ಕಾಶ್ಮೀರಕ್ಕೆ ಹೋಗಿ ಬಂದ ಆರ್ಟಿಕಲ್‌ 370!

Kannadaprabha News   | Asianet News
Published : Apr 03, 2021, 09:51 AM IST
ಕಾಶ್ಮೀರಕ್ಕೆ ಹೋಗಿ ಬಂದ ಆರ್ಟಿಕಲ್‌ 370!

ಸಾರಾಂಶ

ಹಿರಿಯ ನಟ ಶಶಿಕುಮಾರ್‌ ಅವರು ಮಿಲಿಟರಿ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ‘ಆರ್ಟಿಕಲ್‌ 370’. ಈ ಚಿತ್ರದ ಚಿತ್ರೀಕರಣ ಇತ್ತೀಚಿಗಷ್ಟೇ ಕಾಶ್ಮೀರದಲ್ಲಿ ಯಶಸ್ವಿಯಾಗಿ ಮುಗಿದಿದೆ

ಚಿತ್ರದ ಹೆಸರೇ ಹೇಳುವಂತೆ ದೇಶಪ್ರೇಮದ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಕೆ ಶಂಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಗಡಿಯಲ್ಲಿ ಉಗ್ರಗಾಮಿಗಳ ಒಳ ನುಸುಳುವಿಕೆ, ಅವರ ವಿರುದ್ಧ ಭಾರತೀಯ ಸೈನಿಕರ ಕಾರ್ಯಚರಣೆಯ ಹಿನ್ನೆಲೆ ಇದೆ. ಹಲವು ವರ್ಷಗಳ ಹಿಂದೆ ಪ್ರತ್ಯೇಕತಾವಾದಿಗಳಿಂದ ಕಿರುಕುಳ ಅನುಭವಿಸಿ ಗುಳೆ ಹೋಗಿದ್ದ ಕಾಶ್ಮೀರಿ ಪಂಡಿತರು ಆರ್ಟಿಕಲ… 370 ರದ್ದಾದ ನಂತರ ಮತ್ತೆ ಕಾಶ್ಮೀರಕ್ಕೆ ಮರಳಿ ಬರುತ್ತಾರೆ, ಆ ಪಂಡಿತರನ್ನು ನೋಡಿದ ಸ್ಥಳೀಯ ಕಾಶ್ಮೀರಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ದೃಶ್ಯಗಳನ್ನು ಚಿತ್ರಕ್ಕಾಗಿ ಸೆರೆ ಹಿಡಿಯಲಾಯಿತು.

ಕಾಶ್ಮೀರದಲ್ಲಿ ಪುನೀತ್‌ ರಾಜ್‌ಕುಮಾರ್‌; 'ಜೇಮ್ಸ್‌' ಸಿನಿಮಾ ಶೂಟಿಂಗಲ್ಲಿ ಭಾಗಿ! 

ಸುಮಾರು ಹತ್ತು ದಿನಗಳ ಕಾಲ ಕಾಶ್ಮೀರದ ಗುಲ್‌ಮಾರ್ಗ್‌, ದಾಲ್ಲೇಕ್‌, ಮೊಘಲ್‌ ಪಾರ್ಕ್, ಪಲ್ಗಾವ್‌ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರಕ್ಕೆ ಹೋಗುವ ಮೊದಲು ಮಡಿಕೇರಿ, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಶ್ರವಣಬೆಳಗೊಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಯುಗಂತ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ರವಿ ಛಾಯಾಗ್ರಾಹಣ ಇದೆ. ಭರತ್‌ಗೌಡ ಚಿತ್ರದ ನಿರ್ಮಾಪಕರು. ಹಿರಿಯ ನಟ ಶಿವರಾಂ, ಅವಿನಾಶ್‌, ಶ್ರುತಿ, ದೊಡ್ಡ ರಂಗೇಗೌಡ್ರು, ಗಣೇಶ್‌ರಾವ್‌, ರಮಾನಂದ್‌, ಕಿಲ್ಲರ್‌ ವೆಂಕಟೇಶ್‌, ರಘುರಂಜನ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