ನಟ ಯಶ್‌ ಮನೆಯ ಸಿನಿಮಾ ಅಂದ್ರೆ ಇಡೀ ದೇಶ ನೋಡತ್ತೆ: ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪ

Published : May 21, 2025, 05:25 PM IST
ನಟ ಯಶ್‌ ಮನೆಯ ಸಿನಿಮಾ ಅಂದ್ರೆ ಇಡೀ ದೇಶ ನೋಡತ್ತೆ: ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪ

ಸಾರಾಂಶ

ಯಶ್‌ ತಾಯಿ ಪುಷ್ಪಾ ಅರುಣ್‌ಕುಮಾರ್‌, PA ಪ್ರೊಡಕ್ಷನ್ಸ್‌ ಸ್ಥಾಪಿಸಿ 'ಕೊತ್ತಲವಾಡಿ' ಚಿತ್ರ ನಿರ್ಮಿಸಿದ್ದಾರೆ. ಬೆಂಗಳೂರಿನಲ್ಲಿ ಟೀಸರ್‌ ಬಿಡುಗಡೆಯಾಗಿ, ಶರಣ್‌ ಶುಭ ಹಾರೈಸಿದರು. ಪುಷ್ಪಾ, ಯಶ್‌ರಿಂದ ಕಲಿತ ಗುಣಮಟ್ಟದ ಸಿನಿಮಾ ನಿರ್ಮಾಣದ ಮಹತ್ವ ತಿಳಿಸಿದರು. ಪೃಥ್ವಿ ಅಂಬರ್‌, ಗ್ರಾಮೀಣ ಹಿನ್ನೆಲೆಯ ಈ ಚಿತ್ರದಲ್ಲಿ ರಗಡ್‌ ಲುಕ್‌ನಲ್ಲಿದ್ದಾರೆ.

ನಟ ʼರಾಕಿಂಗ್‌ ಸ್ಟಾರ್‌ʼ ಯಶ್‌ ತಾಯಿ ಪುಷ್ಪ ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ಪುಷ್ಪ ಈಗ ತಮ್ಮದೇ  PA Productions  ಸಂಸ್ಥಾಪಿಸಿದ್ದು, ಈ ನಿರ್ಮಾಣ ಸಂಸ್ಥೆಯಡಿ ʼಕೊತ್ತಲವಾಡಿʼ ಎಂಬ ಚೊಚ್ಚಲ ಚಿತ್ರ ತಯಾರಾಗಿದೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟೀಸರ್‌ ಬಿಡುಗಡೆ ನಡೆದಿದೆ. 

ಟೀಸರ್‌ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪುಷ್ಪ ಅರುಣ್‌ ಕುಮಾರ್‌, ನಟ ಯಶ್‌ ತಂದೆ ಅರುಣ್‌ ಕುಮಾರ್‌, ಪೃಥ್ವಿ ಅಂಬರ್‌, ಕಾವ್ಯ ಶೈವ,  ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ನಿರ್ದೇಶಕ ಶ್ರೀರಾಜ್ ಭಾಗಿಯಾಗಿದ್ದರು. ನಟ ಶರಣ್‌ ಟೀಸರ್‌ ರಿಲೀಸ್‌ ಕಾರ್ಯಕ್ರಮ ವಿಶೇಷ ಅತಿಥಿಯಾಗಿ ಆಗಮಿಸಿ ಟೀಸರ್‌ ಅನಾವರಣ ಮಾಡಿ ಶುಭಾಶಯ ತಿಳಿಸಿದರು. 

