ಸದ್ದಿಲ್ಲದೆ ಬಂದು ಹೋಗುತ್ತವೆ. ಈಗ 'ಅಘೋರ' ಚಿತ್ರ ತೆರೆ ಮೇಲೆ ಮೂಡುತ್ತಿದೆ. 

ದೆವ್ವ, ಪ್ರೇತ, ಆತ್ಮಗಳು ಆಗಾಗ ಸ್ಯಾಂಡಲ್‌ವುಡ್‌ (Sandalwood) ಕದ ತಟ್ಟುತ್ತಿರುತ್ತವೆ. ಕೆಲವು ದೊಡ್ಡದಾಗಿ ಸದ್ದು ಮಾಡಿದೆ, ಇನ್ನೂ ಕೆಲವು ದೆವ್ವಗಳು ಸದ್ದಿಲ್ಲದೆ ಬಂದು ಹೋಗುತ್ತವೆ. ಈಗ 'ಅಘೋರ' (Aghora) ಚಿತ್ರ ತೆರೆ ಮೇಲೆ ಮೂಡುತ್ತಿದೆ. ಇಂದು (ಮಾ.4) ಬಿಡುಗಡೆ ಆಗುತ್ತಿದೆ. ಮನುಷ್ಯನಿಗೆ ಸಾವು ಬರುವ ಮುನ್ನ ಏನಾಗುತ್ತದೆ, ಯಾವ ಮುನ್ಸೂಚನೆಗಳು ಸಿಗುತ್ತವೆ, ಸಾವಿನ ಹಿಂದಿನ ಬೆಳವಣಿಗೆಗಳೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಾಡಿರುವ ಸಿನಿಮಾ ಅಘೋರ. ಪುನೀತ್‌ ಎಂ.ಎನ್‌. (Puneeth MN) ಈ ಚಿತ್ರವನ್ನು ನಿರ್ಮಿಸುವ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದು ಬರೀ ಹಾರರ್​ ಸಿನಿಮಾ ಅಲ್ಲ. ಇದರಲ್ಲಿ ಲವ್​, ಸೆಂಟಿಮೆಂಟ್​ ಮತ್ತು ವಿಜ್ಞಾನದ ವಿಷಯಗಳನ್ನೂ ಹೇಳಲಿದ್ದೇವೆ. ಈ ಚಿತ್ರ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಕೊವಿಡ್​ ಕಾರಣದಿಂದ ರಿಲೀಸ್​ ಮಾಡಲು ಆಗಲಿಲ್ಲ. ಈಗ ಸಮಯ ಕೂಡಿಬಂದಿದೆ ಎಂದಿದ್ದಾರೆ ಪುನೀತ್​. ಈ ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ನನಗೆ ತುಂಬ ಖುಷಿ ಇದೆ. ಭೂಮಿ ಎಂಬ ಪಾತ್ರ ನನ್ನದು. ಭೂಮಿ ತುಂಬ ಸಹನೆಯಿಂದ ಇರುತ್ತಾಳೆ. ಆದರೆ ಅವಳನ್ನು ಕೆಣಕಿದಾಗ ತಿರುಗಿ ಬೀಳುತ್ತಾಳೆ. ನನ್ನ ಪಾತ್ರಕ್ಕೆ ಎರಡು ಶೇಡ್​ ಇದೆ. ಟ್ರೇಲರ್​ ಮತ್ತು ಸಾಂಗ್​ಗೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ. ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಸ್ಕೋಪ್​ ಇದೆ ಎಂಬ ಕಾರಣಕ್ಕೆ ನನಗೆ ನಿರೀಕ್ಷೆ ಜಾಸ್ತಿ ಇದೆ ಎಂದು ರಚನಾ ದಶರಥ್‌ (Rachana dasharath) ಹೇಳಿದರು.

Aghora Movie: 'ಅಘೋರಿ' ಪಾತ್ರದಲ್ಲಿ ಇನ್ಮುಂದೆ ಹಿರಿಯ ನಟ ಅವಿನಾಶ್ ನಟಿಸಲ್ಲ: ನಿರ್ದೇಶಕ ಪ್ರಮೋದ್

