Shiva Rajkumar: ಕವೀಶ್‌ ಶೆಟ್ಟಿ ನಟನೆಯ ಜಿಲ್ಕಾ ಚಿತ್ರವನ್ನು ಮೆಚ್ಚಿದ ಶಿವಣ್ಣ

ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘ಜಿಲ್ಕಾ’ ಚಿತ್ರವನ್ನು ಶಿವರಾಜ್‌ಕುಮಾರ್‌ ನೋಡಿ ಮೆಚ್ಚಿದ್ದಾರೆ. ಚಿತ್ರದ ನಿರ್ದೇಶಕ ಹಾಗೂ ನಾಯಕ ಕವೀಶ್‌ ಶೆಟ್ಟಿಅವರಿಗೆ ಫೋನ್‌ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. 

Kannada Actor Shivarajkumar Appreciated Jiilka Movie gvd

ಅಮೆಜಾನ್‌ ಪ್ರೈಮ್‌ನಲ್ಲಿ (Amazon Prime) ಪ್ರಸಾರವಾಗುತ್ತಿರುವ ‘ಜಿಲ್ಕಾ’ (Jiilka) ಚಿತ್ರವನ್ನು ಶಿವರಾಜ್‌ಕುಮಾರ್‌ (Shivarajkumar) ನೋಡಿ ಮೆಚ್ಚಿದ್ದಾರೆ. ಚಿತ್ರದ ನಿರ್ದೇಶಕ ಹಾಗೂ ನಾಯಕ ಕವೀಶ್‌ ಶೆಟ್ಟಿ (Kaveesh Shetty) ಅವರಿಗೆ ಫೋನ್‌ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಕವೀಶ್‌ ಶೆಟ್ಟಿ, ‘ನಮ್ಮ ಸಿನಿಮಾ ನೋಡಿ ಶಿವಣ್ಣ ಫೋನ್‌ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಚಿತ್ರದ ಕತೆ, ನನ್ನ ಅಭಿನಯ, ನಿರ್ದೇಶನದ ಬಗ್ಗೆ ಮೆಚ್ಚಿ ಮಾತನಾಡಿದರು. ಹೆತ್ತವರು, ಹರೆಯದ ವಯಸ್ಸಿನ ಮಕ್ಕಳ ಜವಾಬ್ದಾರಿ, ಅವರ ತಪ್ಪುಗಳನ್ನು ಬಹಳ ಅಚ್ಚುಕಟ್ಟಾಗಿ ಚಿತ್ರದಲ್ಲಿ ವಿವರಿಸಿದ್ದೀರಿ ಎಂದು ಶಿವಣ್ಣ ಹೇಳಿದರು. ಮನೆಗೂ ಆಹ್ವಾನಿಸಿದ್ದಾರೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ. 

ಈ ಬಗ್ಗೆ ಕವೀಶ್‌ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'Thank You SHIVANNA ನಿನ್ನೆ ರಾತ್ರಿ ಸುಮಾರು 9.20 ಕ್ಕೆ ನನಗೆ ನಮ್ಮ ಜಿಲ್ಕಾ ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಅವರಿಂದ ಕರೆ ಬಂತು. ಅವರು ಹ್ಯಾಟ್ರಿಕ್ ಹೀರೋ ಶಿವಣ್ಣ ನಿಮ್ಮ ಜೊತೆ ಮಾತಾಡ್ಬೇಕಂತೆ ಅಂತ ಹೇಳಿ ಅವರ ನಂಬರ್ ಶೇರ್ ಮಾಡಿಕೊಂಡರು. ನನಗೆ ನಿಜವಾಗಿಯೂ ಆಶ್ಚರ್ಯ ಆಯ್ತು! ಮತ್ತು ನಾನು ಶಿವಣ್ಣನಿಗೆ ಕರೆ ಮಾಡೋದಕ್ಕೆ ಪ್ರಯತ್ನಪಟ್ಟೆ ಕನೆಕ್ಟ್ ಆಗಲಿಲ್ಲ.  ಆದರೆ ಸುಮಾರು 9.22 ಕ್ಕೆ The LEGEND, SUPER STAR ನಮ್ಮೆಲ್ಲರ ಪ್ರೀತಿಯ ಶಿವಣ್ಣ ಅವರಿಂದಲೇ ನನಗೆ ಕರೆ ಬಂತು.  

