ಯೂಟ್ಯೂಬ್‌ಗೆ ಬಂತು ಸಂಚಾರಿ ವಿಜಯ್ ನಟನೆಯ 'ನಾನು ಅವನಲ್ಲ ಅವಳು' ಸಿನಿಮಾ!

Kannadaprabha News   | Asianet News
Published : Jun 18, 2021, 12:19 PM ISTUpdated : Jun 18, 2021, 12:44 PM IST
ಯೂಟ್ಯೂಬ್‌ಗೆ ಬಂತು ಸಂಚಾರಿ ವಿಜಯ್ ನಟನೆಯ 'ನಾನು ಅವನಲ್ಲ ಅವಳು' ಸಿನಿಮಾ!

ಸಾರಾಂಶ

ನಿರ್ಮಾಪಕ ರವಿ ಗರಣಿ ಅವರಿಗೆ ಕೃತಜ್ಞತೆ ಸಲ್ಲಿಸಿದ ನಿರ್ದೇಶಕ ಲಿಂಗದೇವರು. ಯುಟ್ಯೂಬ್‌ನಲ್ಲಿ ಸಂಚಾರಿ 'ಅವನಲ್ಲ ಅವಳು' ಸಿನಿಮಾ. 

ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಸಿನಿಮಾವನ್ನು ಈಗ ಉಚಿತವಾಗಿ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ಸಿರಿ ಕನ್ನಡ ಯೂಟ್ಯೂಬ್ ಚಾನಲ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯ ಜೊತೆಗೆ ರಾಜ್ಯಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿಗಳೂ ವಿಜಯ್ ಅವರಿಗೆ ಲಭಿಸಿತ್ತು.

ಸಂಚಾರಿ ವಿಜಯ್ ನಿಧನದ ಬಳಿಕ ಈ ಚಿತ್ರದ ಬಗ್ಗೆ ಮತ್ತಷ್ಟು ಚರ್ಚೆ, ವಿಜಯ್ ಅಭಿನಯದ ಬಗ್ಗೆ ಕುತೂಹಲ ಹೆಚ್ಚಾದ ಕಾರಣ ನಿರ್ಮಾಪಕ ರವಿ ಗರಣಿ ಅವರು ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕ ಬಿ ಎಸ್ ಲಿಂಗದೇವರು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ವಿಜಯ್‌ಗೆ ಕನ್ನಡದಲ್ಲೇ ನಮನ ಸಲ್ಲಿಸಿದ ಯುಎಸ್ ಕಾನ್ಸುಲೇಟ್ ಜನರಲ್ 

ವಿಜಯ್ ನೆನಪಲ್ಲಿ 

ಧನ್ಯವಾದ ರವಿ ಗರಣಿ ಸಾರ್, 

ತಾವು ನಮ್ಮ ಹೆಮ್ಮೆ.. ನಾವಿಬ್ಬರೂ ಸುಮಾರು 25 ವರ್ಷಕ್ಕೂ ಹೆಚ್ಚು ಸಮಯದಿಂದ ಸ್ನೇಹಿತರು ಮತ್ತು ನೀವೊಬ್ಬ ಅತ್ಯುತ್ತಮ ಸಿನಿಮಾ ನಿರ್ದೇಶಕರಾಗಿದ್ದರೂ ಕೂಡ ನನ್ನ ಮೇಲೆ ನಂಬಿಕೆ ಇಟ್ಟು ಯಾವುದೇ ವ್ಯಾವಹಾರಿಕ ದೃಷ್ಟಿಕೋನ ಇಟ್ಟುಕೊಳ್ಳದೆ ನಾನು ಅವನಲ್ಲ ಅವಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಲ್ಲದೆ, ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ನಿರ್ದೇಶನ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. 

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್! 

