ತೆಲುಗಿನವರು ಕೊಡದ ಅವಕಾಶ ಕರ್ನಾಟಕ ಕೊಟ್ಟಿತು… ಜೈ ಭುವನೇಶ್ವರಿ ಎಂದ ‘ಆರ್ಮುಗಂ’ ರವಿಶಂಕರ್

Published : Jun 01, 2026, 05:57 PM IST
P Ravishankar

ಸಾರಾಂಶ

P Ravishankar:‘ಇದು ಆರ್ಮುಗಂ ಕೋಟೆ ಕಣೋ’ ಎಂದು ಅಬ್ಬರಿಸಿ ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಆರ್ಮುಗ ಆಗಿ ಮಿಂಚುತ್ತಿರುವ ನಟ ರವಿಶಂಕರ್, ತಮಗೆ ಅವಕಾಶ ಕೊಟ್ಟ ಕನ್ನಡ ಸಿನಿಮಾ ಇಂಡಷ್ಟ್ರಿಯನ್ನು ನೆನೆದು, ನಾನಿಂದು ಸ್ಟಾರ್ ನಟ ಆಗಲು ಅದೇ ಕಾರಣ ಎಂದು ಭಾವುಕರಾಗಿ ನುಡಿದ್ದಾರೆ. 

ಖ್ಯಾತ ನಟ ಪಿ ರವಿಶಂಕರ್

ಚಿತ್ರರಂಗದಲ್ಲಿ ಖಳನಟನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ನಟನಾಗಿ, ನಿರ್ದೇಶಕನಾಗಿ, 4000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಲವು ವಿಲನ್ ಗಳಿಗೆ ಡಬ್ಬಿಂಗ್ ಮಾಡಿ, ಕನ್ನಡ, ತಮಿಳು ತೆಲುಗು ಚಿತ್ರರಂಗದಲ್ಲಿ ಅಬ್ಬರಿಸುತ್ತಿರುವ ನಟ ಪಿ ರವಿಶಂಕರ್. ಇವರು ತೆಲುಗಿನ ಕಾರ್ಯಕ್ರಮವೊಂದರಲ್ಲಿ ತಮಗೆ ಕನ್ನಡ ಚಿತ್ರರಂಗ ಹೇಗೆ ಅವಕಾಶವನ್ನು ಕೊಟ್ಟಿತು. ಆ ಒಂದು ಸಿನಿಮಾದಿಂದ ನನ್ನ ಕರಿಯರ್ ಬದಲಾಗಿ, ಹೇಗೆ ಡಬ್ಬಿಂಗ್ ಆರ್ಟಿಸ್ಟ್ ನಿಂದ ಸ್ಟಾರ್ ನಟನಾಗಿ ಹೊರಹೊಮ್ಮಿದೆ ಎನ್ನುವುದನ್ನು ಭಾವುಕರಾಗಿ ಬಿಚ್ಚಿಟ್ಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರವಿಶಂಕರ್ ಕನ್ನಡ ಅಭಿಮಾನದ ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ತೆಲುಗಿನವರು ಕೊಡದ ಅವಕಾಶ ಕರ್ನಾಟಕ ಕೊಟ್ಟಿತು

2010ರಲ್ಲಿ ನಾನು ತೆಲುಗಿನಲ್ಲಿ ಸಾವಿರಾರು ಸಿನಿಮಾಗಳಿಗೆ ಡಬ್ಬಿಂಗ್ ಮಾಡುತ್ತಿದ್ದ ಸಮಯ. ತೆಲುಗಿನ ಖಡಲ್ ವಿಲನ್ ಪಾತ್ರಗಳಿಗೆ ನಾನೇ ಡಬ್ಬಿಂಗ್ ಮಾಡುತ್ತಿದ್ದೆ. ಆದರೆ ಅಂತಹ ಪಾತ್ರಗಳನ್ನು ಮಾಡುವ ಅವಕಾಶವನ್ನು ನಾನು ತೆಲುಗಿನವನೇ ಆಗಿದ್ದರು, ತೆಲುಗು ಇಂಡಷ್ಟ್ರಿ ನನಗೆ ನೀಡಿಲ್ಲ. ಆದರೆ ಆ ಸಮಯದಲ್ಲಿ ನನಗೆ ಕನ್ನದ ಚಿತ್ರರಂಗದಿಂದ ಕರೆ ಬಂತು, ಒಂದು ಪಾತ್ರವನ್ನು ಮಾಡಬೇಕು, ಆ ಪಾತ್ರವನ್ನು ಮೂಲ ಸಿನಿಮಾದಲ್ಲಿ ಖ್ಯಾತ ನಟ ಪ್ರಕಾಶ್ ರೈ ಮಾಡಿದ್ದರು ಎಂದರು. ಆದರೆ ನಾನು ಪ್ರಕಾಶ್ ರೈ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಕರೆಯುತ್ತಿದ್ದಾರೆ ಎಂದುಕೊಂಡಿದ್ದೆ. ಆದರೆ ಚಿತ್ರತಂಡದವರು ಬಂದು ಇಲ್ಲ ಸರ್, ಸುದೀಪ್ ಅವರು ನಿಮ್ಮ ಭೇಟಿಯಾಗಬೇಕು ಎಂದಿದ್ದಾರೆ ಎಂದರು.

