
ಟಾಕ್ಸಿಕ್ ಚಿತ್ರ ಕಳೆದ 2-3 ವರ್ಷಗಳಿಂದ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿತ್ತು. ಇದನ್ನು ಬ್ಲಾಕ್ಬಸ್ಟರ್ ಮಾಡುವ ಹಿನ್ನೆಲೆಯಲ್ಲಿ ಹಲವು ಬಾರಿ ಸಿನಿಮಾವನ್ನು ಮುಂದೂಡುತ್ತಲೇ ಬರಲಾಗಿತ್ತು. ಯುದ್ಧದಿಂದ ಹಿಡಿದು ಬೇರೆ ಬೇರೆ ಸಿನಿಮಾಗಳ ಬಿಡುಗಡೆಯ ಕಾರಣದಿಂದ, ಟಾಕ್ಸಿಕ್ ಚಿತ್ರ (Toxic Movie) ಮುಂದೂಡುತ್ತಾ ಬರಲಾಗಿತ್ತು. ಜೊತೆಗೆ ಅಷ್ಟೇ ಭರ್ಜರಿ ಪ್ರಚಾರವನ್ನೂ ಪಡೆದುಕೊಂಡಿತ್ತು. ಎಲ್ಲಿ ನೋಡಿದರೆ ಅಲ್ಲಿ ಟಾಕ್ಸಿಕ್ ಹವಾ ಕಾಣಿಸುತ್ತಿತ್ತು. ಆದರೆ ಇಷ್ಟೊಂದು ಅಬ್ಬರ ಮಾಡಿದ್ದ ಸಿನಿಮಾ ಬಿಡುಗಡೆಯಾದ ಮೇಲೆ ಯಾಕೋ ಎಲ್ಲಾ ವರ್ಗದ ಜನರಿಗೆ ಅಷ್ಟೊಂದು ಹಿಡಿಸಲೇ ಇಲ್ಲ. ಇದರ ಬಗ್ಗೆ ನೆಗೆಟಿವ್ ಕಮೆಂಟ್ಸ್ ಸಿಕ್ಕಾಪಟ್ಟೆ ಬಂದವು. ಯಶ್ ಅಭಿಮಾನಿಗಳು ಮಾತ್ರ ಇದನ್ನು ಹಾಡಿ ಹೊಗಳಿದರು. ಇದನ್ನು ಅರ್ಥ ಮಾಡಿಕೊಳ್ಳದವರು ಸಿನಿಮಾವನ್ನು ದೂಷಿಸುತ್ತಿದ್ದಾರೆ ಎಂದರು. ಇದರಲ್ಲಿ ಅಡಗಿರುವ ಅಂಶವೇ ಬೇರೆ ಎಂದರು.
ಅದೇನೇ ಇದ್ದರೂ 2-3 ವರ್ಷಗಳಿಂದ ಅಬ್ಬರಿಸಿದ್ದ ಟಾಕ್ಸಿಕ್ ಯಾಕೋ ಅಂದುಕೊಂಡಷ್ಟು ಗೆಲುವು ಸಾಧಿಸಲೇ ಇಲ್ಲ. ಕೆಲವರು ಇದನ್ನು ಕಾಂ*ಡೋಮ್ ಜಾಹೀರಾತು ಎಂದು ಟೀಕಿಸಿದರು. ಯಶ್ ಅವರು ಇಂಥ ಚಿತ್ರ ಮಾಡಬಾರದಿತ್ತು ಎಂದರು, ಫ್ಯಾಮಿಲಿ ಕುಳಿತು ನೋಡುವ ಚಿತ್ರವೇ ಇದಲ್ಲ ಎಂದರು... ಹೀಗೆ ಏನೇನೋ ಕಮೆಂಟ್ಸ್ ಬಂದು, ಚಿತ್ರ ಹೈಪ್ ಮಾಡಿದ್ದಷ್ಟು ಯಶಸ್ಸು ಗಳಿಸಲಿಲ್ಲ. ಅದೊಂದು ರೀತಿಯಲ್ಲಿ ಸೋಲು ಅಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಏಕೆಂದರೆ, ಕೆಜಿಎಫ್ನಂಥ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಯಶ್, ಇಲ್ಲಿ ಯಾಕೋ ಸೋತರು ಎಂದೇ ಅವರ ಅಭಿಮಾನಿಗಳು ಕೂಡ ನೋವಿನಿಂದ ಹೇಳುವುದು ಇದೆ.