Samyuktha Hegde: ಅಗ್ನಿ ಶ್ರೀಧರ್‌ ಕತೆಯ 'ಕ್ರೀಂ' ಚಿತ್ರಕ್ಕೆ ಕಿರಿಕ್ ಪಾರ್ಟಿ ಸುಂದರಿ ನಾಯಕಿ

ಪ್ರೀತಿಯಿಂದ ಮಾತಾಡಿದ ಶಿವಣ್ಣ 'ನಾನು ಅಮೇಜಾನ್ ಪ್ರೈಮ್ನಲ್ಲಿ ನಿಮ್ಮ ಜಿಲ್ಕಾ ಸಿನಿಮಾ ನೋಡ್ದೆ, ನನಗೆ ಸಬ್ಜೆಕ್ಟ್ ಬಹಳ ಇಷ್ಟ ಆಯ್ತು. ನೀವು ಮೂವಿನ ಪ್ರೆಸೆಂಟ್ ಮಾಡಿರೋ ರೀತಿ ಇಷ್ಟ ಆಯ್ತು ಮತ್ತು ವಿಶೇಷವಾಗಿ ಕ್ಲೈಮ್ಯಾಕ್ಸ್ ತುಂಬ ಚೆನ್ನಾಗಿ ಮಾಡಿದ್ದೀರಿ. ಇದು ನನ್ ನಂಬರ್ ಕರೆ ಮಾಡಿ ಮನೆಗೆ ಬನ್ನಿ ಅಂದ್ರು'. ಅವರೊಡನೆ ಮಾತು ಮುಗಿಸಿದ ಮೇಲೆ ನನ್ನಿಂದ ಈಗಲೂ ನಂಬುವುದಕ್ಕೆ ಆಗುತ್ತಿಲ್ಲ. ನಾನು ಅವರಿಂದ ಕರೆ ಬರುತ್ತೆ ಅಂತ ಯಾವ ನಿರೀಕ್ಷೆನೂ ಮಾಡಿರ್ಲಿಲ್ಲ. ಒಬ್ಬ ದೊಡ್ಡ ಸೂಪರ್ ಸ್ಟಾರ್ ಆಗಿ ನನ್ನಂತ ಹೊಸಬನಿಗೆ ಕರೆ ಮಾಡಿ ಪ್ರಶಂಸೆ ಮಾಡೋದು ನಮ್ಮ ತಂಡಕ್ಕೆ ದೊರೆತ ದೊಡ್ಡ ಉಡುಗೊರೆ ಮತ್ತು ಪ್ರೇರಣೆ. 

ಇನ್ನೂ ಹೆಚ್ಚಿನದನ್ನು ಮಾಡುವ ಸ್ಫೂರ್ತಿ ನಂಬಿಕೆ ಸಿಕ್ಕಿದೆ. ನಮ್ಮಂತ ಹೊಸಬರಿಗೆ ಕರೆ ಮಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸೋದು ಶಿವಣ್ಣರಂತ LEGEND ರಿಂದ ಮಾತ್ರ ಸಾಧ್ಯ. ಶಿವಣ್ಣ ನೀವು ಪ್ರೀತಿಯಿಂದ ಆಶೀರ್ವಾದದಿಂದ ನಮ್ಮನ್ನು ಮುಂದೆಯೂ ಹರಸುತ್ತೀರಿ ಎನ್ನುವ ನಂಬಿಕೆಯೊಂದಿಗೆ ನಿಮ್ಮನ್ನು ಭೇಟಿಯಾಗುವ ಆ ಅದ್ಭುತ ಕ್ಷಣಕ್ಕೋಸ್ಕರ ಎದುರು ನೋಡುತ್ತಿದ್ದೇವೆ'  ಎಂದು ಕವೀಶ್‌ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಇನ್ನು ಸಡಗರ ರಾಘವೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಕವೀಶ್‌ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಮೇಘಾ ಶೆಟ್ಟಿ (Megha Shetty) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Benki Movie First Look: ಅನೀಶ್‌ ತೇಜೇಶ್ವರ್‌ ಹೊಸ ಚಿತ್ರದ ಪೋಸ್ಟರ್ ರಿಲೀಸ್