ನಟ ಶರಣ್‌ ಮಾತನಾಡಿ, “ಒಂದು ಹೊಸ ಶುರುವಾತಿನ ವೈಬ್‌ ಇಲ್ಲಿ ಕಾಣಿಸುತ್ತಿದೆ. ನಮ್ಮ ಯಶಸ್ಸಿನ ಗುಟ್ಟು ಈ ಒಗ್ಗಟ್ಟಿನ ಸಾಕ್ಷಿ, ಈ ಚಿತ್ರಕ್ಕೆ ಕೆಲಸ ಮಾಡಿರುವ ಮುಖದಲ್ಲಿ ಕುತೂಹಲ, ಪಾಸಿಟಿವ್‌ ಎನರ್ಜಿ, ಭಕ್ತಿ, ಆತ್ಮೀಯತೆ, ಪ್ರೀತಿ ಇದೆ. ಇಷ್ಟು ಸಾಕು ಒಂದು ಯಶಸ್ವಿಗೆ. ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಕೊಟ್ಟಿದ್ದಕ್ಕೆ ಪುಷ್ಪ ಅಮ್ಮನಿಗೆ ಧನ್ಯವಾದಗಳು. ಇಷ್ಟು ವರ್ಷದ ಕನಸು ಲೋಕಾರ್ಪಣೆ ಮಾಡುತ್ತಿರುವ ಖುಷಿ ಚಿತ್ರತಂಡದ ಮುಖದಲ್ಲಿ ಕಾಣಿಸುತ್ತದೆ. ಇಡೀ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ” ಎಂದು ಶುಭ ಹಾರೈಸಿದರು. 


ನಿರ್ಮಾಪಕಿ ಪುಷ್ಪ ಅರುಣ್‌ ಕುಮಾರ್‌ ಮಾತನಾಡಿ, “ಸಿನಿಮಾ ಅವಕಾಶ ಕೊಡುತ್ತೇನೆ ಸುತ್ತಿಕೊಂಡು ಬರಬಾರದು. ಕೆಲಸ ಮಾತನಾಡಬೇಕು. ನಾವು ಮಾತನಾಡಬಾರದು. ಈ ಸಿನಿಮಾವನ್ನು ನಾವಷ್ಟೇ ನೋಡಲ್ಲ, ಯಶ್‌ ಅವರ ಮನೆಯ ಸಿನಿಮಾ ಅಂದ್ರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ಲ ಅಂದರೆ ಮಾಡಬೇಡಿ. ಎಲ್ಲವನ್ನೂ ನಿಮಗೆ ಕೊಡುತ್ತೇವೆ. ಆರ್ಟಿಸ್ಟ್‌ ಸೆಲೆಕ್ಷನ್‌ ಅವರೇ ಮಾಡಿದ್ದಾರೆ. ನಮ್ಮ ಬ್ಯಾನರ್‌ ಯಾವುದು? ಎಲ್ಲವನ್ನೂ ಯಶ್‌ಗೆ ಉತ್ತರ ಕೊಡಬೇಕು. ಸಿನಿಮಾ ಏನು ಕೇಳುತ್ತದೆಯೋ ಅದು ಕೊಡಬೇಕು, ಸಿನಿಮಾಗೆ ಮೋಸ ಮಾಡಬಾರದು ಎನ್ನುವುದು. 10ರೂಪಾಯಿ ಜಾಸ್ತಿಯಾಗಲಿ. ಕ್ವಾಲಿಟಿ ಕೊಡಬೇಕು. ಕಥೆ ಮಾತನಾಡಬೇಕು. ಅದೇ ರೀತಿ ನೀವು ಮಾಡುತ್ತೇವೆ ಎಂದರೆ ನಿಮಗೆ ಕೊಡುತ್ತೇವೆ ಎಂದು ಯಶ್‌ನಿಂದ ಕಲಿತಿದ್ದೇವೆ. ಇದನ್ನೇ ಸಿನಿಮಾ ತಂಡಕ್ಕೆ ಹೇಳಿದ್ದೆ. ಈಗ ವೀಕ್ಷಕರ ಪ್ರತಿಕ್ರಿಯೆಗೋಸ್ಕರ ನಾವು ಕಾಯುತ್ತೇವೆ” ಎಂದು ಹೇಳಿದರು.

ಅರುಣ್‌ ಕುಮಾರ್‌ ಮಾತನಾಡಿ, “ನಿನಗೆ ಖುಷಿಯಾದರೆ ಮಾಡಮ್ಮ ಎಂದು ಪತ್ನಿಗೆ ಬೆಂಬಲ ಕೊಡ್ತೀನಿ. ನಾನು ರೈತ. ನೀನು ಏನ್‌ ಬೇಕಾದರೂ ಮಾಡು” ಎಂದು ಹೇಳಿರೋದಾಗಿ ತಿಳಿಸಿದರು.

