ಸೋನು ಗೌಡ ಕೊಟ್ಟಿರುವ ಸಲಹೆಗಳನ್ನು ನೀವು ಸಿಕ್ಕಾಪಟ್ಟೆ ಸೀರಿಯಸ್ ಆಗಿ ಸ್ವೀಕರಿಸಿಬಿಟ್ಟರೆ ಖಂಡಿತ ಹಣ ಸೇವ್ ಮಾಡುತ್ತೀರಿ.
ಕನ್ನಡ ಚಿತ್ರರಂಗದ ಸಿಂಪಲ್ ಸುಂದರಿ ಸೋನು ಶ್ರೀನಿವಾಸ್ ಗೌಡ ತಮ್ಮ ಸಹ ಕಲಾವಿದರಿಗೆ ಅರ್ಥಿಕವಾಗಿ ಸ್ಟ್ರಾಂಗ್ ಆಗುವುದು ಎಂದು ಮುಖ್ಯ ಎಂದು ಹಂಚಿಕೊಂಡಿದ್ದಾರೆ. ಜನರು ಎಲ್ಲಿ ಎಡವುತ್ತಿದ್ದಾರೆ, ಕಲಾವಿದರಾಗಿ ನಾವು ಹೇಗೆ ಬದುಕಬೇಕು, ಇಂಡಸ್ಟ್ರಿ ಹೇಗಿದೆ ಎಂದಿದ್ದಾರೆ.
'ಜನರಲ್ಲಿ ತಪ್ಪು ಕಲ್ಪನೆ ಇದೆ, ಕಲಾವಿದರು, ನಟ ಹಾಗೂ ನಟಿಯರು ಸದಾ ದುಬಾರಿ ಕಾರುಗಳಲ್ಲಿ ಓಡಾಡಬೇಕು ಸಿರಿವಂತರಂತೆ ಕಾಣಬೇಕು ಎಂದು.ದಯವಿಟ್ಟು ಆ ಕಲ್ಪನೆಯನ್ನು ಪಕ್ಕಕ್ಕಿಟ್ಟು ಜೀವನ ಮಾಡಲು ಶುರು ಮಾಡಿ. ಪ್ರೇಕ್ಷಕರ ಮೆಚ್ಚುಗೆನೆ ನಾವು ಪಡೆಯುವ ಅತಿ ದೊಡ್ಡ ಬಹುಮಾನ. ಮತ್ತೊಬ್ಬರನ್ನು ಮೆಚ್ಚಿಸಲು ದುಬಾರಿ ಕಾರು ಇರಬೇಕು ಅಥವಾ ಈ ರೀತಿನೇ ಕಾಣಿಸಿಕೊಳ್ಳಬೇಕು ಅನ್ನೋ ಆಲೋಚನೆಯನ್ನು ತೆಗೆದು ಹಾಕಿ. ನಾವು ಶ್ರೀಮಂತರ ಎಂದು ಜನರನ್ನು ನಂಬಿಸುವ ಪ್ರಯತ್ನದಿಂದ ಹೊರ ಬರಬೇಕು. ಈಗ ನೀವು ದುಬಾರಿ ಸ್ಪೋರ್ಟ್ಸ್ ಕಾರು ಮೇಲೆ ಆಸೆ ಇದ್ರೆ ಖರೀದಿಸಿ ಆದರೆ ಶೋರೂಮ್‌ನಿಂದ ಹೊರ ಬರುತ್ತಿದ್ದಂತೆ ಅದ ಬೆಲೆ ಕಡಿಮೆಯಾಗುತ್ತದೆ. ಲಾಂಗ್‌ರನ್‌ನಲ್ಲಿ ನೀವು ಶ್ರೀಮಂತರಾಗಿ ಕಾಣಿಸಿಕೊಳ್ಳಬೇಕು ಅನ್ನೋ ಐಡಿಯಾ ಅಲ್ಲಿಗೆ ನಿಲ್ಲುತ್ತದೆ. ಹೀಗಾಗಿ ನಿಮ್ಮ ಅರ್ಥಿಕ ಸ್ಥಿತಿಯನ್ನು ನೀವೇ ಪ್ಲಾನ್ ಮಾಡಬೇಕು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸೋನು ಗೌಡ ಮಾತನಾಡಿದ್ದಾರೆ.
ಕೀಮೋದಿಂದ ಕೂದಲು ಉದುರುತ್ತೆ ಅನ್ನೋ ಭಯ ಇತ್ತು, ಅರ್ಜುನ್ ಜನ್ಯ ಅತ್ಬಿಟ್ರು: ಶಿವರಾಜ್‌ಕುಮಾರ್
'ಈಗ ನಾನು ಹಿರಿಯ ಕಲಾವಿದರು ಇತರ ಕಲಾವಿದರ ಬಳಿ ಅಥವಾ ಸಿನಿಮಾ ಚೇಂಬರ್‌ನಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವುದನ್ನು ನೋಡಬಹುದು. ಹಲವು ವರ್ಷಗಳ ಹಿಂದೆ ಇಂಡಸ್ಟ್ರಿ ತುಂಬಾ ಚಿಕ್ಕದಾಗಿತ್ತು ಹಾಗೂ ಕಡಿಮೆ ಕಲಾವಿದರಿದ್ದರು ಹೀಗಾಗಿ ಒಂದಲ್ಲ ಒಂದು ಸಿನಿಮಾದಲ್ಲಿ ಕೆಲಸ ಸಿಗುತ್ತದೆ ಅಂದುಕೊಂಡಿದ್ದರು. ಆದರೆ ಈಗ ಇಂಡಸ್ಟ್ರಿ ದೊಡ್ಡದಾಗುತ್ತಿದ್ದಂತೆ ಹೊಸಬರು ಬರಲು ಶುರು ಮಾಡಿದ್ದಾರೆ. ನನ್ನ ತಂದೆ ರಾಮಕೃಷ್ಣರವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು, ಎರಡು ಶಿಫ್ಟ್‌ನಲ್ಲಿ ಎರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ವಿದೇಶ ಪ್ರಯಾಣ ಮಾಡಿ ಬಂದಾಗ 2000ರಲ್ಲಿ ಅವಕಾಶವೇ ಇರಲಿಲ್ಲ ಆಗ ನಮ್ಮ ಹೂಡಿಕೆಗಳು ಮತ್ತು ಸೇವಿಂಗ್ ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡರು' ಎಂದು ಸೋನು ಗೌಡ ಹೇಳಿದ್ದಾರೆ.
ನಾವು ಶೇರ್ ಮಾಡುವ ಬಾಂಡಿಂಗ್ ಬೇರೆ; ರಚಿತಾ ರಾಮ್ ಜೊತೆ ಮದುವೆ ಅನ್ನೋರಿಗೆ ಕ್ಲಾರಿಟಿ ಕೊಟ್ಟ ಧನ್ವೀರ್!