ಈಗಾಗಲೇ ಅಘೋರ ಚಿತ್ರವು 35ಕ್ಕೂ ಹೆಚ್ಚು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ಚಿತ್ರದ ನಿರ್ದೇಶಕ ಎನ್‌ಎಸ್‌ ಪ್ರಮೋದ್‌ ರಾಜ್‌ (NS Pramod Raj), ಪ್ರಕೃತಿ ಹಾಗೂ ಸಾವಿನ ನಡುವೆ ಇರುವ ಸಂಬಂಧವೇನು, ಮಾನವ ತನ್ನ ಸಾವಿನ ನಂತರ ಮತ್ತೊಂದು ಜನ್ಮ ಪಡೆಯುವ ಅಂತರದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಭೂಮಿ, ಆಕಾಶ, ನೀರು, ಗಾಳಿ ಹೀಗೆ ಪಂಚಭೂತಗಳ ಹಿನ್ನೆಲೆಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎನ್ನುತ್ತಾರೆ. ಚಿತ್ರದ ಒಂದು ಹಾಡಿಗೆ ಡಾ ವಿ ನಾಗೇಂದ್ರ ಪ್ರಸಾದ್‌ (Dr V Nagendraprasad) ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದಾರೆ.



ಪಂಚಭೂತಗಳನ್ನು ಪ್ರತಿನಿಧಿಸುವಂತಹ ಹೆಸರುಗಳನ್ನು ಈ ಚಿತ್ರದ ಮುಖ್ಯ ಪಾತ್ರಗಳಿಗೆ ಇಡಲಾಗಿದೆ. ಯಾಕೆ ಎಂಬುದು ಸಿನಿಮಾ ನೋಡಿದಾಗ ತಿಳಿಯಲಿದೆ ಎಂದಿದ್ದಾರೆ ನಟ ಅಶೋಕ್ (Ashok)​. 'ನನ್ನ ಪಾತ್ರದ ಹೆಸರು ಅಗ್ನಿ. ಅದು ದೀಪವೂ ಆಗಬಹುದು, ಕಾಡ್ಗಿಚ್ಚು ಕೂಡ ಆಗಬಹುದು. ತುಂಬ ಅಧ್ಯಯನ ನಡೆಸಿ ನಮ್ಮ ನಿರ್ದೇಶಕರು ಈ ಕಥೆ ಸಿದ್ಧಪಡಿಸಿದ್ದಾರೆ. ಸಾವು ಮತ್ತು ಪುನರ್ಜನ್ಮದ ನಡುವೆ ಇರುವ ಒಂದು ಅಂತರದಲ್ಲಿ ಏನಾಗುತ್ತದೆ ಎಂಬುದರ ಕುರಿತು ಅಘೋರಿಗಳು ಮತ್ತು ವಿಜ್ಞಾನಿಗಳ ಜೊತೆ ಚರ್ಚಿಸಿ ವಿಷಯ ಸಂಗ್ರಹಿಸಿದ್ದಾರೆ. ಅದನ್ನು ಜನರಿಗೆ ತಲುಪಿಸಲು ಈ ಸಿನಿಮಾ ಮಾಡಲಾಗಿದೆ' ಎಂದು ಅಶೋಕ್​ ಹೇಳಿದ್ದಾರೆ.

Puneeth Rajkumar: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಹಂಚಿಕೊಂಡ ಜನಾರ್ದನ ರೆಡ್ಡಿ ಪುತ್ರ ಕಿರೀಟಿ!

ಹಾರರ್‌ ಸಿನಿಮಾವನ್ನು (Horror Movie) ಜನ ನೋಡುವಾಗ ಬೆಚ್ಚಿಬೀಳುತ್ತಾರೆ. ಆ ನಂತರ ಮೆಚ್ಚಿಕೊಳ್ಳುತ್ತಾರೆ. ಆ ಮಟ್ಟಕ್ಕೆ ಸಿನಿಮಾ ಮೂಡಿ ಬಂದಿದೆ. ಅವಿನಾಶ್‌ (Avinash) ಅವರು ಅಘೋರಿಯಾಗಿ ನಟಿಸಿರುವುದು ಚಿತ್ರದ ಹೈಲೈಟ್‌ ಎಂಬುದು ನಿರ್ದೇಶಕ ಪ್ರಮೋದ್‌ ರಾಜ್‌ ಮಾತು. ಕೆಆರ್‌ಜಿ ಸ್ಟುಡಿಯೋ ಮೂಲಕ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಸಂಚಿತ್‌ ಹೆಗ್ಡೆ, ಹನುಮಂತು, ಸಚಿನ್‌ ವರು ಧ್ವನಿಗೂಡಿಸಿದ್ದಾರೆ. ಚಿತ್ರದಲ್ಲಿ ಕೇವಲ 5 ಪಾತ್ರಗಳಿದ್ದು, 24 ಗಂಟೆಗಳಲ್ಲಿ ನಡೆಯುವ ಕತೆ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಅಶೋಕ್‌, ಪುನೀತ್‌ ಗೌಡ, ರಚನಾ ದಶರಥ್‌, ದ್ರವ್ಯ ಶೆಟ್ಟಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?