ಕ್ಯಾನ್ಸರ್‌ನಿಂದ ಪೀಡಿತ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ ನಟ ಯಶ್, ವಿಡಿಯೋ

Published : Jun 02, 2026, 08:32 PM IST
Yash Kind Gesture Goes Viral

ಸಾರಾಂಶ

ಕ್ಯಾನ್ಸರ್‌ನಿಂದ ಬಳಲಿ ಆಸ್ಪತ್ರೆ ಸೇರಿರುವ ಅಭಿಮಾನಿಯೊಬ್ಬರಿಗೆ ವಿಡಿಯೋ ಕರೆ ಮಾಡಿದ ನಟ ಯಶ್ ಧೈರ್ಯ ತುಂಬಿದ್ದಾರೆ. ಇಷ್ಟೇ ಅಲ್ಲ ನೆರವಿನ ಹಸ್ತಚಾಚಿದ್ದಾರೆ. ಯಶ್ ನಡೆಗೆ ಎಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಬೆಂಗಳೂರು (ಜೂ.02) ಟಾಕ್ಸಿಕ್ ಸಿನಿಮಾದಲ್ಲಿ ಬ್ಯೂಸಿ ಇರುವ ನಟ ಯಶ್ ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆ ಕ್ಯಾನ್ಸರ್ ಪೀಡಿತ ಅಭಿಮಾನಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾರೆ. ವಿಡಿಯೋ ಕಾಲ್ ಮಾಡಿ ಮಾತನಾಡಿದ ನಟ ಯಶ್, ಅಭಿಮನಿಗೆ ಧೈರ್ಯ ತುಂಬಿದ್ದ ಮಾತ್ರವಲ್ಲ ನೆರವಿನ ಹಸ್ತಚಾಚಿದ್ದಾರೆ. ನಟ ಯಶ್ ನಡೆಗೆ ಎಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಟ ಯಶ್ ವಿಡಿಯೋ ಕಾಲ್ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅಭಿಮಾನಿ ಮಾಹಿತಿ ತಿಳಿದು ತಕ್ಷಣ ಕರೆ ಮಾಡಿದ ಯಶ್

ನಟ ಯಶ್ ಅವರ ಅಧಿಕೃತ ಅಭಿಮಾನಿ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸುನಿಲ್ ಕೆಲ ತಿಂಗಳಿನಿಂದ ರೆಕ್ಟಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಮ್ಮ ಅಪ್ಪಟ ಅಭಿಮಾನಿಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಕಿಂಗ್ ಸ್ಟಾರ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಜಂಟಿ ಶೂಟಿಂಗ್ ಶೆಡ್ಯೂಲ್‌ಗಳ ನಡುವೆಯೂ ಸುನಿಲ್ ಅವರಿಗೆ ನೇರವಾಗಿ ವಿಡಿಯೋ ಕಾಲ್ ಮಾಡಿರುವ ಯಶ್, ಅವರ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ. ಕೇವಲ ಅಭಿಮಾನಿ ಮಾತ್ರವಲ್ಲದೆ, ಅವರ ಇಡೀ ಕುಟುಂಬಸ್ಥರ ಜೊತೆಗೂ ಅತ್ಯಂತ ಆತ್ಮೀಯವಾಗಿ ಮಾತನಾಡಿದ ಯಶ್, ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಎಲ್ಲರಿಗೂ ಧೈರ್ಯ ತುಂಬಿದ್ದಾರೆ.

ವಿಡಿಯೋ ಕರೆಯಲ್ಲಿ ಸುನಿಲ್ ಅವರ ಕೈಹಿಡಿದು ಮಾತನಾಡಿದ ಯಶ್, ತಾವು ಸುನಿಲ್ ಅವರ ಜೊತೆಗಿನ ಹಲವು ವರ್ಷಗಳ ಹಳೆಯ ಒಡನಾಟ ಹಾಗೂ ಅಭಿಮಾನಿ ಸಂಘದ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿಕಿತ್ಸೆಯ ಈ ಕಷ್ಟದ ಹಂತದಲ್ಲಿ ತಾವು ಸಂಪೂರ್ಣ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ ನಟ, "ನೀನು ಈ ಹೋರಾಟದಲ್ಲಿ ಒಬ್ಬಂಟಿಯಲ್ಲ, ನಾನು ನಿನ್ನ ಜೊತೆಗಿದ್ದೇನೆ ಎಂದಿದ್ದಾರೆ.

ಯಶ್ ನಡೆಗೆ ಭಾರಿ ಮೆಚ್ಚುಗೆ

ಕೆಜಿಎಫ್ ಸಿನಿಮಾ ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಟಾಕ್ಸಿಕ್ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ ಸ್ಟಾರ್ ಆಗುತ್ತಿದ್ದಾರೆ. ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆ ಅಭಿಮಾನಿಗಾಗಿ ಸಮಯ ಮೀಸಲಿಟ್ಟು ಧೈರ್ಯ ತುಂಬಿದ ಯಶ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಯ ಕಷ್ಟಕ್ಕೆ ನೆರವಾದ ಯಶ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

₹100 ಕೋಟಿ ಸಿನಿಮಾ... ಆದರೆ OTT ಹಕ್ಕು ಕೇವಲ ₹7 ಕೋಟಿ: ಕನ್ನಡ ಚಿತ್ರರಂಗದಲ್ಲಿ ಏನಾಗುತ್ತಿದೆ?
ಸಾನ್ವಿಯ ಮದುವೆ ಮಾಡಲ್ಲ: ಬಹುದೊಡ್ಡ ಗುಟ್ಟು ರಿವೀಲ್‌ ಮಾಡಿದ ಅಮ್ಮ ಪ್ರಿಯಾ ಸುದೀಪ್‌ ಹೇಳಿದ್ದೇನು