* ಅಗಲಿದ ಸಾಧಕರಿಗೆ ಸ್ಯಾಂಡಲ್‌ವುಡ್ ಶ್ರದ್ಧಾಂಜಲಿ
* ನಿರ್ಮಾಪಕ ರಾಮು,ಕೆಸಿಎನ್ ಚಂದ್ರಶೇಖರ್ ನಮನ
* ಸಭೆಯಲ್ಲಿ ಕಾಣದ ಸಂಚಾರಿ ವಿಜಯ್ ಭಾವಚಿತ್ರ
* ಸ್ಯಾಂಡಲ್ ವುಡ್ ಕಾಡುತ್ತಿರುವ ಕೊರೋನಾ
ಬೆಂಗಳೂರು(ಜೂ. 17) ಅಗಲಿದ ದಿಗ್ಗಜರಿಗೆ ಸ್ಯಾಂಡಲ್ ವುಡ್ ನ ಶ್ರದ್ಧಾಂಜಲಿ ಸಲ್ಲಿಸಿದೆ. ಫಿಲ್ಮ್ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ್ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಪಾರ ಅಭಿಮಾನಿ ವರ್ಗದಿಂದ ದೂರಾಗಿರೋ ಕಲಾವಿದರು ನಿರ್ಮಾಪಕರು, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 47 ಮಂದಿ ಹಾಗೂ ಕುಟುಂಬದವರು ಕೊರೋನಾಗೆ ಬಲಿಯಾಗಿದ್ದಾರೆ.
undefined
ನಟ ಸಂಚಾರಿ ವಿಜಯ್ , ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಿರ್ಮಾಪಕ ಕೋಟಿ ರಾಮು ಅಗಲಿದ್ದು ಚಿತ್ರೋದ್ಯಮದ ಗಣ್ಯರು ಆಗಮಿಸಿ ನಮನ ಸಲ್ಲಿಸಿದರು.
ಇಂಡಸ್ಡ್ರಿಗೆ ಕೆ ಸಿಎನ್ ಫ್ಯಾಮಿಲಿ ತುಂಬ ಆಪ್ತರು. ನನ್ನ ಸಿನಿಮಾದ ನಿರ್ಮಾಪಕ ರಾಮು ಆಗಲಿದ್ದಾರೆ. ಚಿತ್ರಂಗದವರು ನಮ್ಮನ್ನ ಬಿಟ್ಟು ಹೋಗಿದ್ದಾರೋ ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಮೇಘನಾ ರಾಜ್ ನೋವಿಗೆ ಸ್ಪಂದಿಸಿದ್ದ ಸಂಚಾರಿ ವಿಜಯ್
ಕಳೆದುಕೊಂಡಿರುವವರನ್ನು, ಕೊರೊನಾ ಎಲ್ಲವನ್ನೂ ನೆನೆಸಿಕೊಂಡ್ರೆ ತುಂಬಾ ನೋವಾಗುತ್ತೆ. ಇಲ್ಲಿ ಹೋಗಿರೋರು ಇಂಡಸ್ಟ್ರಿಯನ್ನ ಅಪಾರವಾಗಿ ಪ್ರೀತಿಸಿದವರು. ರಾಮು ಅವರು ಸೇರಿದಂತೆ ಹಲವು ಎಲ್ಲರ ಅಗಲಿಕೆ ತುಂಬಾ ನೋವಾಗಿದೆ ಎಂದು ಹಿರಿಯ ಕಲಾವಿದ ಜಯಮಾಲಾ ಕಂಬನಿ ಮಿಡಿದರು.
ನಾನು ನನ್ನಿಂದ ಅನ್ನೋ ಗರ್ವ ಬಿಟ್ಟು ನಾವು ಸೇರೋದು ಮಣ್ಣಿಗೇನೆ ಅನ್ನೋ ಪಾಠ ಕಲಿಸಿದೆ ಕೊರೋನಾ. ಈ ಮಹಾನೀಯರ ಸಹಾಯದಿಂದ ಯಾರೆಲ್ಲ ಬೆಳೆದಿದ್ದಾರೆ ಅನ್ನೋ ಮಾನವೀಯ ಮಾತು ಬರ್ತಿದೆ. ಇವರು ಎಷ್ಟು ಸಂಪಾದನೆ ಮಾಡಿದ್ದಾರೆ ಅನ್ನೋದನ್ನ ಮಾತಾಡ್ತಿಲ್ಲ. ಅವರು ಮಾಡಿರೋ ಕೆಲಸಗಳು ಅವರನ್ನ ನೆನೆಯೋ ಕೆಲಸ ಮಾಡ್ತಿವೆ ಎಂದು ಕಲಾವಿದೆ ತಾರಾ ಹೇಳಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಟನನ್ನು ಮರೆತು ಬಿಡ್ತಾ ಫಿಲ್ಮ್ ಚೇಂಬರ್? ನಿಧನರಾದ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರೂ ಸಭೆಯಲ್ಲಿ ಸಿಗಲಿಲ್ಲ ಸಂಚಾರಿ ವಿಜಯ್ ಅವರ ನೆನಪು ಆಗಲೇ ಇಲ್ಲ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಭಾವಚಿತ್ರ ಕಾಣಲೇ ಇಲ್ಲ.
ಫಿಲ್ಮ್ ಚೇಂಬರ್ ನ ಅಧ್ಯಕ್ಷ ಗುಬ್ಬಿ ಜಯರಾಜ್ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಸಭೆಗೆ ನಟ ಶಿವರಾಜ್ ಕುಮಾರ್, ನಟಿ ತಾರಾ ಅನುರಾಧ, ಜಯಮಾಲ, ಶಿವರಾಜ್ ಕೆ.ಅರ್ ಪೇಟೆ, ಕಾರ್ತಿಕ್ ಜಯರಾಮ್ ಬಂದಿದ್ದರು.