Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್

By Suvarna News  |  First Published Jan 15, 2022, 8:56 PM IST

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅಭಿನಯದ 123ನೇ ಸಿನಿಮಾ 'ಬೈರಾಗಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಖುಷಿಯ ವಿಚಾರವನ್ನು ಸ್ವತಃ ಚಿತ್ರದ ನಿರ್ದೇಶಕ ವಿಜಯ್ ಮಿಲ್ಟನ್ ಸಾಮಾಜಿಕ ಕಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. 


ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ (Shivarajkumar) ಅಭಿನಯದ 123ನೇ ಸಿನಿಮಾ 'ಬೈರಾಗಿ' (Bairagi) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಖುಷಿಯ ವಿಚಾರವನ್ನು ಸ್ವತಃ ಚಿತ್ರದ ನಿರ್ದೇಶಕ ವಿಜಯ್ ಮಿಲ್ಟನ್ (Vijay Milton) ಸಾಮಾಜಿಕ ಕಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಸಂಕ್ರಾಂತಿ (Sankranti) ಹಬ್ಬದ ಪ್ರಯುಕ್ತ ಹ್ಯಾಟ್ರಿಕ್ ಹಿರೋ ಶಿವಣ್ಣ ಚಿತ್ರದ ಹೊಸ ಪೋಸ್ಟರ್ (Poster) ಸಹ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದ್ದಾರೆ. ಜೊತೆಗೆ ವಿಡಿಯೋ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯವನ್ನೂ ಶಿವಣ್ಣ ಕೋರಿದ್ದಾರೆ.

ಪ್ರತಿಯೊಬ್ಬರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. 'ಬೈರಾಗಿ' ಸಿನಿಮಾದ ಶೂಟಿಂಗ್ ಮುಕ್ತಾಯ ಆಯ್ತು. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ. ಈ ವರ್ಷದ ಮೊದಲ 'ಬೈರಾಗಿ' ಪೋಸ್ಟರ್​ ಅನ್ನು ನನ್ನ ಪೇಜ್​ನಿಂದ ರಿಲೀಸ್​ ಮಾಡುತ್ತಿದ್ದೇನೆ. ನೋಡಿ ಆನಂದಿಸಿ. ಇನ್ನು ಕೆಲವೇ ಗಂಟೆಗಳಲ್ಲಿ ಇನ್ನೊಂದು ಸರ್ಪ್ರೈಸ್​ ಕಾದಿದೆ. ಅಪ್ಪು ಐ ಲವ್​ ಯೂ' ಎಂದು ಶಿವಣ್ಣ ವಿಡಿಯೋದಲ್ಲಿ​ ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಎರಡು ಕಡೆಗಳಲ್ಲಿ ವಿಶಿಷ್ಟ ಸೆಟ್‌ ಹಾಕಿ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲೂ 'ರಿದಂ ಆಫ್‌ ಶಿವಪ್ಪ' ಎಂಬ ಹಾಡನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಗಿತ್ತು. ದೇವನಹಳ್ಳಿಯಲ್ಲಿ ಗೋವಾ ಪುದುಚೇರಿ ಸೆಟ್ ನಿರ್ಮಿಸಿ ಹಾಡನ್ನು ಚಿತ್ರೀಕರಿಸಲಾಗಿತ್ತು. ಮೂರೂವರೆ ನಿಮಿಷಗಳ ಸಿಂಗಲ್ ಟೇಕ್ ಎಂಬುದು ಈ ಹಾಡಿನ ವಿಶೇಷತೆಯಲ್ಲೊಂದು. 

Tap to resize

Latest Videos

Shiva Rajkumar: ಕವೀಶ್‌ ಶೆಟ್ಟಿ ನಟನೆಯ ಜಿಲ್ಕಾ ಚಿತ್ರವನ್ನು ಮೆಚ್ಚಿದ ಶಿವಣ್ಣ

'ಟಗರು' ನಂತರ ಶಿವಣ್ಣ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ (Dhananjay) ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಕಾರಣ 'ಬೈರಾಗಿ' ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ್ ಅವರ ಲುಕ್‌ಗಳು ವಿಭಿನ್ನವಾಗಿವೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ (Anjali) ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ (Yasha Shivakumar) ಜೋಡಿಯಾಗಿದ್ದಾರೆ. ಅನೂಪ್‌ ಸೀಳಿನ್‌ (Anoop Seelin) ಸಂಗೀತ ನೀಡುತ್ತಿರುವ ಈ ಸಿನಿಮಾಗೆ ಕಾಲಿವುಡ್​ ಮೂಲದ ಡೈರೆಕ್ಟರ್ ವಿಜಯ್‌ ಮಿಲ್ಟನ್‌ ನಿರ್ದೆಶನದ ಜತೆಗೆ ಸಿನಿಮಾಟೋಗ್ರಫಿಯನ್ನು ಮಾಡುತ್ತಿದ್ದಾರೆ. 

ಮೊದಲ ಲಾಕ್​ಡೌನ್​ ಮುಗಿದ ಬಳಿಕ 'ಬೈರಾಗಿ' ಲಾಂಚ್ ಆಗಿತ್ತು. ಈಗ ಶೂಟಿಂಗ್​ ಪೂರ್ಣಗೊಳಿಸಿಕೊಂಡಿದೆ. ಕೃಷ್ಣ ಸಾರ್ಥಕ್ (Krishna Sarthak)​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿರುವ ಹೊಸ ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. 'ದಿಯಾ' ಚಿತ್ರದ ನಾಯಕ ಪೃಥ್ವಿ ಅಂಬರ್ (Pruthvi Ambar) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶಶಿಕುಮಾರ್ (Shashikumar) ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಇದು ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ. 

Shivarajkumar's Veda Movie:ವಯಸ್ಸಾದವರ ಲುಕ್‌ನಲ್ಲಿ ಶಿವಣ್ಣ, ಪಾವನಾ ಜೋಡಿ!

ಇನ್ನು ಶಿವಣ್ಣ, ಎ.ಹರ್ಷ (A.Harsha) ನಿರ್ದೇಶನದಲ್ಲಿ 'ವೇದ' (Veda) ಚಿತ್ರದಲ್ಲಿ ನಟಿಸುತ್ತಿದ್ದು, ಗೀತಾ ಶಿವರಾಜ್‌ಕುಮಾರ್‌ (Geetha SHivarjkumar) ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯತ್ತಿದೆ. ಈಗಷ್ಟೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ 'ವೇದ', ಎರಡನೇ ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಸೆಟ್‌ನಲ್ಲಿ ನಡೆಯುತ್ತಿದೆ. ಮತ್ತೊಮ್ಮೆ ಶಿವಣ್ಣ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿ ವಿಚಾರ. ಈ ಚಿತ್ರದಲ್ಲೂ ಹೊಸ ರೀತಿಯ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. 'ವೇದ' ಎನ್ನುವ ಹೆಸರು ಈಗಾಗಲೇ ಟ್ರೆಂಡ್‌ ಆಗಿದೆ ಎಂದು ಎ.ಹರ್ಷ ತಿಳಿಸಿದ್ದಾರೆ.
 

Bhairagi.. coming soon pic.twitter.com/aGMbC6QLGw

— DrShivaRajkumar (@NimmaShivanna)
click me!