ಡಬ್ಬಿಂಗ್‌ನಲ್ಲಿ ಯಾವತ್ತೂ ಇಷ್ಟುಕಷ್ಟಅನುಭವಿಸಿರಲಿಲ್ಲ: ರವಿಶಂಕರ್‌

By Kannadaprabha NewsFirst Published Sep 23, 2021, 9:21 AM IST
Highlights

ಬಯಲುಸೀಮೆ ಚಿತ್ರಕ್ಕೆ ಉತ್ತರ ಕರ್ನಾಟಕ ಸೊಗಡಿನ ಭಾಷೆಯಲ್ಲಿ ಡಬ್ಬಿಂಗ್ ಮುಗಿಸಿದ ನಟ ರವಿಶಂಕರ್. 

‘ಈವರೆಗೆ 4000ಕ್ಕೂ ಅಧಿಕ ಸಿನಿಮಾಗಳಿಗೆ ಡಬ್ಬಿಂಗ್‌ ಮಾಡಿದ್ದೀನಿ. ಆದರೆ ಈ ‘ಬಯಲುಸೀಮೆ’ ಚಿತ್ರದ ಡಬ್ಬಿಂಗ್‌ನಷ್ಟುಯಾವುದೂ ಕಷ್ಟವಾಗಿರಲಿಲ್ಲ’ ಎಂದು ನಟ ರವಿಶಂಕರ್‌ ಹೇಳಿದ್ದಾರೆ. ಅವರಿಗೆ ಈ ಮಟ್ಟಿಗೆ ಕಷ್ಟವಾಗಲು ಕಾರಣ ಉತ್ತರ ಕರ್ನಾಟಕ ಸೊಗಡಿನ ಭಾಷೆ.

‘ಬಹಳ ವೇಗವಾಗಿ ಡಬ್ಬಿಂಗ್‌ ಮುಗಿಸೋ ಅಭ್ಯಾಸ ನನ್ನದು. ಆದರೆ ನನ್ನ ಈವರೆಗಿನ ಡಬ್ಬಿಂಗ್‌ ಕೆರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ‘ಬಯಲುಸೀಮೆ’ ಚಿತ್ರದ ನನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡಲು ನಾಲ್ಕು ದಿನ ತೆಗೆದುಕೊಳ್ಳುತ್ತಿದ್ದೇನೆ. ಇಲ್ಲಿನ ಉತ್ತರ ಕರ್ನಾಟಕ ಭಾಷೆಯ ಫಿನಿಷಿಂಗ್‌ ಕಷ್ಟ, ಅಷ್ಟೇ ಸುಂದರ. ಅದಕ್ಕಾಗಿ ಕಷ್ಟಪಡುತ್ತಿದ್ದೇನೆ. ಈ ಚಿತ್ರದಲ್ಲಿ ನನ್ನದು ಆರ್ಭಟವಿಲ್ಲದ, ನಾಗಾಭರಣ ಅವರ ಎದುರಾಳಿ ಶಂಕರ್‌ ಅಣ್ಣಾವರ್‌ ಎಂಬ ಪಾತ್ರ’ ಎನ್ನುತ್ತಾರೆ ರವಿಶಂಕರ್‌.

ಕಾಣೆಯಾದವರ ಪ್ರಕಟಣೆಯಲ್ಲಿ ರವಿಶಂಕರ್!

‘ಬಯಲು ಸೀಮೆ’ ಚಿತ್ರದ ಶೂಟಿಂಗ್‌ ಬಹುತೇಕ ಮುಗಿದಿದೆ. ಇಡೀ ಚಿತ್ರವನ್ನು ಉತ್ತರ ಕರ್ನಾಟಕದ ಗಜೇಂದ್ರಗಡದ ಕೋಟೆ, ಊರಿನಲ್ಲಿ ಚಿತ್ರೀಕರಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ವರುಣ್‌ ಕಟ್ಟೀಮನಿ, ನಿರ್ಮಾಪಕ ಶ್ರೀಧರ್‌ ಬಿದರಳ್ಳಿ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಹಾಗೂ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.

 

click me!