ಸುದೀಪ್ ಅವರನ್ನು ಭೇಟಿಯಾಗಲು ಹೋಗುವಾಗಲು ನಾನು ಇದು ಪ್ರಕಾಶ್ ರಾಜ್ ಅವರ ಅಣ್ಣನೋ ಅಥವಾ ತಮ್ಮನ ಪಾತ್ರ ಇರಬೇಕು ಅಂದುಕೊಂಡೆ. ಆದರೆ ಅವರು ಇಲ್ಲ ತೆಲುಗಿನಲ್ಲಿ ಪ್ರಕಾಶ್ ರಾಜ್ ಮಾಡಿರುವ ಅದೇ ವಿಲನ್ ಪಾತ್ರವನ್ನು ಕನ್ನಡದಲ್ಲಿ ನೀವು ಮಾಡಬೇಕು ಎಂದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ಅಚ್ಚರಿಯಿಂದ ನಾನು ಅವರಿಗೆ ‘ನೀವು ನನ್ನನ್ನು ಸಾಯಿಕುಮಾರ್ ಅಂದ್ಕೊಂಡು ತಪ್ಪಾಗಿ ಆಫರ್ ಕೊಡುತ್ತಿದ್ದೀರಾ? ಎಂದು ಕೇಳಿಬಿಟ್ಟೆ. ಆದರೆ ಅವರು ಇಲ್ಲ ಸರ್ ಆ ಪಾತ್ರಕ್ಕೆ ನೀವೇ ಬೇಕು ಎಂದು ಹೇಳಿದರು.

ಅದು ಸುದೀಪ್ ಅಭಿನಯದ ‘ಕೇಂಪೇಗೌಡ’ ಸಿನಿಮಾ. ಆ ಚಿತ್ರದ ಆರ್ಮುಗಂ ಪಾತ್ರ ರವಿಶಂಕರ್ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು. ಇಂದಿಗೂ ಕನ್ನಡದ ಖಡಕ್ ವಿಲ್ಲನ್ ಗಳ ಲಿಸ್ಟ್ ನಲ್ಲಿ ಆರ್ಮುಗಂ ಟಾಪ್ ನಲ್ಲಿದ್ದಾರೆ. ರವಿಶಂಕರ್ ವಾಯ್ಸ್, ಅಭಿನಯ ಎಲ್ಲವನ್ನೂ ಕನ್ನಡಿಗರು ಮೆಚ್ಚಿಕೊಂಡರು. ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. “ಇವತ್ತು ನಾನು 108 ಸಿನಿಮಾ ಮಾಡಿ, ಸ್ಟಾರ್ ಆಗಿದ್ದೀನಿ ಅಂದ್ರೆ ಅದಕ್ಕೆ ಕನ್ನಡಿಗರು ನನ್ನ ಮೇಲಿಟ್ಟ ನಂಬಿಕೆಯೇ ಕಾರಣ. ಜೈ ಕರ್ನಾಟಕ, ಜೈ ಭುವನೇಶ್ವರಿ” ಎನ್ನುತ್ತಾ ಕನ್ನಡಿಗರಿಗೂ, ಕನ್ನಡ ಚಿತ್ರರಂಗಕ್ಕೂ ರವಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ. ಆ ಮೂಲಕ ತಾವು ಯಾವಾಗಲೂ ಕನ್ನಡಕ್ಕೆ ಚಿರಋಣಿ ಎಂದಿದ್ದಾರೆ ನಟ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೀವು ಮಿಸ್ ಮಾಡ್ದೇ ನೋಡಲೇ ಬೇಕಾದ ಕನ್ನಡದ Underrated Movies
Toxic Movie BTS: ಟಾಕ್ಸಿಕ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್​- ಬಯಲಾಯ್ತು ತೆರೆಮರೆಯ ಸತ್ಯ