ನಟ ಪೃಥ್ವಿ ಅಂಬರ್‌ ಮಾತನಾಡಿ, “ರಾಜು ಸರ್‌ ನನಗೆ ಮೊದಲಿನಿಂದ ಪರಿಚಯ. ನನಗೆ ಅವರು ಹೇಳಿರುವ ಎರಡನೇ ಕಥೆ ಇದು. ಹಳ್ಳಿಯ ಸೊಡಗಿರುವ, ಹಳ್ಳಿಯ ಮುಗ್ದ, ಪವರ್‌ ಫುಲ್‌ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಪ್ಲೇ ಮಾಡಬೇಕು ಎಂಬ ಮನಸ್ಸು ಇತ್ತು. ಎಲ್ಲರೂ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಿನಿಮಾ ಮುಗಿದರೂ ಪ್ರೊಡ್ಯೂಸರ್‌ ಯಾರು ಎಂದು ಗೊತ್ತಿರಲಿಲ್ಲ. ಪ್ರೊಡಕ್ಷನ್‌ ಹೌಸ್‌ ಮೀಟ್‌ ಮಾಡೋಣಾ ಎಂದು ರಾಜು ಸರ್‌ ಹೇಳುತ್ತಿದ್ದರು. ಪುಷ್ಪ ಅಮ್ಮನವರ ಹಾಸನದ ಮನೆಗೆ ಹೋದೆವು. ಮೀಟಿಂಗ್‌ ಮುಗಿಸಿ ಹೊರಟ ಬಳಿಕ ಪುಷ್ಪ ಅಮ್ಮನ ಕಾಲಿಗೆ ಬಿದ್ದಾಗ ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ ಎಂದರು. ಪುಷ್ಪ ಅಮ್ಮ ಬ್ರ್ಯಾಗ್ರೌಂಡ್‌ ಇಲ್ಲದವರ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಸಿನಿಮಾ ಕಥೆಗೆ ಏನೋ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ. ಬಹಳ ಪ್ರೀತಿಯಿಂದ ಎಲ್ಲರೂ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ” ಎಂದು ಹೇಳಿದರು.

ನಿರ್ದೇಶಕ ಶ್ರೀರಾಜ್‌ ಮಾತನಾಡಿ, “ನಾನು ಸಿನಿಮಾ ಮಾಡುವುದು ನನಗೆ ನಿನಗೆ ಮಾತ್ರ ಗೊತ್ತಿರಬೇಕು. ಯಾರಿಗೂ ಗೊತ್ತಾಗಬಾರದು ಎಂದು ಹೇಳಿದರು. ಕೊತ್ತಲವಾಡಿ ಒನ್‌ ಲೈನ್‌ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅದಕ್ಕೆ ಓಂಕಾರ ಹಾಕಿದರು. ಕಥೆ ಬರೆಯೋದಿಕ್ಕೆ ಎಂಟು ತಿಂಗಳು ಟೈಮ್‌ ತೆಗೆದುಕೊಂಡೆ. ಕಥೆ ಪೂರ್ತಿಯಾದಾಗ ಬಾ ಎಂದಿದ್ದರು. ಅಮ್ಮನಿಗೆ ಪೂರ್ತಿಯಾಗಿ ಕಥೆ ಹೇಳಿದೆ ಅವರಿಗೆ ಇಷ್ಟವಾಯ್ತು. ಅಲ್ಲಿಂದ ಈ ಜರ್ನಿ ಶುರುವಾಯ್ತು” ಎಂದರು.

ಪೃಥ್ವಿ ಅಂಬರ್ ಈಗ ಕಂಪ್ಲೀಟ್‌ ರಗಡ್‌ ಹಾಗೂ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊತ್ತಲವಾಡಿ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್‌ ಹೇಳೋದಿಕ್ಕೆ ಹೊರಟಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಪೃಥ್ವಿ ಅಂಬರ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Fact Check: ಕ್ರಿಕೆಟರ್‌ ತಿಲಕ್‌ ವರ್ಮರನ್ನು ಲವ್‌ ಮಾಡುತ್ತಿದ್ದಾರಾ ಕನ್ನಡದ ಈ ನಟಿ? ಯಾರದು?
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda