ರವಿಶಂಕರ್ 20 ವರ್ಷದ ಬಳಿಕ ಮತ್ತೆ ಆಕ್ಷನ್ ಕಟ್ ಹೇಳೋಕೆ ನಾನ್ ರೆಡಿ ಎಂದಿದ್ದಾರೆ. ಆರ್ಮುಗಂ ರವಿಶಂಕರ್ ಮತ್ತೆ ಆಕ್ಷನ್ ಕಟ್ ಹೇಳ್ತಿರೋದು ಯಾವ್ ಹೀರೋಗೆ ಅಂದ್ಕೊಂಡ್ರಿ. ಬೇರಾರು ಅಲ್ಲ ರೀ. ತನ್ನ ಮನಿಗೆ ನಿರ್ದೇಶನ ಮಾಡ್ತಾರೆ ಅಪ್ಪ ರವಿಶಂಕರ್.
ಆರ್ಮುಗ ರವಿಶಂಕರ್.. ಸ್ಯಾಂಡಲ್ವುಡ್ನ ಮಸ್ತ್ ವಿಲನ್. ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಹಾಗೆ ರವಿ ಶಂಕರ್ ಮಾಡದ ಪಾತ್ರಗಳು ಇಲ್ವೇನೋ. ಕಿಚ್ಚ ಸುದೀಪ್ ನಟನೆಯ ಕೆಂಪೇಗೌಡ ಸಿನಿಮಾದಲ್ಲಿ ರವಿಶಂಕರ್ ಮಾಡಿರೋ ಆಮುರ್ಗಂ ಪಾತ್ರ ಎಂದಾದ್ರು ಮರೆಯೋಕೆ ಸಾಧ್ಯನಾ.. ಈ ಪಾತ್ರದಿಂದ ರವಿಶಂಕರ್ಗೆ ನೇಮು-ಫೇಮು-ಕ್ರೇಜು-ಕಾಸು ಎಲ್ಲವೂ ಸಿಕ್ತು. ಸಕಲಕಲಾ ವಲ್ಲಭ ರವಿಶಂಕರ್ ಈಗ ತನ್ನ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ರವಿಶಂಕರ್ 20 ವರ್ಷದ ಬಳಿಕ ಮತ್ತೆ ಆಕ್ಷನ್ ಕಟ್ ಹೇಳೋಕೆ ನಾನ್ ರೆಡಿ ಎಂದಿದ್ದಾರೆ. ಆರ್ಮುಗಂ ರವಿಶಂಕರ್ ಮತ್ತೆ ಆಕ್ಷನ್ ಕಟ್ ಹೇಳ್ತಿರೋದು ಯಾವ್ ಹೀರೋಗೆ ಅಂದ್ಕೊಂಡ್ರಿ. ಬೇರಾರು ಅಲ್ಲ ರೀ. ತನ್ನ ಮನಿಗೆ ನಿರ್ದೇಶನ ಮಾಡ್ತಾರೆ ಅಪ್ಪ ರವಿಶಂಕರ್. ರವಿಶಂಕರ್ ಗೆ ಅದ್ವೆ ಅನ್ನೋ ಸರದ್ರೂಪಿ ಮಗನಿದ್ದಾರೆ. ವಿಧ್ಯಾಬ್ಯಾಸ ಮುಗಿಸಿ ವಿದೇಶದಲ್ಲಿ ನಟನಾ ತರಬೇತಿ ಪಡೆದು ಬಂದಿರೋ ಈ ಆರಡಿ ಎತ್ತರದ ಅದ್ವೆಯನ್ನ ಬಣ್ಣದ ಜಗತ್ತಿಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ ರವಿಶಂಕರ್. ಅದ್ವೆಗೆ ಸಿನಿಮಾ ಜಗತ್ತಿನ ಪರಿಚಯ ಚನ್ನಾಗಿದೆ. ತಾತ ಪಿ.ಜೆ ಶರ್ಮಾ ನಟನಾಗಿದ್ದವ್ರು.
ಚಿಕ್ಕಪ್ಪ ಸಾಯಿ ಕುಮಾರ್, ಹಾಗು ಅಯ್ಯಪ್ಪ ಕೂಡ ಕಲಾವಿಧರು. ಅಪ್ಪ ರವಿಶಂಕರ್ ಅದೇ ಕ್ಷೇತ್ರದವರೇ. ಅದ್ಮೇಲೆ ಕಲೆಯ ಯೂನಿವರ್ಸಿಟಿ ಮನೆಯಲ್ಲೇ ಇದೆ. ಈಗ ಇದೇ ಯುನಿವರ್ಸಿಟಿಯಲ್ಲಿ ಓದಿ ಅದ್ವೆ ಹಿರೋ ಆಗ್ತಿದ್ದಾರೆ. ಅದ್ವೆಯ ಮೊದಲ ಸಿನಿಮಾಗೆ ಸುಬ್ರಹ್ಮಣ್ಯ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಮಗ ಸಿನಿಮಾಗೆ ನಿರ್ದೇಶನ ಮಾಡ್ತಿರೋ ರವಿಶಂಕರ್ 20 ವರ್ಷದ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರನ್ನ ದುರ್ಗಿ ಮಾಡಿದ್ರು. ಇದು ರವಿಶಂಕರ್ ನಿರ್ದೇಶನದ ಫಸ್ಟ್ ಡೈರೆಕ್ಷನ್ ಸಿನಿಮಾ. ದುರ್ಗಿ ಸಿನಿಮಾ ಹಿಟ್ ಆಗಿ ತೆಲುಗಿಗೆ ರಿಮೇಕ್ ಆಗಿತ್ತು.
Jailer ನರಸಿಂಹನ ಪಾತ್ರವೇ ಸಿನಿಮಾ ಆಗುತ್ತಾ?: ಶಿವಣ್ಣನ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?
ಆದ್ರೆ ಈ ಸಿನಿಮಾವೇ ರವಿಶಂಕರ್ ನಿರ್ದೇಶನದ ಕೊನೆ ಚಿತ್ರವಾಗಿತ್ತು. ಈಗ ಮಗನ ಸಿನಿಮಾ ಮೂಲಕ ಮತ್ತೆ ರವಿಶಂಕರ್ ಡೈರೆಕ್ಷನ್ಗೆ ಕಮ್ ಬ್ಯಾಕ್ ಆಗಿದ್ದಾರೆ. ಅದ್ವಿ ಡೆಬ್ಯೂ ಆಗ್ತಿರೋ ಸುಬ್ರಹ್ಮಣ್ಯ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಿಕ್ತಿದೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸುಬ್ರಹ್ಮಣ್ಯ ಸಿನಿಮಾ ಸಿದ್ಧವಾಗ್ತಿದೆ.