ನರಸಿಂಹ ಪಾತ್ರದ ಪ್ರಭಾವ ಹೇಗಿದೆ ಅಂದ್ರೆ ಅದೆ ಟೈಟಲ್ನಲ್ಲಿ ಇದೀಗ ಶಿವಣ್ಣನ ಮುಂದಿನ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಶಿವಣ್ಣನ ಮುಂದಿನ ಸಿನಿಮಾಗೆ ನರಸಿಂಹ ಟೈಟಲ್ ಇಟ್ಟರೂ ಇಡಬಹುದು.
ಜೈಲರ್ ಸಿನಿಮಾ ನೋಡಿದ ಯಾರೆ ಆದರೂ ಮೊದಲು ಇಂಪ್ರೆಸ್ ಆಗೋದೆ ಶಿವಣ್ಣನನ್ನು ನೋಡಿ. ಜೈಲರ್ ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾನೆ ಆದರೂ , ಅದು 10 ನಿಮಿಷದ ಕ್ಯಾರೆಕ್ಟರ್ ಆದರೂ ಜನ ಶಿವಣ್ಣನ ನರಸಿಂಹ ಕ್ಯಾರೆಕ್ಟರ್ ಗೆ ಫುಲ್ ಮಾರ್ಕ್ಸ್ ಕೊಟ್ಟುಬಿಟ್ಟಿದ್ದರು. ಶಿವಣ್ಣನ ಮೊದಲ ತಮಿಳು ಚಿತ್ರರಂಗದ ಎಂಟ್ರಿಯಂತೂ ಭರ್ಜರಿಯಾಗಿತ್ತು. ಶಿವಣ್ಣನಿಗೆ ಈಗ ಎಲ್ಲಿ ನೋಡಿದ್ರೂ ತಮಿಳು ಹಿಂದಿ ಫ್ಯಾನ್ಸ್ ಜಾಸ್ತಿಯಾಗಿ ಬಿಟ್ಟಿದ್ದಾರೆ. ಜೈಲರ್ ಎಫೆಕ್ಟ್.
ನರಸಿಂಹ ಪಾತ್ರದ ಪ್ರಭಾವ ಹೇಗಿದೆ ಅಂದ್ರೆ ಅದೆ ಟೈಟಲ್ನಲ್ಲಿ ಇದೀಗ ಶಿವಣ್ಣನ ಮುಂದಿನ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಶಿವಣ್ಣನ ಮುಂದಿನ ಸಿನಿಮಾಗೆ ನರಸಿಂಹ ಟೈಟಲ್ ಇಟ್ಟರೂ ಇಡಬಹುದು. ಈ ಬಗ್ಗೆ ಶಿವಣ್ಣ ಸಂದರ್ಶನವೊಂದರಲ್ಲಿ ಮಾತನಾಡಿದ್ದು ನಿರ್ದೇಶಕ ನೆಲ್ಸನ್ ಮಾಡ್ತಾರೆ ಅಂದರೆ ನನಗೆ ಅಭ್ಯಂತರವಿಲ್ಲ ಎಂದು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಹಾಗೆ ನೋಡಿದ್ರೆ ಇದೀಗ ಶಿವಣ್ಣನ ಜವಾಬ್ದಾರಿ ಹೆಚ್ಚಾಗಿಗೆ. ಘೋಸ್ಟ್ ರಿಲೀಸ್ ಆಗಿದ್ದು.
ಮತ್ತೊಮ್ಮೆ ಶಿವಣ್ಣನಿಗೆ ಗ್ಯಾಂಗ್ಸ್ಟರ್ ಪಾತ್ರಗಳಿಗೆ ಡಿಮ್ಯಾಂಡ್ ಇನ್ನೂ ಹೆಚ್ಚಾಗಿದೆ. ಶಿವಣ್ಣನ ಗ್ಯಾಂಗ್ಸ್ಟರ್ ಪಾತ್ರಕ್ಕೆ ಕಳೆ ಹೆಚ್ಚಿದ್ದೆ ಓಂ ಸಿನಿಮಾದ ಸತ್ಯ ಕ್ಯಾರೆಕ್ಟರ್. ಶಿವಣ್ಣ ಲಾಂಗ್ ಹಿಡಿದ್ರೆ ಸಾಕು ಸಿನಿಮಾ ಹಿಟ್ ಅನ್ನೋ ನಂಬಿಕೆ ಜಾಸ್ತಿಯಾಗಿದ್ದು ಜೋಗಿ ಸಿನಿಮಾದಿಂದಿಂದ. ಹಳ್ಳೀಯಿಂದ ಬಂದು ದಿಲ್ಲೀಗೆ ಗ್ಯಾಂಗ್ ಸ್ಟರ್ ಆಗೋ ಹೀರೋ ಕತೆಗಳಲ್ಲಿ ಮತ್ತೊಮ್ಮೆ ಶಿವಣ್ಣನನ್ನು ಜನ ಒಪ್ಪಿಕೊಂಡಿದ್ದು ಇದೇ ಜೋಗಿ ಸಿನಿಮಾದಿಂದ. ದುನಿಯಾ ಸೂರಿ ಕೂಡ ಶಿವಣ್ಣನ ಮೇಲೆ ಈ ಡಕ್ಸ್ಪರಿಮೆಂಟ್ ಮಾಡಿ ಗೆದ್ದಿದ್ರು.ಕಡ್ಡಿಪುಡಿ ಅದಕ್ಕೊಂದು ಎಕ್ಸಾಂಪಲ್.
ಯುವ ದಸರಾಗೆ ರಂಗು ತಂದ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ
ಇಲ್ಲೂ ರೌಡಿಸಂ ಕಥೆ ಇತ್ತು. ಶಿವರಾಜ್ ಕುಮಾರ್ ಇಲ್ಲೂ ಲಾಂಗ್ ಹಿಡಿದು ಅಬ್ಬರಿಸಿದ್ದರು. ತಣ್ಣನೆಯ ಗ್ಯಾಂಗ್ಸ್ಟರ್ ಕಣ್ಣಲ್ಲೆ ಫೈರ್ ತೋರಿಸಬಲ್ಲ ಕ್ಯಾರೆಕ್ಟರ್ ಅದು ಬೈರತಿ ರಣಗಲ್ ಕ್ಯಾರೆಕ್ಟರ್ ಮಫ್ತಿ ಚಿತ್ರದಲ್ಲಿರೋ ಶಿವಣ್ಣನ ಪಾತ್ರ ಇವತ್ತಿಗೂ ಅವ್ರ ಫ್ಯಾನ್ಸ್ ಫೇವರಿಟ್. ಇದೀಗ ಮಫ್ತಿ ಮುಂದುವರಿದ ಭಾಗ ಭೈರತಿ ರಣಗಲ್ ಕ್ಯಾರೆಕ್ಟರ್ ಮೇಲೇನೆ ಇದರ ಪ್ರೀಕ್ವೆಲ್ ಸಿನಿಮಾ ಬರ್ತಿದೆ. ಇದೀಗ ನರಸಿಂಹ ಟೈಟಲ್ನಲ್ಲೆ ಸಿನಿಮಾ ಬಂದ್ರೂ ಅಚ್ಚರಿಯಿಲ್ಲ. ಸದ್ಯ ಘೋಸ್ಟ್ ಫೀವರ್ನಲ್ಲಿ ಮುಳುಗಿದೆ ಶಿವಣ್ಣನ ಫ್ಯಾನ್ಸ್.