ಇದೀಗ ಅದರ ಬೆನ್ನಲ್ಲೇ ರಾಮಾಯಣ ಚಿತ್ರ ಸದ್ದು ಮಾಡುತ್ತಿದೆ. ಇದಾಗಲೇ ರಾಮಾಯಣದ ಹೆಸರಿನಲ್ಲಿ ಅನೇಕರು ಸಿನಿಮಾ ಮಾಡಿದ್ದರೂ, ಇದರಲ್ಲಿ ಯಶ್ ರಾವಣ ಎನ್ನುವುದು ಪ್ಲಸ್ ಪಾಯಿಂಟ್ ಆಗಿದ್ದು, ಇಂಥ ಚಿತ್ರಗಳನ್ನು ಜನರು ಇಷ್ಟಪಡುತ್ತಾರೆ ಎನ್ನುವ ಮಾತು ಕೂಡ ಇದೆ. ಇದರ ಟ್ರೈಲರ್ ಲಾಂಚ್ ವೇಳೆ ಮಾತನಾಡಿದ ಯಶ್ ಅವರು, ಟಾಕ್ಸಿಕ್ ಬಗ್ಗೆ ನೆಗೆಟಿವ್ ಮಾತನಾಡಿದವರಿಗೆ ವೇದಿಕೆಯ ಮೇಲೆಯೇ ಸಕತ್ ಟಾಂಗ್ ಕೊಟ್ಟರು. 'ರಾಮಾಯಣ ಇಡೀ ಫ್ಯಾಮಿಲಿ ಕುಳಿತು ನೋಡುವ ಚಿತ್ರ. ಅದನ್ನು ಫ್ಯಾಮಿಲಿ ಜೊತೆ ನೋಡಿ' ಎನ್ನುತ್ತಲೇ ಟಾಕ್ಸಿಕ್ ಟೀಕಿಸಿದವರಿಗೆ ಪರೋಕ್ಷ ಟಾಂಗ್ ಕೊಟ್ಟರು. ಇಷ್ಟೇ ಅಲ್ಲದೇ, ಇದು ಫ್ಯಾಮಿಲಿ ಕುಳಿತು ನೋಡುವ ಚಿತ್ರ. ಯಾವ ಚಿತ್ರ ಯಾವ ರೀತಿ ಮಾಡಬೇಕು ಎನ್ನೋದು ನನಗೆ ಗೊತ್ತಿದೆ ಎಂದು ಟಾಕ್ಸಿಕ್ ಕಾಂ*ಡೋಮ್ ಆ್ಯಡ್ ಅಂದೋರಿಗೆ ಪರೋಕ್ಷವಾಗಿ ತಿಳಿದವರು ನಟ ಯಶ್.
ಇದೇ ವೇಳೆ, ಒಂದು ಸಿನಿಮಾ ಬಿಡುಗಡೆಯಾದಾಗ, ಅವರು ಹೀಗೆ ಮಾಡಬೇಕಿತ್ತು, ಈ ನಟ ಇದ್ದರೆ ಚೆನ್ನಾಗಿತ್ತು, ಆ ನಟ ಹೀಗೆ ಮಾಡಬೇಕಿತ್ತು ಎಂದೆಲ್ಲಾ ಹೇಳ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಾ ಇರುತ್ತೇವೆ. ವಿಎಸ್ಎಫ್ ಹೀಗಿದೆ, ಹಾಗಿದೆ, ಈ ಆ್ಯಕ್ಟರ್ ಹೀಗಿರಬಹುದಿತ್ತು ಅಂತಾರೆ. ಆದರೆ ಬ್ರಿಟಿಷರು ಮಾಡಿದ್ದೂ ಇದೇ ಕೆಲಸ. ಆಂತರಿಕವಾಗಿ ಜಗಳವಾಡ್ತಾ ಕೂತಿದ್ರೆ ನಮಗೆ ಸ್ವಾತಂತ್ರ್ಯ ಬರುತ್ತಿರಲಿಲ್ಲ, ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗ್ತಿರಲಿಲ್ಲ. ಬ್ರಿಟಿಷರು ಕೂಡ Divide and Rule ಮಾಡಿದ್ರು. ಸಿನಿಮಾದಲ್ಲಿಯೇ ಆಂತರಿಕ ಜಗಳ ಮಾಡಿದ್ರೆ ಹೀಗೇ ಆಗೋದು ಅಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.