‘ಪಾರು’ ಧಾರಾವಾಹಿಯ ಪಾತ್ರಧಾರಿ ಸಿದ್ದು ಮೂಲಿಮನಿ ಅವರ ಕ್ಯಾರೆಕ್ಟರ್ ಪೋಸ್ಟರ್ ಅನ್ನು ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರತಂಡ ಬಿಡುಗಡೆ ಮಾಡಿದೆ. ವಿಚಿತ್ರವಾಗಿರುವ ಈ ಪೋಸ್ಟರ್‌ನಲ್ಲಿ ಪಾತ್ರದ ಕಣ್ಣುಗಳು ಮೃಗದಂತಿದ್ದು, ನಾಲಿಗೆಯಲ್ಲಿ ಡೈನೋಸಾರ್, ವಿಮಾನ, ಹುಡುಗರ ಚಿತ್ರವಿದೆ.
ಚಿತ್ರದಲ್ಲಿ ಪ್ಯಾರಚ್ಯೂಟ್ ಪಾತ್ರದಲ್ಲಿ ಸಿದ್ದು ಕಾಣಿಸಿಕೊಳ್ಳಲಿದ್ದಾರೆ. ಬತ್‌ರ್ ಡೇ ಹಿನ್ನೆಲೆಯಲ್ಲಿ ಈ ಪೋಸ್ಟರ್ ಬಿಡುಗಡೆಯಾಗಿದೆ. ಇವರ ನಟನೆಯ ಧಮಾಕ, ವಿಕ್ರಾಂತ ರೋಣ ಚಿತ್ರಗಳೂ ಪೋಸ್ಟರ್ ಬಿಡುಗಡೆ ಮಾಡಿವೆ.
ಡಾರ್ಲಿಂಗ್ ಕೃಷ್ಣ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ
ನಟಿ ಐಶಾನಿ ಶೆಟ್ಟಿಈ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆಯೇ ಎಂದು ಅಚ್ಚರಿಪಡುವಂತಿತ್ತು ಈ ಹಿಂದಿನ ಚಿತ್ರದ ಪೋಸ್ಟರ್. ಇದು ಶ್ರೀಧರ್ ಶಿಕಾರಿಪುರ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್. ಈ ಚಿತ್ರದಲ್ಲಿ ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಮೂರು ಪಾತ್ರಗಳು ಹೇಗಿರಲಿವೆ ಎಂಬುದನ್ನು ಪೋಸ್ಟರ್ ಹೇಳುವಂತಿತ್ತು.
ಕಾಲೇಜಿಗೆ ಹೋಗುವ ಹುಡುಗಿ, ಟಾಮ್ ಬಾಯ್ ಲುಕ್ಕು, ಸ್ಮೋಕ್ ಮಾಡುವ ಹುಡುಗಿ... ಹೀಗೆ ಮೂರು ರೀತಿಯ ಪಾತ್ರಗಳ ಲುಕ್ಕು ಒಳಗೊಂಡ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಪೋಸ್ಟರ್ ಸಾಕಷ್ಟುಕುತೂಹಲ ಮೂಡಿಸಿತ್ತು. ಈ ಚಿತ್ರವನ್ನು ಓಂಕಾರ್ ನಿರ್ಮಿಸಿದ್ದಾರೆ. ವೀರೇಂದ್ರ ಕಂಚನ್, ಕೆ ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಈ ಚಿತ್ರಕ್ಕಿದೆ. ಈಗ ಹೊಸ ಪೋಸ್ಟರ್ ಕೂಡಾ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.