ಇತ್ತೀಚೆಗಷ್ಟೇ ಶಿವಣ್ಣ 'ಗರುಡ ಗಮನ ವೃಷಭ ವಾಹನ' (Garuda Gamana Vrishabha Vahana) ಸಿನಿಮಾಗೆ ಸಂಬಂಧಪಟ್ಟಂತೆ ಚಿತ್ರದ ನಾಯಕ ರಾಜ್ ಬಿ ಶೆಟ್ಟಿಗೆ (Raj B Shetty) ಸರ್ಪ್ರೈಸ್ ಕರೆ ಮಾಡಿದ್ದರು. ಈಗಾಗಲೇ ಜೀ5 ನಲ್ಲಿ (Zee5) ಬಿಡುಗಡೆಯಾಗಿರುವ 'ಭಜರಂಗಿ 2' (Bhajarangi 2) ದಾಖಲೆಯ ವೀಕ್ಷಣೆಯೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂತಸದಲ್ಲಿರುವ ಶಿವಣ್ಣ ರಾಜ್ ಬಿ ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದರು. ಮಂಗಳಾದೇವಿಗೆ ನೀನೇನು ದೊಡ್ಡ ಡಾನಾ? ಎಂದು ಕೇಳಿದ್ದಾರೆ. ಯಾರು ಯಾರು ಎಂದು ಗೊಂದಲದಲ್ಲಿ ಕೇಳಿರುವ ರಾಜ್ ಶೆಟ್ಟಿಗೆ, ಅಲ್ಲೇ ಬರ್ಲಾ? 

ನಾನೋ ನೀನೋ ನೋಡೇ ಬಿಡೋಣ ಎಂದು ಖಡಕ್ ಆಗಿ ನುಡಿದಿದ್ದಾರೆ ಶಿವಣ್ಣ. ಸರಿ ಬನ್ನಿ, ನೋಡೇ ಬಿಡೋಣ ಎಂದು ಪ್ರತ್ಯುತ್ತರ ನೀಡಿದ್ದಾರೆ ರಾಜ್. ಜತೆಗೆ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಶಿವಣ್ಣ ನಾನು ಭಜರಂಗಿ ಎಂದು ನಕ್ಕಿದ್ದಾರೆ. ಒಂದು ಕ್ಷಣ ಯೋಚಿಸಿದ ರಾಜ್ ಬಿ ಶೆಟ್ಟಿಯವರಿಗೆ ನಂತರ ಅರಿವಾಗಿದೆ. ನಂತರ ಇಬ್ಬರೂ ಮಾತು ಮುಂದುವರೆಸಿದ್ದಾರೆ. ನೀವು ಭಜರಂಗಿ ಮಾಡಿದ ನಂತರ ನಮ್ಮ ಗರುಡ ಗಮನ ಬಂದಿದ್ದು. ಆದ್ದರಿಂದ ನೀವೇ ದೊಡ್ಡ ಡಾನ್ ಎಂದು ತಮಾಷೆ ಮಾಡಿದ್ದರು ರಾಜ್ ಬಿ ಶೆಟ್ಟಿ. ಶಿವರಾಜ್​ಕುಮಾರ್ ರಾಜ್ ಬಿ ಶೆಟ್ಟಿಯವರ ಚಿತ್ರಗಳನ್ನು ಹಾಗೂ ಅವರ ಅಭಿನಯವನ್ನು ಈ ವೇಳೆ ಶ್ಲಾಘಿಸಿದ್ದರು. 
 

Latest Videos
Follow Us:
Download App:
  • android
  • ios