ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿಬಿಟ್ಟ ರವಿಚಂದ್ರನ್; ಕೂದಲು ಮುಖ ಮುಚ್ಚುತ್ತಿತ್ತು ಅಂತ ಶಕುನಿ ಬಿಟ್ರಾ?

ಯಾಕೆ ಸಿನಿಮಾ ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿದ್ರು ರವಿಚಂದ್ರನ್. ಕೋಟಿರಾಮು ನಿರ್ಮಾಣದ ಶಕುನಿ ಸಿನಿಮಾದಲ್ಲಿ ನಿಜಕ್ಕೂ ಏನ್ ಆಯ್ತು? 


ಸ್ಯಾಂಡಲ್‌ವುಡ್‌ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಅಂದ್ರೆ ಎನೋ ಒಂದು ವಿಭನ್ನತೆಯಿಂದ ಕೂಡಿರುತ್ತದೆ. ಹಾಡುಗಳು ಸೂಪರ್ ಹಿಟ್ ಆಗಲೇಬೇಕು. ನಾವು ಇಮ್ಯಾಜಿನ್‌ ಮಾಡಿರುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿಲ್ಲ ಅಂದ್ರೆ ಮತ್ತೆ ರೀ-ಶೂಟ್ ಮಾಡುತ್ತಾರೆ. ಆದರೆ ಶೇ 40ರಷ್ಟು ಸಿನಿಮಾ ಚಿತ್ರೀಕರಣ ಮುಗಿಸಿ ಅದನ್ನು ಅಲ್ಲಿಗೆ ಬಿಟ್ಟಿದ್ದು ಏಕೈಕ ಸಿನಿಮಾ ಶಕುನಿ. ಯಾಕೆ ನಿಲ್ಲಿಸಿದ್ದು? ಮಾಲಾಶ್ರೀ ಪತಿ ನಿರ್ಮಾಪಕ ರಾಮು ಏನ್ ಹೇಳಿದ್ರು ಎಂದು ಸಂಪೂರ್ಣ ಮಾಹಿತಿ ಇಲ್ಲಿದೆ. 

'ನಾನು ರಾಮು ಬ್ಯಾನರ್‌ಗೆ ಮೊದಲು ಒಪ್ಪಿಕೊಂಡಿದ್ದು ಶಕುನಿ ಸಿನಿಮಾ. ಅಂದಾಜು 40% ಸಿನಿಮಾ ಶೂಟಿಂಗ್ ನಡೆದಿತ್ತು. ಅದೇನ್ ಆಯ್ತು ಗೊತ್ತಿಲ್ಲ ಇದ್ದಕ್ಕಿದ್ದಂತೆ ಇಂದು ದಿನ ರಾಮು ನಮ್ಮ ಮನೆಗೆ ಬಂದರು. ಸರ್ ನಂಗ್ಯಾಕೋ ನಿಮ್ಮ ಈ ಗೆಟಪ್ಪೇ ಇಷ್ಟ ಆಗುತ್ತಿಲ್ಲ ಅಂದುಬಿಟ್ಟರು. ಅಯ್ಯೋ ಆಗಲೇ 40% ಶೂಟಿಂಗ್ ಆಗಿದೆ ಈಗ ಗೆಟಪ್ ಇಷ್ಟ ಆಗ್ತಿಲ್ಲ ಅಂದ್ರೆ ಏನು ಮಾಡಲಿ ಅಂತ ರಾಮುಗೆ ಕೇಳಿದೆ. ಏನೋ ಗೊತ್ತಿಲ್ಲ ಸರ್ ನಿಮ್ಮ ಗೆಟಪ್ಪೇ ಇಷ್ಟ ಆಗುತ್ತಿಲ್ಲ ನೀವೇನೋ ಕೂದಲೆಲ್ಲಾ ಮುಖದ ಮೇಲೆ ಬಿಟ್ಕೋಂಡಿದ್ದೀರಾ ಇಷ್ಟ ಆಗ್ತಾನೇ ಇಲ್ಲ ಅಂದ್ರು. ಅಲ್ಲಿಗೆ ಶಕುನಿಯನ್ಉ ತೆಗೆದು ಒಳಗೆ ಹಾಕಿದೆ' ಎಂದು ಖಾಸಗಿ ಸಂದರ್ಶನದಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ.

Latest Videos

ನಾವು ದುಬಾರಿ ಕಾರಿನಲ್ಲಿ ಓಡಾಡಬೇಕು ದೊಡ್ಡ ಶ್ರೀಮಂತರು ಅಂತ ತೋರಿಸಿಕೊಳ್ಳುವುದು ನಿಲ್ಲಿಸಬೇಕು: ನಟಿ ಸೋನು ಗೌಡ

'ನಾನೊಂದು ಸಿಇಮಾ ಮಾಡಿಕೊಡುತ್ತೀನ ಅದನ್ನು ನನ್ನಿಷ್ಟಕ್ಕೆ ಬಿಟ್ಟುಬಿಡಿ ಆಗ ಮಲ್ಲ ಬೆರೆಯೋಕೆ ಶುರು ಮಾಡಿದೆ. ಫಸ್ಟ್ ಬರೆದದ್ದು ಏನೆಂದರೆ ಅದಕ್ಕಿಂತ ಗೆಟಪ್ ಕೆಟ್ಟದಾಗಿ ಇರಬೇಕು ಎಂದು ಫುಲ್ ಮುಖ ಮುಚ್ಚಿದೆ. ಮೊದಲು ಮುಖ ಮುಚ್ಚಿದ ಗೆಪಟ್‌ನಲ್ಲಿ ಬಂದು ಆಮೇಲೆ ಒರಿಜಿನಲ್ ಗೆಟಪ್‌ನಲ್ಲಿ ಬರ್ತೀನಿ ಅಂತ ರಾಮುಗೆ ಹೇಳಿ ಮಲ್ಲ ಸಿನಿಮಾ ಮಾಡಿದೆ. ನನಗೆ ರಾಮಾಚಾರಿ ಸಿನಿಮಾದಲ್ಲಿ ಮಾಲಾಶ್ರೀ ಹೇಗೆ ಸಕ್ಸಸ್ ತಂದುಕೊಟ್ಟಳೋ ಅದಕ್ಕೆ ಅವರಿಗೆ ಋಣ ತೀರಿಸಲು ಮಲ್ಲ ಸಿನಿಮಾ ಕಾರಣವಾಯ್ತು' ಎಂದು ರವಿಚಂದ್ರನ್ ಹೇಳಿದ್ದಾರೆ.

ಕೀಮೋದಿಂದ ಕೂದಲು ಉದುರುತ್ತೆ ಅನ್ನೋ ಭಯ ಇತ್ತು, ಅರ್ಜುನ್ ಜನ್ಯ ಅತ್ಬಿಟ್ರು: ಶಿವರಾಜ್‌ಕುಮಾರ್

click me!