ಪ್ರಶಸ್ತಿ ವಿಜೇತ ಚಿತ್ರಗಳನ್ನು ಬಿಡುಗಡೆ ಮಾಡಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಕರ್ನಾಟಕದಾದ್ಯಂತ ಬಿಡುಗಡೆ ಮಾಡಲಾಯಿತು. ಆದರೂ ಹೆಚ್ಚು ಹೆಚ್ಚು ಜನರಿಗೆ ತಲುಪಲಾಗಲಿಲ್ಲ ಎಂಬ ಕೊರಗು ಮನೆ ಮಾಡಿತ್ತು. ಕಳೆದ ಮೂರು ದಿನಗಳಿಂದ ನೂರಾರು ಫೋನ್ ಮತ್ತು ಮೆಸೇಜ್ ಗಳ ಮುಖಾಂತರ ನಾನು ಅವನಲ್ಲ ಅವಳು ಸಿನಿಮಾ ನೋಡಲು ಅವಕಾಶ ಮಾಡಿ ಎಂಬ ವಿನಂತಿಗೆ ಪೂರಕವಾಗಿ ನಾನು ಕೂಡ ಕನ್ನಡದ ಪ್ರಮುಖ ಚಾನಲ್ ನವರಿಗೆ ಸಂಪರ್ಕಿಸಲು ಪ್ರಯತ್ನ ಮಾಡಿದೆ , ಆದರೆ ಸಂಪರ್ಕವೇ ಆಗಲಿಲ್ಲ!! 

ವಿಜಯ್ ಸ್ವಾಭಿಮಾನಿದಿಂದ ಸ್ವಾವಲಂಬಿಯಾಗಿ ಬದುಕಿದವನು, ಯಾರ ಮುಂದೆಯೂ ತನ್ನ ಸ್ವಾಭಿಮಾನಕ್ಕೆ ವಿರುದ್ಧವಾಗಿ ಸಹಾಯ ಬೇಡಿದವನಲ್ಲ, ತಾನೇ ಕಷ್ಟದಲ್ಲಿದ್ದರೂ ಅನೇಕರಿಗೆ ಸಹಾಯ ಮಾಡಿದವ..ವಿಜಯ್ 

ಈಗ ನೀವು ಮತ್ತೆ ಯಾವ ವ್ಯವಹಾರನೂ ಬೇಡ, ನನಗೆ ಈ ಸಿನಿಮಾ ಮಾಡಿದ ಹೆಮ್ಮೆ ಇದೆ ಮತ್ತು ಇಂದು ವಿಜಯ್ ಮತ್ತಷ್ಟು ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಲಿ ಎಂಬ ಸದುದ್ದೇಶದಿಂದ YOUTUBE ನಲ್ಲಿ ಅವಕಾಶ ಮಾಡಿಕೊಟ್ಟಿದ್ದೀರಿ.. ನಿಮಗೆ ಕೋಟಿ ಕೋಟಿ ನಮಸ್ಕಾರಗಳು. 

ಸಂಚಾರಿ ವಿಜಯ್ ಮೇರು ನಟರ ಸಾಲಿನಲ್ಲಿ ನಿಲ್ಲುವಂತಹ ಪ್ರತಿಭಾವಂತ ಕಲಾವಿದ. ಅವರ ಅಗಾಧ ಶಕ್ತಿಯ ಪರಿಚಯ ಆಗಿದ್ದು ನಾನು ಅವನಲ್ಲ ಅವಳು ಸಿನಿಮಾದಿಂದ ಎಂಬ ಹೆಮ್ಮೆಯೇ ಇವತ್ತು ಮನಸ್ಸು ಭಾರವಾಗಿಸುತ್ತಿದೆ. ಈ ಸಿನಿಮಾ ನೋಡಿದರೆ ಸಂಚಾರಿ ವಿಜಯ್ ಎಂಬ ಅಪ್ಪಟ ಪ್ರತಿಭೆ ಮತ್ತಷ್ಟು ಮನಸ್ಸುಗಳಿಗೆ ಕಾಡುತ್ತದೆ ಎಂಬ ನಂಬಿಕೆ ನನಗಿದೆ. 

ನಾನು ಅವನಲ್ಲ ಅವಳು ಸಿನಿಮಾವನ್ನು ಯೂಟ್ಯೂಬ್ ನಲ್ಲಿ ಎಲ್ಲರೂ ನೋಡಲು ಅನುವು ಮಾಡಿಕೊಟ್ಟದ್ದಕ್ಕೆ ಮತ್ತೆ ಧನ್ಯವಾದ. ಬಹುಶಃ ಇದು ನಾವು ಅವರಿಗೆ ಸಲ್ಲಿಸಬಹುದಾದ ಅಂತಿಮ ನಮನ. 

ಈ ಕೆಳಗಿನ ಲಿಂಕ್ ಬಳಸಿ ಉಚಿತವಾಗಿ ನೋಡಿ. 

ನಾನು ಅವನಲ್ಲ ಅವಳು

ನಮಸ್ಕಾರ. 

ಬಿ ಎಸ್ ಲಿಂಗದೇವರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS